ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಅ.13:
ಮುದ್ದೇಬಿಹಾಳ ಪಟ್ಟಣದಲ್ಲಿ ರಾತ್ರಿ ಗಸ್ತುವಿನಲ್ಲಿದ್ದು ಇತ್ತಿಚಿಗಷ್ಟೇ ಪಟ್ಟಣದ ಬಟ್ಟೆ ಅಂಗಡಿಯೊಂದನ್ನು ಕಳ್ಳತನ ಮಾಡಲು ಯತ್ನಿಸಿದ್ದ ಕಳ್ಳನನ್ನು ಅಂಗಡಿ ಮಾಲಿಕರಿಗೆ ಹಾಗೂ ಪೊಲೀಸರಿಗೆ ಒಪ್ಪಿಸಿದ ಶೇರಬಹದ್ದೂರ ಗೂರ್ಖಾಗೆ ಮಂಗಳವಾರ ಪೊಲೀಸ್ ಇಲಾಖೆ ವತಿಯಿಂದ ಸನ್ಮಾನಿಸಿ, ಆರ್ಥಿಕ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ವಾಯ್.ಎಸ್.ಪಿ. ಈ.ಶಾಂತವೀರ, ಕಳ್ಳರನ್ನು ಹಿಡಿಯುವುದು ಪೊಲೀಸರ ಕರ್ತವ್ಯವಾಗಿದೆ. ಆದರೆ ಇಂತಹ ಕರ್ತವ್ಯವನ್ನು ಯಾವುದೇ ಸಾಮಾನ್ಯ ವ್ಯಕ್ತಿ ಮಾಡಿದರೂ ಅದನ್ನು ಪ್ರಸಂಶುವುದು ಇಲಾಖೆಯ ಕರ್ತವ್ಯವಾಗಿದೆ. ಇಂತಹ ಸೇವೆಸಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ಅಧಿಕೃತವಾಗಿರದಿದ್ದರೂ ಸೇವೆ ಸಲ್ಲಿಸಿದ ಶೇರಬಹದ್ದೂರ ಗೂರ್ಖಾ ನಿಜಕ್ಕೂ ಸಮಾಜ ಸೇವೆಯಾಗಿದೆ ಎಂದು ಹೇಳಿದರು.
Be the first to comment