ರಾಜ್ಯ ಸುದ್ದಿಗಳು
ಮುದ್ದೇಬಿಹಾಳ ಅ19:
ರಾಜ್ಯಾದ್ಯಂತ ಮಳೆ ಅಬ್ಬರ ಅಘಾದವಾಗಿದೆ. ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತಕ್ಷೇತ್ರದದಲ್ಲಿ ಈಗಾಗಲೇ ಸುರಿದ ಮಳೆಯಿಂದ ಹಿಂಗಾರು ಬಿತ್ತನೆ ಬೆಳೆಗಳು ಕೈಗೆ ಬರುತ್ತವೆ ಎಂಬ ಆಸೆಯಿಂದ ಕುಳಿತ್ತಿದ್ದ ರೈತರಿಗೆ ಅತೀವೃಷ್ಠಿಯಾಗಿ ಬೆಳೆಗಳು ಕೈಕೊಟ್ಟಿವೆ. ಇನ್ನೂ ರಾಜ್ಯ ಸರಕಾರ ಕೂಡಲೇ ಬೆಳೆ ಸಮೀಕ್ಷೆ ಮಾಡಿ ವರದಿ ಕಳುಹಿಸಲು ಸೂಚಿಸಿದ್ದರೂ ಕೆಲ ಅಧಿಕಾರಿಗಳು ಮಾತ್ರ ಸಮೀಕ್ಷೆ ನಡೆಸುವಲ್ಲಿ ವಿಳಂಭ ಮಾಡುತ್ತಿದ್ದಾರೆ.
ಹೌದು, ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೆಳೆಹಾನಿ ಸಮೀಕ್ಷೆ ಮಾಡಬೇಕಾದ ಕಾರ್ಯವು ಸಂಪೂರ್ಣ ವಿಳಂಭವಾಗಿದೆ. ಇದರಿಂದ ಹಿಂಗಾರು ಬಿತ್ತನೆ ಮಾಡಬೇಕಾದ ರೈತರು ಬೆಳೆಹಾಣಿ ಪರಿಹಾರಕ್ಕಾಗಿ ಸಮೀಕ್ಷಾ ತಂಡಾ ಆಗಮನಕ್ಕೆ ಕಾದು ಕುಳಿತುಕೊಳ್ಳುವಂತಾಗಿದೆ. ಆದರೆ ಎರಡೂ ಇಲಾಖೆಯಲ್ಲೂ ಸಿಬ್ಬಂದಿಗಳ ಕೊರತೆ ಇದ್ದ ಕಾರಣ ವಿಳಂಭಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ರೈತರ ಆರೋಪ:
ಮುದ್ದೇಬಿಹಾಳ ತಾಲೂಕಿನ ಯರಝರಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ರೈತರು ಬೆಳೆಹಾನಿ ಸಮೀಕ್ಷೆ ಸರಿಯಾಗಿ ನಡೆಯದ ಕಾರಣ ಅಧಿಕಾರಿಗಳ ಮೇಲೆ ತಮ್ಮ ಆಕ್ರೋಶವನ್ನು ವ್ಯಕ್ತಿ ಪಡಿಸಿದ್ದಾರೆ. ಮುಂಗಾರು ಬೆಳೆಗಳೆ ಕೈಕೊಟ್ಟಿವೆ ಆದ್ದರಿಂದ ಹಿಂಗಾರು ಬಿತ್ತನೆ ಮಾಡಿ ಅದನ್ನಾದರೂ ಕೈಗೆ ಸಿಗುವಂತೆ ಮಾಡಿಕೊಳ್ಳಬೇಕು ಎಂಬ ಆಲೋಚನೆಯಲ್ಲಿದ್ದಾರೆ. ಆದರೆ ಬೆಳೆಹಾನಿ ಸಮೀಕ್ಷೆಗೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬಾರದ ಕಾರಣ ರೈತರು ಕಂಗಾಲಾಗಿದ್ದಾರೆ. ಇನ್ನೂ ರೈತರೇ ತಮ್ಮ ಬೆಳೆಹಾನಿ ಬಗ್ಗೆ ವರದಿ ನೀಡಲು ಕೃಷಿ ಇಲಾಖೆಗೆ ಹೋದರೆ ಅಲ್ಲಿನ ಗ್ರಾಮ ಸೇವಕರು ವರದಿಯನ್ನು ಗ್ರಾಮಲೆಕ್ಕಾಧಿಕಾರಿಗಳಿಗೆ ನೀಡುವಂತೆ ಹೇಳುತ್ತಿದ್ದಾರೆ. ಆದರೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿದ್ದಾರೆ ಎಂದು ಸ್ಥಳೀಯ ತಹಸೀಲ್ದಾರ ಜಿ.ಎಸ್.ಮಳಗಿ ಅವರು ತಿಳಿಸುತ್ತಿದ್ದಾರೆ. ಒಟ್ಟಿನಲ್ಲಿ ಎರಡೂ ಇಲಾಖೆ ಅಧಿಕಾರಿಗಳ ಗೊಂದಲ ವಾತಾವರಣದಲ್ಲಿ ರೈತರ ಪಾಡು ಹೇಳತೀರದಾಗಿದೆ.
Be the first to comment