ನಾನು ರಾಜ್ಯ ಸರಕಾರಕ್ಕೆ ಯಾವುದೇ ಸಚಿವ ಸ್ಥಾನಕ್ಕೆ ಲಾಭಿ ಮಾಡಿಲ್ಲಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೇಳಿದ್ದೇನೆ….!!! ಮಾರುತಿ ನಗರದ ನಿವಾಸಿಗರ ನಿರ್ಧಾರಕ್ಕೆ ಶ್ಲಾಘನೀಯವಾದದ್ದು: ಎ.ಎಸ್.ಪಾಟೀಲ ನಡಹಳ್ಳಿ

ವರದಿ: ಚೇತನ ರೇ ಕೆಂದೂಳಿ,ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ನ.13:

ನನಗೆ ಅಧಿಕಾರದ ಆಸೆ ಇಲ್ಲಾ. ಇದಕ್ಕಾಗಿ ರಾಜ್ಯ ಸರಕಾರದಲ್ಲಿ ನಾನು ಯಾವುದೇ ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿಲ್ಲ. ನನ್ನ ಕ್ಷೇತ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮಾತ್ರ ಮುಖ್ಯಮಂತ್ರಿಗಳಿಗೆ ನಾನು ಮನವಿ ಮಾಡುತ್ತಿದ್ದೇನೆ ಎಂದು ಶಾಸಕ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.



ಮಾರುತಿನಗರದ ಗಾರ್ಡನ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಿಸಿ ಕ್ಯಾಮರಾ ಅಳವಡಿಕೆ ಚರ್ಚೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಜನರಿಗೆ ಅಗತ್ಯವಾದ ಮೂಲ ಸೌಕರ್ಯಗಳ ನೀಡುವಲ್ಲಿ ಈಗಾಗಲೇ ಪುರಸಭೆ ಸಜ್ಜಾಗಿದೆ. ಸರಕಾರದ ಆಸ್ತಿ ಯಾರದೊ ಪಾಲಾಗಿದೆ. ಇದರಲ್ಲಿ ಹಿಂದಿನ ಪುರಸಭೆ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿಗಳ ಮೇಲೆಕ್ರಮಿನಲ್ ಕೇಸ್ ದಾಖಲಾಗುವ ಸಾದ್ಯತೆಗಳು ಹೆಚ್ಚಿವೆ ಎಂದು ಅವರು ಹೇಳಿದರು.
ಪಟ್ಟಣಗಳಲ್ಲಿ ಸಿಸಿ ಟಿವಿ ಅಳವಡಿಕೆ ಮಾಡುವುದರಿಂದ ಅಕ್ರಮಗಳನ್ನು ತಡೆಗಟ್ಟಬಹುದು. ಇದಕ್ಕೆ ಸಾರ್ವಜನಿಕರೆ ಮುಂದಾಗಿರುವುದು ನನಗೆ ತುಂಬ ಖುಷಿ ತಂದಿದೆ. ಮಾರುತಿ ನಗರದ ನಿವಾಸಿಗ ನಿರ್ಧಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕರು ಹೇಳಿದರು.



ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಪಿಎಸೈ ಮಲ್ಲಪ್ಪ ಮಡ್ಡಿ ಅವರು ಅಭಿವೃಧ್ದಿ, ಜನರ ಸಹಕಾರದ ಮಹತ್ವ ಮತ್ತು ಸಿಸಿ ಕ್ಯಾಮರಾ ಅಳವಡಿಕೆಯಿಂದ ಆಗಬಹುದಾದ ಅನುಕೂಲಗಳ ಕುರಿತು ಮಾತನಾಡಿದರು. ಪುರಸಭೆ ಮಾಜಿ ಸದಸ್ಯ ಮನೋಹರ ತುಪ್ಪದ ಅವರು ಬಡಾವಣೆಯ ಜನರ ದೇಣಿಗೆ, ಸಹಕಾರದ ಕುರಿತು ಮಾತನಾಡಿ ಈಗಾಗಲೇ ಸಂಗ್ರಹಿಸಿದ ೭೫೦೦೦ ಹಣವನ್ನು ಸಿಸಿ ಅಳವಡಿಕೆಗಾಗಿ ಹಸ್ತಾಂತರಿಸಲಿದ್ದು ಇನ್ನೂ ಹೆಚ್ಚಿನ ದೇಣಿಗೆ ಸಂಗ್ರಹ ನಡೆದಿದ್ದು ಪ್ರತಿಯೊಬ್ಬರೂ ಸಹಕರಿಸಲು ಕೋರಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷಿಂಬಾಯಿ ಹವಾಲ್ದಾರ್, ಪುರಸಭೆ ಸದಸ್ಯ ಸದಾನಂದ ಮಾಗಿ, ಹಿರಿಯರಾದ ಬಿ.ಜಿ.ಜಗ್ಗಲ್ ವಕೀಲರು ವೇದಿಕೆಯಲ್ಲಿದ್ದರು. ವಿಜಯಪುರ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಡಿ.ಬಿ.ವಡವಡಗಿ, ಸಂಗೀತ ಶೀಕ್ಷಕ ಸಂಗಮೇಶ ಶಿವಣಗಿ ಅವರನ್ನು ಹಾಗೂ ಶಾಸಕ ನಡಹಳ್ಳಿ, ಪಿಎಸೈ ಮಡ್ಡಿ ಅವರನ್ನು ಬಡಾವಣೆಯ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ವಡವಡಗಿ ಮಾತನಾಡಿದರು. ಸಿಸಿ ಅಳವಡಿಕೆಗಾಗಿ ಸಂಗ್ರಹಿಸಿದ ಹಣವನ್ನು ಹಸ್ತಾಂತರಿಸಲಾಯಿತು. ಸಿದ್ರಾಮಪ್ಪ ಬಾಣಲದಿನ್ನಿ ಸ್ವಾಗತಿಸಿದರು. ಮುಖ್ಯಾಧ್ಯಾಪಕ ಡಿ.ಎಸ್.ಚಳಗೇರಿ ನಿರೂಪಿಸಿ ವಂದಿಸಿದರು. ಬಡಾವಣೆಯ ಪ್ರಮುಖರು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*