ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನಲ್ಲಿ ಬರುವಂಥ ಬೈಲಕುಂಟಿ ಗ್ರಾಮದ ರೈತ ಕಾಶಪ್ಪ ತಂದೆ ದ್ಯಾವಪ್ಪ ಹಳ್ಳಳ್ಳಿ ಸಾಕೀನ್ ಬೈಲಕುಂಟಿ ಅವರ ಆರು ಎಕರೆ ಭತ್ತದ ಬೆಳೆ ಸಂಪೂರ್ಣವಾಗಿ ಮಳೆ ಗಾಳಿಗೆ ನೆಲಕಚ್ಚಿ ಬಿದ್ದಿದೆ, ಇದರಿಂದ ರೈತರ ಗೋಳು ಹೇಳತೀರದಾಗಿದೆ ಇದರಂತೆ ಬೈಲಕುಂಟಿ ಗ್ರಾಮದಲ್ಲಿ ಇನ್ನೂ ಅನೇಕ ರೈತರ ಹೊಲದಲ್ಲಿ ಭತ್ತ ಮಳೆ ಗಾಳಿಗೆ ಬಿದ್ದಿರುವವುದು ಕಂಡು ಬಂದಿದೆ ಇದನ್ನರಿತ ಕರ್ನಾಟಕ ರಕ್ಷಣಾ ವೇದಿಕೆ ಹುಣಸಗಿ ತಾಲ್ಲೂಕು ಘಟಕ ತಂಡವು ಬೈಲಕುಂಟಿ ರೈತರ ಹೊಲಗಳಿಗೆ ಭೇಟಿ ನೀಡಿ, ಅಧಿಕಾರಿಗಳ ಜೊತೆ ನಾವು ಮಾತನಾಡುತ್ತೇವೆ ಯಾವುದೇ ರೈತರು ಭಯ ಪಡುವ ಅಗತ್ಯವಿಲ್ಲ ಬೆಳೆನಷ್ಟ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ರೈತರಿಗೆ ಧೈರ್ಯ ತುಂಬುವಂತಹ ಕೆಲಸ ಮಾಡಿದೆ,
ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಶಿವಲಿಂಗ್ ಸಾಹು ಪಟ್ಟಣಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಗಳು ಬಸವರಾಜ ಚನ್ನೂರು, ಕೊಡೇಕಲ್ ಹೋಬಳಿ ಘಟಕದ ಅಧ್ಯಕ್ಷರು ಹಣಮಂತರಾಯಗೌಡ ಪಾಟೀಲ್,ಬಲಶೆಟ್ಟಿಹಾಳ ಗ್ರಾಮ ಘಟಕದ ಅಧ್ಯಕ್ಷರು ರಾಜು ಅವರಾದಿ ಬೈಲಕುಂಟಿ ಗ್ರಾಮ ಘಟಕದ ಅಧ್ಯಕ್ಷರು ಬಸವನಗೌಡ ಪಾಟೀಲ್ , ರಾಮನಗೌಡ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು .
Be the first to comment