ಮುದ್ದೇಬಿಹಾಳ ತಾಲೂಕಿನ ಕೋಳೂರ ಗ್ರಾಪಂನಲ್ಲಿ ಒಂದೇ ದಿನ ತನಿಖೆಯಲ್ಲಿ ಸಿಕ್ಕಿಬಿದ್ದ ಬ್ರಷ್ಠಾಚಾರ: ನೌಕರಸ್ಥ ಕುಟುಂಬಕ್ಕೆ ಮಂಜೂರಾದ ಸರಕಾರಿ ವಸತಿ ಯೋಜನೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ ಅ.16 :
2014-15 ರಿಂದ 2019-20ನೇ ಸಾಲಿನವರೆಗೂ ಬಸವ ವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ ಹಾಗೂ ಇಂದಿರಾ ಆವಾಸ ಯೋಜನೆಗಳಲ್ಲಿ ತಾಲೂಕಿನ ಕೋಳೂರ ಗ್ರಾಮ ಪಂಚಾಯತಿಯಲ್ಲಿ ಬ್ರಷ್ಠಾಚಾರದ ದೂರು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ತಾಪಂ ಇಒ ಶಶಿಕಾಂತ ಶಿವಪೂರೆ ಹಾಗೂ ತನಿಖಾ ತಂಡ ಕೋಳೂರ ತಾಂಡಾಕ್ಕೆ ಬೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ದೂರುದಾರ ಕೋಳೂರ ತಾಂಡಾ ಇವಾಸಿ ಜಗದೀಶ ಚವ್ಹಾಣ ಅವರು ವಸತಿ ಯೋಜನೆಗಳಲ್ಲಿ ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಓ ಅವರು ಭೊಗಸ್ ಬಿಲ್ಲ ಮಾಡಿಕೊಂಡಯ ಹಣ ಲೂಟಿ ಮಾಡಿದ ಪ್ರತಿಯೊಂದು ಮನೆಯನ್ನೂ ತನಿಖಾ ತಂಡಕ್ಕೆ ತೋರಿಸಿದರು.



135 ಮನೆಗಳಲ್ಲಿ 13 ಮನೆ ಪರಿಶೀಲಿಸಿ ತನಿಖಾ ತಂಡ:
ದೂರುದಾರ ಜಗದೀಶ ಚವ್ಹಾಣ ಅವರು ಕೋಳೂರ ತಾಂಡಾದ ಸುಮಾರು 135 ಫಲಾನುಭವಿಗಳಿಗೆ ಪಂಚಾಯತ ಅಧ್ಯಕ್ಷ ಹಾಗೂ ಪಿಡಿಒ ಮೋಸಮಾಡಿದ್ದಾರೆ ಎಂದು ನೀಡಿದ ದೂರನ್ನು ಪರಿಗಣಿಸಿದ ತಾಪಂ ಇಒ ಶಶಿಕಾಂತ ಶಿವಪೂರೆ ಶುಕ್ರವಾರ ಸುಮಾರು 13 ವಸತಿ ಫಲಾನುಭವಿಗಳ ಮನೆಗಳಿಗೆ ಬೇಟಿ ನೀಡಿ ಪರಿಶೀಲಿಸಿದರು. ನಂತರ ಇಲಾಖೆಯಿಂದ ತನಿಖಾ ತಂಡ ಆಗಮಿಸಿ ದಿನವೊಂದರಂತೆ ಒಟ್ಟು 135 ಫಲಾನುಭವಿಗಳ ಮನೆಗಳಿಗೆ ಬೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಹೇಳಿದರು.



17 ಸರಕಾರಿ ನೌಕರಸ್ಥರ ಕುಟುಂಬಕ್ಕೆ ವಸತಿ ಯೋಜನೆ ಮಂಜೂರು:
ತಾಲೂಕಿನ ಕೋಳೂರ ಗ್ರಾಪಂಯಡಿಯಲ್ಲಿ ತಾಂಡಾಕ್ಕೆ 135 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಕಡು ಬಡವರಿಗಾಗಿ ಒದಗಿಸಬೇಕಾದ ವಸತಿ ಯೋಜನೆಯನ್ನು ಸುಮಾರು 17 ವಿವಿಧ ಸರಕಾರಿ ಇಲಾಖೆಗಳಲ್ಲಿ ನೌಕರಿ ಮಾಡುತ್ತಿರುವ ಕುಟುಂಬಕ್ಕೆ ವಸತಿ ಯೋಜನೆಯನ್ನು ಮಂಜೂರು ಮಾಡಿರುವ ಪಮಚಾಯತಿ ಅಧ್ಯಕ್ಷ ಹಾಗೂ ಪಿಡಿಓ ಫಲಾನುಭವಿಗಳಿಂದ ಸರಕಾರದಿಂದ ವಸತಿ ಯೋಜನೆಯಲ್ಲಿ ಬರುವ ಹಣವನ್ನು ಲೂಟಿ ಮಾಡಿದ್ದಾರೆ ಎಂದು ತಾಂಡಾ ನಿವಾಸಿ ಜಗದೀಶ ಚವ್ಹಾಣ ಆರೋಪಿಸಿದರು.
ಬಡವರಿಗೆ ಸಿಗದ ಸರಕಾರಿ ಯೋಜನೆಯ ಹಣ:
ಬಡವರಿಗಾಗಿ ಮಾಡಿದಂತಹ ವಸತಿ ಯೋಜನೆಗಳಿಗೆ ಬಡವರಿಂದ ಅರ್ಜಿ ಪಡೆದುಕೊಂಡಿರುವ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಓ ಅವರು ಬಡವರು ಮನೆ ನಿರ್ಮಾಣ ಮಾಡಿದರೂ ಅವರ ಬ್ಯಾಂಕ್ ಖಾತೆಗೆ ಹಣ ಹಾಕದೇ ತಾಮಗೆ ಬೇಕಾದ ಸಿರಿವಂತ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಹಣ ಹಾಕಿದ್ದಾರೆ. ಅಲ್ಲದೇ ಕೆಲ ಬಡ ಫಲಾನುಭವಿಗಳು ಮನೆ ನಿರ್ಮಾಣದ ಸಮಯದಲ್ಲಿ ಫೋಟೊ ತೆಗೆದು ಅದನ್ನು ಸಿರಿವಂತರ ಹೆಸರಿನಲ್ಲಿ ಜಿಪಿಎಸ್ ಮಾಡಿರುವ ಕಾರಣ ನಿಜವಾದ ಕಡು ಬಡವರು ಕಟ್ಟಿದ ಮನೆಯ ಫೋಟೊ ಜಿಪಿಎಸ್ ಮಾಡಲು ಸಆದ್ಯವಾಗುತ್ತಿಲ್ಲ. ಇದರಿಂದ ಬಡವರಿಗೆ ಸಿಗಬೇಕಾದ ವಸತಿ ಸೌಲಭ್ಯದ ಹಣ ಸಿರಿವಂತರ ಪಾಲಾಗಿದೆ ಎಂದು ದೂರಲಾಗಿದೆ.

Be the first to comment

Leave a Reply

Your email address will not be published.


*