ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಅ.19:
ಪಟ್ಟಣದ ಎಸ್.ಪಿ.ಶಾ. ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಪದ್ಧತಿಗೆ ಉಪಯುಕ್ತವಾಗುವಂತಹ ರಾಷ್ಟçಮಟ್ಟದ ಕಲಿಕಾ ತರಬೇತಿಯನ್ನು ಆಯೋಜಿಸಿದ್ದು ಶ್ಲಾಘನೀಯವಾದದ್ದು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತ ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಎಸ್.ಪಿ.ಶಾ. ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಪ್ರಾರಂಭವಾದ ರಾಷ್ಟ್ರಮಟ್ಟದ ಶಿಕ್ಷಕ ಕಲಿಕಾ ನಿರ್ವಹಣೆ ತರಬೇತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕಾಲೇಜಿನಲ್ಲಿ ಆನ್‌ಲೈನ್ ತರಬೇತಿ ಪ್ರಾರಂಭ ಮಾಡಿದ್ದು ಕಲಿಕಾ ಪದ್ಧತಿಯಲ್ಲಿ ದೂರದೃಷ್ಠಿ ಕೋಣವಾಗಿದೆ. ಇದನ್ನು ಮುದ್ದೇಬಿಹಾಳ ಕ್ಷೇತ್ರದ ಸರಕಾರಿ ಕಾಲೇಜಿನಲ್ಲಿ ಪ್ರಾರಂಭಿಸಿದ್ದು ನಿಜಕ್ಕೂ ಅಭಿನಂದಿಸುವAತಹದು ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎನ್.ಬಿ.ಹೊಸಮನಿ ಮಾತನಾಡಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಲಿಕಾ ನಿರ್ವಹಣೆ ಮತ್ತು ಸಂವಹನ ದೂರಶಿಕ್ಷಣ ನಿರ್ವಹಣೆಯ ಮೂಲಕ ಮಾಡುವುದು ಹೊಸ ವಿಧಾನವಾಗಿದ್ದು ಬದಲಾಗುತ್ತಿರುವ ಸಮಯಕ್ಕೆ ತಕ್ಕಂತೆ ಕಾಲೇಜು ಸಿಬ್ಬಂದಿ ಕೂಡ ವಿಶೇಷ ಪ್ರಯತ್ನ ಮಾಡಿ ರಾಷ್ಟ್ರಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿದೆ ಇದರ ಸದುಪಯೋಗವನ್ನು ಎಲ್ಲ ಶಿಕ್ಷಕ ಸಿಬ್ಬಂದಿ ಪಡೆದುಕೊಂಡು ವಿದ್ಯಾರ್ಥಿಗಳಿಗೆ ತಾಂತ್ರಿಕ ಸಂಯೋಜನೆ ಮತ್ತು ಸಂಪರ್ಕಗಳ ಮೂಲಕ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಐದು ದಿನಗಳ ರಾಷ್ಟ್ರ ಮಟ್ಟದ ಕಲಿಕಾ ತರಬೇತಿ ವ್ಯವಸ್ಥೆ ಕುರಿತು ನಡೆಯುವ ತರಬೇತಿ ಕಾರ್ಯಕ್ರಮದಲ್ಲಿ ಮುಂಬೈ ಐಐಟಿ ಸಹಯೋಗದಲ್ಲಿ ಆಯೋಜಿಸುತ್ತಿರುವ ಕಾಲೇಜು ಈ ಕುರಿತು ಅವಶ್ಯಕ ತಯಾರಿಯನ್ನು ಮಾಡಿಕೊಂಡು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲಾಯಿತು. ನ್ಯಾಕ್ ಸಂಯೋಜಕ ಸಿಕಂದರ್ ಧನ್ನೂರ ಅಂತರ್ಜಾಲ ತರಬೇತಿಯಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಮತ್ತು ತಂತ್ರಜ್ಞರಿಗೆ ಸ್ವಾಗತವನ್ನು ಕೋರಿದರು. ವ್ಯವಹಾರ ಶಾಸ್ತ್ರ ಉಪನ್ಯಾಸಕ ಪ್ರದೀಪ್ ಕೆ. ರಾಜೇಶ್ವರಿ, ಪಾತ್ರೋಟ ತಾಂತ್ರಿಕ ನಿರ್ವಹಣೆ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕ ಶಶಿಧರ್ ಕುಂಬಾರ, ಡಾ.ಎಚ್.ಎನ್.ನಾಟಿಕಾರ, ದೈಹಿಕ ನಿರ್ದೇಶಕ ಲಕ್ಷ್ಮೀಶ್.ಎಂ.ಎA, ಉಪನ್ಯಾಸಕರಾದ ಮೇಘರಾಜ್ ನಾಯಕ, ದೀಪಾ, ಮಂಜುಶ್ರೀ, ಧನಶ್ರೀ, ಶೋಭಾ.ಬಿ.ಎಸ್ ಇದ್ದರು. ಸಮಿಉಲ್ಲಾ ಮುಲ್ಲಾ ಸ್ವಾಗತಿಸಿ ವಂದಿಸಿದರು.
Be the first to comment