ಜ್ಯೋತಿಬಾ ಪುಲೆ ಪ್ರಶಸ್ತಿ ಪುರಸ್ಕೃತ ಚಲವಾದಿ ಅವರಿಗೆ ಸನ್ಮಾನ…! ಪ್ರಶಸ್ತಿಗಳಿಂದ ಇನ್ನಷ್ಟು ಉತ್ತಮ ಕೆಲಸಕ್ಕೆ ಉತ್ತೇಜನ: ಕಿತ್ತೂರ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

 

ಮುದ್ದೇಬಿಹಾಳ:

ಸರ್ಕಾರ, ಸಂಘ, ಸಂಸ್ಥೆಗಳು ನೀಡುವ ಪ್ರಶಸ್ತಿ, ಸನ್ಮಾನಗಳಿಂದ ಸಮಾಜಕ್ಕೆ ಇನ್ನಷ್ಟು ಉತ್ತಮ ಕೆಲಸ ಮಾಡಲು ಪ್ರೇರಣೆ ಉತ್ತೇಜನ ಸಿಗುತ್ತದೆ ಎಂದು ಸಾಹಿತಿ ರುದ್ರೇಶ ಕಿತ್ತೂರ ಹೇಳಿದರು.



ಪಟ್ಟಣದ ಹುಡ್ಕೋ ಬಡಾವಣೆಯಲ್ಲಿ ಹಸಿರು ತೋರಣ ಉದ್ಯಾನವನದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನೀಡಿದ ಜ್ಯೋತಿ ಬಾ ಪುಲೆ, ಸಾವಿತ್ರಿಬಾಯಿ ಪುಲೆ ಜಿಲ್ಲಾ ಪ್ರಶಸ್ತಿ ಪಡೆದ ಎಲ್.ಎಂ.ಚಲವಾದಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು. ಜ್ಯೋತಿ ಬಾ ಪುಲೆ, ಸಾವಿತ್ರಿಬಾಯಿ ಪುಲೆ ದಂಪತಿಗಳು ಸಮಾಜದ ಕಟ್ಟಕಡೆಯ ಜನರಿಗೆ ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಅವರ ಆಶಯಗಳನ್ನೇ ಡಾ.ಅಂಬೇಡ್ಕರ ಅವರು ಸಂವಿಧಾನದಲ್ಲಿ ಸೇರಿಸಿ, ಎಲ್ಲರಿಗೂ ಶಿಕ್ಷಣದ ಸೌಲಭ್ಯ ಕಲ್ಪಿಸಿದರು ಎಂದವರು ಹೇಳಿದರು. ಸಭೆಯನ್ನುದ್ದೇಶಿಸಿ ತಾಲ್ಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎ.ಆರ್.ಮುಲ್ಲಾ, ಕರ್ನಾಟಕ ಕೋ. ಆಪ್ ಬ್ಯಾಂಕ್ ನರ‍್ದೇಶಕ ವೆಂಕನಗೌಡ ಪಾಟೀಲ, ಬಿ.ಎಚ್.ಬಳಬಟ್ಟಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಅಶೋಕ ರೇವಡಿ, ಸನ್ಮಾನ ಸ್ವೀಕರಿಸಿ, ಜ್ಯೋತಿ ಬಾ ಪುಲೆ, ಸಾವಿತ್ರಿಬಾಯಿ ಪುಲೆ ಜಿಲ್ಲಾ ಪ್ರಶಸ್ತಿ ಪಡೆದ, ಬಳಗದ ಉಪಾಧ್ಯಕ್ಷರೂ ಆಗಿರುವ ಎಲ್.ಎಂ.ಚಲವಾದಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಕೆ.ಆರ್.ಕಾಮಟೆ, ನಾಗಭೂಷಣ ನಾವದಗಿ ವಕೀಲರು, ಕಾರ್ಯದರ್ಶಿ ರಾಜಶೇಖರ ಕಲ್ಯಾಣಮಠ, ಜೇಸಿ ಸಂಸ್ಥೆಯ ಅಧ್ಯಕ್ಷ ರವಿ ಗೂಳಿ, ಕ್ಷತ್ರೀಯ ಒಕ್ಕೂಟ ಸಮಾಜದ ಅಧ್ಯಕ್ಷ ರಾವಸಾಹೇಬ ದೇಸಾಯಿ, ಮಾಜಿ ಅಧ್ಯಕ್ಷ ಬಸವರಾಜ ಸಿದರಡ್ಡಿ, ಹಸಿರು ತೋರಣ ಬಳಗದ ಸದಸ್ಯರಾದ ಬಿ.ಎಂ.ಪಲ್ಲೇದ, ಎಂ.ಎಸ್.ಬಾಗೇವಾಡಿ, ಬಿ.ಎಸ್.ಮೇಟಿ, ಸುರೇಶ ಕಲಾಲ, ಸುಧೀರ ಕತ್ತಿ, ಅಮರೇಶ ಗೂಳಿ, ಡಾ.ವೀರೇಶ ಇಟಗಿ, ಡಾ.ವಿಜಯಕುಮಾರ ಗೂಳಿ, ಬಿ.ಎ.ನಾಡಗೌಡ ವಕೀಲರು, ಎಚ್.ವೈ.ಪಾಟೀಲ ವಕೀಲರು, ಡಾ.ಚಂದ್ರಶೇಖರ ಶಿವಯೋಗಿಮಠ, ಜಿ.ಎಂ.ಹುಲಗಣ್ಣಿ, ವೀರೇಶ ಹಂಪನಗೌಡ್ರ, ಕಿರಣ ಪಾಟೀಲ, ಸೋಮನಾಳ, ಬಸು ಊರನ್ನವರ ಮತ್ತಿತರರು ಪಾಲ್ಗೊಂಡಿದ್ದರು.


ಶ್ರೀನಿವಾಸರಾವ ಕುಲಕರ್ಣಿ ಪ್ರಾರ್ಥಿಸಿದರು. ನಾಗಭೂಷಣ ನಾವದಗಿ ವಕೀಲರು ಸ್ವಾಗತಿಸಿದರು. ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ನಿರೂಪಿಸಿದರು. ವೀರೇಶ ಹಂಪನಗೌಡರ ವಂದಿಸಿದರು.

Be the first to comment

Leave a Reply

Your email address will not be published.


*