ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಆರೋಗ್ಯ ಕವಚ ಸಿಬ್ಬಂದಿಗಳು ರಾಜ್ಯ ಸರಕಾರದ ಮುಂದಿಟ್ಟ ಹೆಚ್ಚುವರಿ ವೇತನ ಬೇಡಿಕೆಯನ್ನು ರಾಜ್ಯ ಆರೋಗ್ಯ್ ಸಚಿವ ಬಿ.ಶ್ರೀರಾಮಲು ಅವರು ಈಡೇರಿಸಿದ್ದು 108 ಆರೋಗ್ಯ್ ಕವಚ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀಶೈಲ ಹೂಗಾರ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 108 ಆರೋಗ್ಯ ಕವಚ ಸಿಬ್ಬಂದಿಗಳು ಕನಿಷ್ಠ ವೇತನವಿದ್ದರೂ ರೋಗಿಗಳಿಗೆ ಸೇವೆಯಲ್ಲಿ ಯಾವುದಕ್ಕೂ ಕೊರತೆ ಮಾಡದೇ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದರು. ನಂತರ 2017ರಲ್ಲಿ ವೇತನ ಹೆಚ್ಚಳಕ್ಕೆ ಮನವಿ ಮಾಡಿದ್ದರು. ಅಂದಿನ ಬೇಡಿಕೆಯನ್ನು ಪರಿಗಣಿಸಿದ ಆರೋಗ್ಯ ಸಚಿವ ಶ್ರೀರಾಮಲು ಅವರು 2017 ರಿಂದ 2020ರ ವರೆಗೂ ಸಿಬ್ಬಂದಿಗಳ ಹೆಚ್ಚುವರಿ ವೇತನವನ್ನು ಬಿಡುಗಡೆ ಮಾಡಿ ಬೇಡಿಕೆಯನ್ನು ಈಡೇರಿಸಿದ್ದಾರೆ. ಅದರಲ್ಲೂ ಕೊರೋನಾ ಸಂದಿಗ್ದ ಪರಿಸ್ಥಿಯಲ್ಲಿ ಆರೋಗ್ಯ ಕವಚ ಸಿಬ್ಬಂದಿಗಳ ಬೇಡಿಕೆ ಈಡೇರಿಸಿದ್ದು ಸಂತಸದ ಸುದ್ದಿಯಾಗಿದೆ ಎಂದು ಅವರು ಹೇಳಿದ್ದಾರೆ.
Be the first to comment