ಮುದ್ದೇಬಿಹಾಳ ಅ.17: ಮುದ್ದೇಬಿಹಾಳ ತಾಲೂಕಿನಲ್ಲಿ ೧೯೯೪ರಲ್ಲಿ ಮಾಡಿದಂತಹ ಪುರವಸತಿಯಲ್ಲಿ ವಾಸಿಸುವ ಕುಟುಂಬಸ್ಥರಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ಅಂದಿನ ಅಧಿಕಾರಿಗಳು ಮಾಡದ ಅಧ್ಯಾನವನ್ನು ಪ್ರಸ್ತುತದಲ್ಲಿ ಅವಲೋಕಿಸಿ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ಕೂಡಲೇ ಪುನರವಸತಿ ಕುಟುಂಬಸ್ಥರಿಗೆ ಆಗುವ ತೊಂದರೆಗಳನ್ನು ದೂರ ಮಾಡಬೇಕಿದೆ ಎಂದು ಶಾಸಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ದಾಸೋಹ ನಿಲಯದಲ್ಲಿ ಶನಿವಾರ ಕೆಬಿಜೆಎನ್‌ಎಲ್, ಅರಣ್ಯ ಹಾಗೂ ಮುಖ್ಯಾಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಪುನರವಸತಿಯಲ್ಲಿ ಜೀವನ ನೆಡೆಸುತ್ತಿರುವ ಕುಟುಂಬಸ್ಥರಿಗೆ ಸಾಕಷ್ಟು ಮೂಲ ಭೂತ ಸೌಕರ್ಯಗಳು ಇಲ್ಲವಾಗಿದೆ. ಮುದ್ದೇಬಿಹಾಳ ತಾಲೂಕಿನ ಅಕ್ಕಪಕ್ಕದಲ್ಲಿ ಎರಡು ಡ್ಯಾಂಗಳ ನಿರ್ಮಾಣವಾಗಿದ್ದು ವಿಜಯಪುರ ಜಿಲ್ಲೆಯಲ್ಲಿಯೇ ನಮ್ಮ ತಾಲೂಕು ಅತೀ ಹೆಚ್ಚು ಭೂಮಿ ಕಳೆದುಕೊಂಡಿರುವುದರಲ್ಲಿ ಪ್ರಥಮ ಸ್ಥಾನದಲ್ಲಿದೆ. ಆದರೆ ಇಂತಹ ತಾಲೂಕಿನಲ್ಲಿ ಕೇವಲ ಶೇ.೧೦ರಷ್ಟು ಮಾತ್ರ ಮೂಲ ಭೂತ ಸೌಕರ್ಯಗಳು ಕಾಣಬಹುದಾಗಿದೆ ಎಂದು ಅವರು ಹೇಳಿದರು. ಈಗಾಗಲೇ ಕೆಬಿಜೆಎನ್‌ಎಲ್ ಹಾಗೂ ಮುದ್ದೇಬಿಹಾಳ ತಾಲೂಕಿನ ಮೂವರು ಮುಖ್ಯಾಧಿಕಾರಿಗಳು ಸೇರಿದಂತೆ ಸಂಬAಧಿಸಿದ ಅಧಿಕಾರಿಗಳೊಂದಿಗೆ ತಾಲೂಕಿನ ಸಮಸ್ಯೆ ಬಗ್ಗೆ ಚರ್ಚಿಸಿದ್ದು ನಮ್ಮ ತಾಲೂಕಿನಲ್ಲಿ ನಿರ್ಲಕ್ಷಕ್ಕೆ ಒಳಗಾದ ಅಭಿವೃದ್ಧಿಯನ್ನು ಮಾಡಬೇಕು ಮತ್ತು ಅದು ಮುದ್ದೇಬಿಹಾಳ ತಾಲೂಕಿನ ಜನರ ಹಕ್ಕಾಗಿದೆ ಎಂದು ಹೇಳಿದ್ದೇನೆ ಎಂದು ಅವರು ಹೇಳಿದರು. ಉದ್ಯಾಣವನ್ನು ಕೆಬಿಜೆಎನ್‌ಎಲ್ ಇಲಾಖೆ ಅಭಿವೃದ್ಧಿ ಪಡಿಸಬೇಕು: ಈಗಾಗಲೇ ಮುದ್ದೇಬಿಹಾಳ ತಾಲೂಕಿನ ಮೂರು ಪಟ್ಟಣ ಪ್ರದೇಶಗಳಲ್ಲಿ ಅಂದಾಜು ೨೫೦ ಎಕರೆಯ ಸಾರ್ವಜನಿಕ ಆಸ್ತಿಯಾಗಿ ಬಿಟ್ಟಿದ್ದು ಇದರಲ್ಲಿ ಉದ್ಯಾಣವನಗಳನ್ನು ಕೆಬಿಜೆಎನ್‌ಎಲ್ ಇಲಾಖೆಯು ತಮ್ಮ ಹಿಡಿತಕ್ಕೆ ಪಡೆದುಕೊಂಡು ಅವುಗಳನ್ನು ಅಭಿವೃದ್ಧಿ ಪಡಿಸಬೇಕು. ನಂತರ ಅವುಗಳನ್ನು ಸಂಬAಧಿಸಿದ ಪಟ್ಟಣ ಪಂಚಾಯತಿ ಹಾಗೂ ಪುರಸಭೆಗಳಿಗೆ ಹಸ್ತಾತರಿಸಬೇಕು ಎಂದು ಅಧಿಕರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಭೂಮಿ ವಂಚಿತರಿಗೂ ಹಾಗೂ ಫಲಾನುಭವಿಗಳನ್ನು ಸಮಾನವಾಗಿರಿಸಿ: ಕ್ಷೇತ್ರದಲ್ಲಿ ಕಾಲುವೆ ನಿರ್ಮಾಣ ಮಾಡಿದ ಕ್ಷಣದಲ್ಲಿ ಒಂದು ಕುಟುಂಬವು ಕಾಲುವೆ ನೀರಿನಿಂದ ತಮ್ಮ ಜಮೀನನಲ್ಲಿ ಬೆಳೆ ಬೆಳೆದು ಉದ್ಧಾರವಾಗುತ್ತಾರೆ. ಆದರೆ ಕಾಲುವೆಗಾಗಿ ತಮ್ಮ ಜಮೀನು ಕಳೆದುಕೊಂಡ ವ್ಯಕ್ತಿಯು ಕಂಗಾಲಾಗುತ್ತಾನೆ. ಕಾಲುವೆ ನಿರ್ಮಾಣಿಸಿ ಒಬ್ಬರಿಗೆ ನೀರು ಒದಗಿಸುವುದರಿಂದ ಹಿಡಿದು ಭೂಮಿ ಕಳೆದುಕೊಂಡ ರೈತನಿಗೆ ಪರಿಹಾರ ಕೊಡುವವರೆಗೂ ಅಧಿಕಾರಿಗಳು ಸಮಾನತೆಯನ್ನು ಕಾಮಾಡಿಕೊಳ್ಳಬೇಕು. ಇದರಿಂದ ಮಾತ್ರ ಸರಕಾರದ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಶಾಸಕ ನಡಹಳ್ಳಿ ಹೇಳಿದರು. ಈ ಸಂದರ್ಭದಲ್ಲಿ ಅರಣ್ಯ ವಿಭಾಗಿ ಡಿಸಿಎಫ್ ಅಧಿಕಾರಿ ಪಿ.ಕೆ.ಪೈ, ಆಲಮಟ್ಟಿ ಉಪ ವಿಭಾಗದ ಎಸಿಎಫ್ ಅಧಿಕಾರಿ ಎನ್.ಕೆ.ಬಗಾಯತ, ರೋಡಲಬಂಡಾ ಉಪ ವಿಭಾಗದ ಎಸಿಎಫ್ ಅಧಿಕಾರಿ ಎ.ಎಸ್.ಪ್ಯಾಟಿಗೌಡ, ಆಲಮಟ್ಟಿ ಮತ್ತು ರೋಡಲಬಂಡಾ ಆರ್‌ಎಫ್‌ಓ ಮಹೇಶ ಪಾಟೀಲ, ರೋಡಲಬಂಡಾ ವಲಯದ ಡಿವಾಯ್‌ಆರ್‌ಎಫ್‌ಓ ಮೃತ್ಯುಂಜಯ ಬಿದರಕುಂದಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ತಾಳಿಕೋಟಿ ಪುರಸಭೆ ಮುಖ್ಯಾಧಿಕಾರಿ ಸಿ.ಬಿ.ಕುಲಕರ್ಣಿ, ನಾಲತವಾಡ ಮುಖ್ಯಾಧಿಕಾರಿ ಎಂ.ಆರ್.ದಾಯಿ, ಅರಣ್ಯ ನಿರೀಕ್ಷಕ ಎಂ.ಎ.ಕಟ್ಟಿಮನಿ ಇದ್ದರು.
Be the first to comment