ಮುದ್ದೇಬಿಹಾಳ ಹಿರಿಯ ಶ್ರೇಣಿಯ ಅಪರ ಸರಕಾರಿ ವಕೀಲರಾಗಿ ಎಂ.ಆರ್.ಪಾಟೀಲ ಆಯ್ಕೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು



ಮುದ್ದೇಬಿಹಾಳ:

ಮುದ್ದೇಬಿಹಾಳ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ರಾಜ್ಯ ರಾಜಪಾಲರ ಆದೇಶದ ಅನುಸಾರ ಅಪರ ಸರಕಾರಿ ವಕೀಲರಾಗಿ ಮಲ್ಲನಗೌಡ ಎಂ. ಪಾಟೀಲ ನೇಮಕರಾಗಿದ್ದಾರೆ. 



ಮಲ್ಲನಗೌಡ ಪಾಟೀಲ ಅವರನ್ನು ಕರ್ನಾಟಕ ಕಾನೂನು ಅಧಿಕಾರಿಗಳ ನೇಮಕಾತಿ ಹಾಗೂ ಸೇವಾ ಷರತ್ತುಗಳ ಹಾಗೂ 1977ರ ನಿಯಮ 26(3)ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಒಂದು ವರ್ಷ ಅಥವಾ ಮುಂದಿನ ಆದೇಶದ ವರೆಗೆ ನೇಮಕ ಮಾಡಲಾಗಿದೆ ಎಂದು ಕಾನೂನು ಇಲಾಖೆ(ಆಡಳಿತ-2) ಸರಕಾರದ ಅಧೀನ ಕಾರ್ಯದರ್ಶಿ ಆದಿನಾರಾಯಣ ಪ್ರಕಟಣೆ ಹೊರಡಿಸಿದ್ದಾರೆ.

ಅಭಿನಂದನೆಗಳು:

ಮುದ್ದೇಬಿಹಾಳ ನ್ಯಾಯಾಲಯಕ್ಕೆ ಸರಕಾರಿ ಅಪರ ಸರಕಾರಿ ವಕೀಲರಾಗಿ ಎಂ.ಆರ್.ಪಾಟೀಲ ನೇಮಕಗೊಂಡ ಹಿನ್ನೆಲೆ ಪ್ಟಣದ ಯುವ ಮುಖಂಡ ಮಂಜುನಾಥ ರತ್ನಾಕರ ಸೇರಿದಂತೆ ಇತರರು ಅಭಿನಂದನೆ ಸಲ್ಲಿಸಿದ್ದಾರೆ.



 

Be the first to comment

Leave a Reply

Your email address will not be published.


*