ರಾಜ್ಯ ಸುದ್ದಿಗಳು
ಮೈಸೂರು:
ಸಂಬಂಧಿಕರ ಶವ ಸಂಸ್ಕಾರಕ್ಕೆ ಜನಗಳು ಕೂಡುವುದು ಸಾಮಾನ್ಯ. ಆದರೆ ಯಾವುದೇ ಜಾತಿ ಧರ್ಮ ನೋಡದೆ ಅನಾಥ ಶವ ಸಂಸ್ಕಾರವನ್ನು ಕಳೆದ 20 ವರ್ಷಗಳಿಂದ ಮಾಡುತ್ತಾ ಬಂದಿರುವ ಮೈಸೂರಿನ ಆಯೂಬ್ ಅಹ್ಮದ್ ಅವರಿಗೆ ರಾಜ್ಯ ಸರಕಗುರುತಿಸಿ ಬರುವ ದಸರಾ ಕಾರ್ಯಕ್ರಮದಲ್ಲಿ ಸನ್ಮಾನಿಸುವುದಾಗಿ ಹೇಳಿ ಅವರ ಸೇವೆಗೆ ಗೌರವ ನೀಡಿದೆ.
ಕೋವಿಡ್‌ನಿಂದ ಮೃತಪಟ್ಟ ತಮ್ಮ ಹೆತ್ತವರನ್ನು ನೋಡಲು, ಶವಸಂಸ್ಕಾರ ನಡೆಯುವ ಸ್ಥಳಕ್ಕೆ ಬರಲು ಸ್ವತಃ ಮಕ್ಕಳೇ ಹಿಂದೇಟು ಹಾಕಿದ್ದನ್ನು ಕಣ್ಣಾರೆ ಕಂಡ, ಹಿಂದೂ, ಮುಸ್ಲಿಮ್ ,ಕ್ರಿಶ್ಚಿಯನ್ನರು, ಎನ್ನದೇ ಶವ ಸಾಗಿಸಿ ಸಂಸ್ಕಾರ ಮಾಡಿದ ಆಯೂಬ್ ಅವರನ್ನು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಈ ಕೋವಿಡ್ ಸಂದರ್ಭದಲ್ಲಿ ಗೌರವಿಸುತ್ತಿರುವುದು ಎಲ್ಲರೂ ಗೌರವಿಸುವಂಥಹುದು.
ಫಲಾಪೇಕ್ಷೆ ಬಯಸದ ಈ ನಿಜ ಕರ್ಮಯೋಗಿಗೆ ದೊರೆಯಬೇಕಾದ ಗೌರವವಿದು. ಅಹ್ಮದ್ ಅವರಿಗೆ ಅಭಿನಂದನೆಗಳ ಸುರಿಮಳೆ ಬರುತ್ತಿದೆ.
Be the first to comment