ಜಿಲ್ಲಾ ಸುದ್ದಿಗಳು
ನಾಲತವಾಡ:
ಚಲಿಸುತ್ತಿದ್ದ ಸರ್ಕಾರಿ ಬಸ್ ನ್ನ ಹಿಂಬದಿಯ ಟೈಯರ್ ವಾಲ್ ಕಟ್ ಯಾಗಿ ಸುಮಾರು ಎರಡು ನೂರು ಮೀಟರ್ ಟೈಯರ್ ಉರುಳಿಕೊಂಡು ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ನಾಲತವಾಡಪಟ್ಟಣದ ಕೆಇಬಿ ಎದುರು ನಡೆದಿದೆ.. ಮುದ್ದೇಬಿಹಾಳದಿಂದ ನಾಲತವಾಡಪಟ್ಟಣಕ್ಕೆ ಹೋಗುತ್ತಿದ್ದ KA28 F1951 ಬಸ್ ನಂಬರ ಹಿಂಬದಿಯ ಟೈಯರ್ ಕಟ್ ಆಗಿದೆ.
ಆದ್ರೇ, ಬಸ್ ಚಾಲಕ ಬಸವರಾಜ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಇನ್ನು ಬಸ್ ನಲ್ಲಿದ್ದ ಐದು ಪ್ರಯಾಣಿಕರು ಸೇರಿ ಏಳು ಜನರ ಜೀವ ಬಜಾವ್ ಆಗಿದೆ. ಇನ್ನು ಇಳಿಜಾರಿನಲ್ಲೂ ಬಸ್ ಟೈಯರ್ ಕಟ್ ಆದ್ರೂ ಚಾಲಕನ ಸಾಹಸದಿಂದ ಬಸ್ ಸ್ಟಾಪ್ ಮಾಡಿ ಎಲ್ಲರ ಪ್ರಾಣ ಉಳಿಸಿದಕ್ಕೆ ಪ್ರಯಾಣಿಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Be the first to comment