ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ನ.13:
ಅನೇಕ ಕಾಂದಂಬರಿಗಳು ರಚಿಸಿ ವಿವಿಧ ದಿನಪತ್ರಿಕೆಗಳಲ್ಲಿ ಸೇವೆಸಲ್ಲಿಸಿದ ರವಿ ಬೆಳಗೆರೆ ಅವರು ಯಾವುದೇ ರಾಜಕೀಯಕ್ಕೆ ಹಾಗೂ ಬೆಧರಿಕೆಗೆ ಬಗ್ಗದೇ ಸಮಾಜದ ಅಂಕುಡೊಂಕುಗಳನ್ನು ಬರವಣಿಗೆ ಮೂಲಕ ತಿದ್ದುವ ವ್ಯಕ್ತಿತ್ವ ಹೊಂದಿದವರು ಎಂದು ಮುದ್ದೇಬಿಹಾಳ ಕೌಟ್ಸ್ ಮತ್ತು ಗೈಡ್ಸ್ ಚೇರಮನ್ ಎಸ್.ಎಸ್.ಹೂಗಾರ ಹೇಳಿದರು.
ಪಟ್ಟಣದ ನ್ಯೂ ಸನ್ ಟೇಕ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಮುದ್ದೇಬಿಹಾಳ ಗೆಳೆಯರ ಬಳಗವತಿಯಿಂದ ಹಮ್ಮಿಕೊಳ್ಳಲಾದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯವನ್ನೆ ತಲೆಕೆಡೆಸಿದ ವಿಜಯಪುರ ಜಿಲ್ಲೆಯ ಭಿಮಾ ತೀರದ ಘಟನೆಯನ್ನು ತಮ್ಮ ಪತ್ರಿಕೆಯಲ್ಲಿ ಎಳಿಎಳಿಯಾಗಿ ಬರೆಯುವಲ್ಲಿ ಪೊಲೀಸ
ಇಲಾಖೆಯೊಂದಿಗೆ ತಮ್ಮ ಜೀವವನ್ನೆ ಪಣಕಿಟ್ಟ ವ್ಯಕ್ತಿತ್ವ ಅವರದು. ಅಲ್ಲದೇ ಭೀಮಾತೀರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಹಲವಾರು ಮಕ್ಕಳಿಗಾಗಿಯೇ ಬೆಂಗಳೂರಿನಲ್ಲಿ ಶಾಲೆ ಪ್ರಾರಂಭಿಸಿದ್ದು ಯಾರೂ ಮರೆಯುವಂತಿಲ್ಲ. ಇಂತಹ ವ್ಯಕ್ತಿಯನ್ನು ಕೆಳೆದುಕೊಂಡಿರುವ ರಾಜ್ಯದ ಜನತೆ ನಿಜಕ್ಕೂ ದುಖಃದಲ್ಲಿದೆ ಎಂದು ಅವರು ಹೇಳಿದರು.
ದೈಹಿಕ ಶಿಕ್ಷಕ ಶಿವಕುಮಾರ ಶಹಾಪೂರ ಮಾತನಾಡಿ, ರವಿ ಬೆಳಗೆರೆಯವರು ಕೇವಲ ಬಳ್ಳಾರಿ ಮತ್ತು ಬೆಂಗಳೂರಿಗೆ ಸಿಮಿತರಾಗಿದಿಲ್ಲ. ತಮ್ಮ ಹಾಯ್ ಬೆಂಗಳೂರು ಮೂಲಕ ರಾಜ್ಯದ ವಿವಿಧಡೆಯಲ್ಲಿ ನಡೆದ ಬ್ರಷ್ಠಾಚಾರವನ್ನು ನೇರವಾಗಿ ಪತ್ರಿಕೆಯಲ್ಲಿ ಬರೆದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡುವ ವ್ಯಕ್ತಿತ್ವ ಹೊಂದಿದ್ದರು ಎಂದು ಹೇಳಿದರು. ಕಲಾವಿದ ಹಾಗೂ ಕಿರುಚಿತ್ರ ನಿರ್ದೇಶಕ ಮುನೀರ ಅವಟಿ ಮಾತನಾಡಿದರು.
ಈ ಸಂದರ್ಭದಲ್ಲಿ ನ್ಯೂ ಸನ್‌ಟೇಕ್ ಕಂಪ್ಯೂಟರ್ ತರಬೇತಿ ಕೇಂದ್ರದ ನಾಗರಾಜ ಬಿರಾದಾರ, ಕಿರುತೆರೆ ಹಾಸ್ಯ ಕಲಾವಿದ ಗೋಪಾಲ ಹೂಗಾರ, ಯುವ ಮುಖಂಡ ಈರಣ್ಣ ಬಳಿಗಾರ, ವಿಕ್ರಮ ಬಿರಾದಾರ, ಶಿವಲೀಲಾ ಬಿರದಾರ, ಸಂಗೀತಾ ಬಾಗೇವಾಡಿ ಇದ್ದರು.
Be the first to comment