ರಾಷ್ಟ್ರೀಯ ಪೋಷಣ ಅಭಿಯಾನ ಮಾಸಾಚರಣೆ ರಥದ ಮೂಲಕ ಜನಜಾಗೃತಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು 



ಮುದ್ದೇಬಿಹಾಳ:



ಜಿಲ್ಲಾ ಪಂಚಾಯತ ವಿಜಯಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ ಪೋಷಣ ಮಾಸಾಚರಣೆ ಅಭಿಯಾನ  ರಥಯಾತ್ರೆ ಮೂಲಕ ಜನಜಾಗೃತಿ ರಥಕ್ಕೆ ಚಾಲನೆಯನ್ನು ಮಾಂತೇಶನಗರದಲ್ಲಿ ಪುರಸಭೆಯ ಸದಸ್ಯರಾದ ಯಲ್ಲಪ್ಪ ನಾಯಕಮಕ್ಕಳ ಹಾಗೂ ಪ್ರೀತಿ ದೇಗಿನಾಳ ಇವರು ಪೋಷಣ ಅಭಿಯಾನ ಮಾಸಾಚರಣೆ ರಥಕ್ಕೆ ಚಾಲನೆಯನ್ನು ನೀಡಿದರು.



ರಥಕ್ಕೆ ಚಾಲನೆ ನೀಡಿ ಮಾತನಾಡಿದ ಪುರಸಭೆ ಸದಸ್ಯ ಯಲ್ಲಪ್ಪ ನಾಯಕಮಕ್ಕಳ ಪೋಷಣಾ ಅಭಿಯಾನ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು ರಾಜ್ಯದಲ್ಲಿಯೂ ಸಹ ಅನುಷ್ಠಾನಗೊಳಿಸಲಾಗುತ್ತಿದೆ ಈ ಯೋಜನೆಯಡಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಇದನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಮತ್ತು ಸಮುದಾಯದಲ್ಲಿ ಅರಿವು ಮೂಡಿಸುವದು ಬಹಳ ಅವಶ್ಯವಾಗಿತ್ತು ಹಾಗಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಅವುಗಳನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.



ನಂತರ ಪ್ರಮುಖ ಬೀದಿಗಳಲ್ಲಿ ರಥಯಾತ್ರೆ ಮುಕಾಂತರ ಜಾತ ಮಾಡಿ ಪೋಷಣಾ ಅಭಿಯಾನ ಮಾಸಾಚರಣೆಯ ಜಾಗೃತಿ ಮೂಡಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೀಯಾನಾ ಕಲಬುರ್ಗಿ ಮಾತನಾಡಿ ತಾಯಿ ಮತ್ತು ಮಕ್ಕಳ ಪೌಷ್ಟಿಕತೆಗೆ ಸಂಬಂಧಿಸಿದಂತೆ ಸರ್ಕಾರದ ಯೋಜನೆಗಳನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶ ದಿಂದ ಈ ಅಭಿಯಾನ ನಡೆದಿದೆ. ಆ ಮೂಲಕ ಇಡೀ ಕುಟುಂಬದಲ್ಲಿ ಜಾಗೃತಿ ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾರ್ಗ ದರ್ಶನ ನೀಡಲಾಗಿದೆ ಹಾಗು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಜಾಥಾ, ಪೌಷ್ಟಿಕ ಮೇಳ, ಪೌಷ್ಟಿಕ ರಾಲಿ ಹಾಗೂ ನಡಿಗೆ,ಶಾಲೆಗಳಲ್ಲಿ ಕಾರ್ಯಕ್ರಮ ನಡೆಸುವುದು,ಪೌಷ್ಟಿಕ ಆಹಾರ ಪ್ರಾತ್ಯಕ್ಷತೆ, ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.

ಆರೋಗ್ಯ ಇಲಾಖೆಯ ಅನುಸೂಯ ತೆರದಾಳ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡಿ ಪೋಷಣೆ ಯೋಜನೆಯಲ್ಲಿಮುಖ್ಯವಾಗಿ ಗರ್ಭಿಣಿಯರು, ಬಾಣಂತಿಯರು, ಶಿಶುವಿನ ಬೆಳವಣಿಗೆ ಕುಂಠಿತ, ತೂಕ ಕೊರತೆ, ರಕ್ತಹೀನತೆ, ಕಡಿಮೆ ತೂಕದ ಶಿಶು ಸೇರಿದಂತೆ ಅಪೌಷ್ಠಿಕತೆ ಸಮಸ್ಯೆಯಿಂದ ಬಳಲುತ್ತಿರುವವರ ಉತ್ತಮ ಆರೋಗ್ಯಕ್ಕಾಗಿ ಇಲಾಖೆ ನಾನಾ ಯೋಜನೆ ಜಾರಿಗೊಳಿಸಿದ್ದು, ಹಂತ ಹಂತವಾಗಿ ಅಪೌಷ್ಠಿಕತೆ ಮುಕ್ತ ಕರ್ನಾಟಕ ರೂಪಿಸಲು ಸನ್ನದ್ದವಾಗಿದೆ ಎಂದರು

ಕಾರ್ಯಕ್ರಮದಲ್ಲಿ ನಗರ ಕೋವಿಡ್19 ತಂಡದ ಮೇಲ್ವಚಾರಕ ಎಂ ಎಸ್ ಗೌಡರ ಎಸ್ ಸಿ ರುದ್ರವಾಡಿ ಯೂನಿಸ್ ತುರಕನಗಿರಿ ಬಸವರಾಜ್ ಬಿಪಿಎಂ ಸಿದ್ದು ಬಿದಗೊಂಡ ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾ ಘಾಟಗೆ ಶೋಭಾ ಕಾಖಂಡಕಿ ನಿಂಬಕ್ಕ ಕಾಳಾಪುರ ವಿದ್ಯಾ ಮುರಾಳ ಸುಮಂಗಲಾ ಪುರಾಣಿಕಮಠ ಮಂಜುಳಾ ಜಾಧವ ನೀಲಮ್ಮ ತೊಂಡಿಹಾಳ ಜೆ ಎಸ್ ಕೋರಿ ಆರ್ ಎಸ್ ಮಮದಾಪುರ ಸಾಹೆಬ್ಬಿ ಕೆಸರಟ್ಟಿ ಏನ್ ಬಿ ನಾಶಿ ಅಕ್ಕಮ್ಮ ಪವಾರ್ ಎಸ್ ಎ ಸಗರ್ ಅಂಬುಜಾ ಕುಲಕರ್ಣಿ ಜೆ ಬಿ ದಿಡ್ಡಿಮನಿ ಪಾರ್ವತಿ ನಡಗೇರಿ ಬಸಮ್ಮ ನಾಯಕಮಕ್ಕಳ ಹಾಜರಿದ್ದರು.



 

Be the first to comment

Leave a Reply

Your email address will not be published.


*