ಸಂಘಟನಾ ಚಾತುರ್ಯ ಅಶೋಕ ಗಸ್ತಿ ನಿಧನ ಪರಿವಾರಕ್ಕೆ ನಷ್ಟ: ಬಿ.ಪಿ.ಕುಲಕರ್ಣಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು 



ಮುದ್ದೇಬಿಹಾಳ:

ಮುದ್ದೇಬಿಹಾಳ ಪಟ್ಟಣದಲ್ಲಿ ಅಶೋಕ ಗಸ್ತಿಯವರ ಭಾವಚಿತ್ರಕ್ಕೆ ಪುಷ್ಪಸರ್ಮರ್ಪಣೆ ಮಾಡಿ ಮೌನಾಚರಣೆ ಮಾಡಲಾಯಿತು.



ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಭಾಜಪ ಮುಖಂಡ ಬಿ ಪಿ ಕುಲಕರ್ಣಿ ಅಶೋಕ ಗಸ್ತಿ ಸಂಘ ಪರಿವಾರದ ಹಿನ್ನಲೆಯಿಂದ ಬಂದವರು ಆರ್ಥಿಕವಾಗಿ ಹಿಂದುಳಿದ ವರ್ಗದಿಂದ ಬಂದಿದ್ದರು ಅವರಲ್ಲಿ ಸಂಘಟನಾ ಚಾತುರ್ಯಯತೆ ಇತ್ತು ಅದನ್ನು ಗುರುತಿಸಿ ಪಕ್ಷ ಅವರಿಗೆ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿತ್ತು ಎಂದರು. ಮಲಕೇಂದ್ರಗೌಡ ಪಾಟೀಲ್ ಮಾತನಾಡಿ ಅಶೋಕ ಗಸ್ತಿಯವರನ್ನು ನಾನು ತುಂಬಾ ಹತ್ತಿರದಿಂದ ಬಲ್ಲೆ ವಿಧ್ಯಾರ್ಥಿ ಪರಿಷತ್ ನಿಂದ ಬಂದ ಅಶೋಕ ಗಸ್ತಿ ಹೋರಾಟ ಮನೋಭಾವದ ವ್ಯಕ್ತಿತ್ವದವರು ,ಪಕ್ಷದ ಸಂಘಟನೆ ಮಾಡುತ್ತ ಎಲೆ ಮರೆಯ ಕಾಯಂತೆ ಬಂದವರು ರಾಜ್ಯಸಭೆಗೆ ಆಯ್ಕೆಗೆ ಅವರನ್ನು ಅವಿರೋಧವಾಗಿ ಆಯ್ಕೆಗೊಂಡರು ರಾಜ್ಯಸಭೆಗೆ ತೀವ್ರ ಪೈಪೋಟಿ ನಡೆಸಿದ ಅನೇಕ ರ ಮಧ್ಯೆ ಯಾವ ಶಿಪಾರಸ್ಸು ಇಲ್ಲದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನನ್ನು ಗುರುತಿಸಿ ಪಕ್ಷ ಅವರಿಗೆ ರಾಜ್ಯಸಭೆಗೆ ಆಯ್ಕೆ ಮಾಡಿತು ಅವರು ಇನ್ನೂ ರಾಜಕೀಯವಾಗಿ ಬೆಳೆಯುವ ಹಂತದಲ್ಲಿ ನಮ್ಮನ್ನು ಅಗಲಿದ್ದು ದುಃಖದ ಸಂಗತಿಯಾಗಿದೆ ಎಂದರು.

ಭಾಜಪ ಜಿಲ್ಲಾ ಕಾರ್ಯದರ್ಶಿಯಾದ ಕಾಶಿಬಾಯಿ ರಾಂಪೂರ ,ಪ್ರತಿಯೊಂದು ವರ್ಗಕ್ಕೆ ತಮ್ಮ ಸಮುದಾಯ ವ್ಯಕ್ತಿ ಉನ್ನತ ಸ್ಥಾನ ಪಡೆದಾಗ ಹೆಮ್ಮೆಯಾಗುತ್ತದೆ ಅಂತಹ ಹೆಮ್ಮೆ ಸವಿತ ಸಮಾಜಕ್ಕೆ ಇತ್ತು ಅಶೋಕ ಗಸ್ತಿಯವರು ಸಮಾಜಕ್ಕೆ ಮತ್ತು ರಾಜ್ಯಕ್ಕೆ ಕೊಡುಗೆ ನೀಡುವ ಕಾಲದಲ್ಲಿ ವಿಧಿಯಾಟಕ್ಕೆ ಬಲಿಯಾದರು,ಸಂಘ ಪರಿವಾರ ಸಂಘಟನೆಯ ಉದ್ದೇಶಗಳನ್ನು ಹೊಂದಿದ ಓರ್ವ ಪ್ರಮುಖ ವ್ಯಕ್ತಿ ಕಳೆದುಕೊಂಡು ಪಕ್ಷಕ್ಕೆ ಮತ್ತು ಸಮಾಜಕ್ಕೆ ನಷ್ಟವಾಗಿದೆ ಎಂದರು.

ಭಾಜಪ‌ ಮಂಡಲ ಅಧ್ಯಕ್ಷ ಪರಶುರಾಮ ಪವಾರ,ಶಿವಶಂಕರಗೌಡ ಹಿರೆಗೌಡರ, ಭಾರತಿ ಅಪ್ಪಣ್ಣ ಶ್ರೀಗಳು ಮಾತನಾಡಿ, ಅಶೋಕ ಗಸ್ತಿ ಕುಟುಂಬ ಮುಂಚೆಯಿಂದಲೂ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತ ಬಂದಿದೆ, ಅಶೋಕ್ ಗಸ್ತಿ ಹುಟ್ಟು ಹೋರಾಟಗಾರರು ಅವರ ಹೋರಾಟದ ಗುಣವೇ ಅವರನ್ನು ಎತ್ತರಕ್ಕೆ ಕರೆದೊಯ್ಯಿತು ಭಾಜಪ ಪಕ್ಷದಲ್ಲಿ ಅವರಿಗೆ ಉನ್ನತವಾದ ಸ್ಥಾನಮಾನವನ್ನು ಅರಸಿ ಬಂದವು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರನ್ನು ಗುರುತಿಸಿ ಕೇಂದ್ರದಲ್ಲಿ ರಾಜ್ಯ ಸಭಗೆ ಆಯ್ಕೆ ಮಾಡಿದರು ಇನ್ನೇನು ಸಮಾಜಕ್ಕೆ ಒಳಿತಾಗಬೇಕು ಎನ್ನುವಷ್ಟರಲ್ಲಿ ವಿಧಿಯ ಆಟಕ್ಕೆ ಅವರು ಬಲಿಯಾದರು , ಅಶೋಕ ಗಸ್ತಿಯಂತವರು ಮತ್ತೆ ಈ ಸಮಾಜದಲ್ಲಿ ಹುಟ್ಟಿ ಬರಲಿ ಎಂದರು.

ಸವಿತ ಸಮಾಜದ ನಾಯಕ ಹಾಗೂ ಪತ್ರಕರ್ತ ಅನಿಲ್ ಕುಮಾರ್ ತೇಲಂಗಿ ಮಾತನಾಡಿ,
ಅಶೋಕ ಗಸ್ತಿ ಕ್ಷೌರಿಕ ಸಮಾಜದಲ್ಲಿ ಓರ್ವ ಅಂಬೇಡ್ಕರ್ ಇದ್ದಂತೆ ಸಮಾಜದ ಏಳ್ಗಗೆ ಕಂಕಣ ಬದ್ದರಾಗಿ ಒಡೆದು ಹರಿದು ಹಂಚಿಹೋಗಿದ್ದ ಕ್ಷೌರಿಕ ಸಮಾಜದ ಎಲ್ಲಾ ಪಂಗಡಗಳನ್ನು ಸೇರಿಸಿ ರಾಷ್ಟ್ರಮಟ್ಟದಲ್ಲಿ ಸಮಾವೇಶ ಮಾಡಲು ತಯಾರಿ ನಡೆಸಿದ್ದರು ಆ ಕಾರ್ಯಕ್ರಮಕ್ಕೆ ಮೋದಿಯವರು ಬರಲು ಒಪ್ಪಿದ್ದರು , ಮಾತ್ರವಲ್ಲದೆ ರಾಯಚೂರು ಜಿಲ್ಲೆಯಲ್ಲಿ ಔಷಧ ಪಾರ್ಕ್ ಮಾಡಲು ಕೇಂದ್ರ ನಾಯಕರ ಬಳಿ ಮಾತನಾಡಿದ್ದರು , ಹಣ ಬಲದ ಜನರ ಮಧ್ಯೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದ ನಾಯಕ ಅಶೋಕ ಗಸ್ತಿ ಹಿಂದುಳಿದ ನಾಯಕರಾಗಿದ್ದರು ಹೈದ್ರಾಬಾದ್ ಕರ್ನಾಟಕ ಉತ್ತರ ಕರ್ನಾಟಕದ ಪ್ರತಿನಿಧಿಯಾಗಿದ್ದ ಅವರು ಹೈದ್ರಾಬಾದ್ ವಿಮೋಚನಾ ದಿನದಂದೆ ಅಸುನೀಗಿದ್ದು ದುರಂತ ಇಂತಹ ಧೀಮಂತ ನಾಯಕ ಮತ್ತೆ ಸಮಾಜದಲ್ಲಿ ಹುಟ್ಟಿ ಬರಬೇಕು ಎಂದರು.

ಈ ಸಂದರ್ಭದಲ್ಲಿ ಸವಿತ ಸಮಾಜದ ಹಿರಿಯರಾದ ಮಲ್ಲಣ್ಣ ತೇಲಂಗಿ ,ಮುತ್ತಣ್ಣ ಹಡಪದ ,ರವಿ ತೇಲಂಗಿ, ಶಂಕರ ಕುಂಚಗನೂರು, ಮಹೇಶ ತೇಲಂಗಿ ಮುತ್ತಣ್ಣ ಹಡಪದ, ಪ್ರಹ್ಲಾದ ಹಡಪದ, ಕುಮಾರ್ ತೇಲಂಗಿ, ಈರಣ್ಣ ಈಡ್ಲೂರ, ಮಹಾಂತೇಶ ಹಡಪದ ,ಭೀಮಣ್ಣ ಹಡಪದ, ಶಂಕರ ಹಡಪದ, ವಿರೇಶ ಅರಸನಾಳ,ಮಹಾಂತೇಶ ಕಮ್ಮಲದಿನ್ನಿ,ಬಸವರಾಜ ಯರಗಲ್, ಶಂಕರ ಕುಂಚಗನೂರು, ಶಿವು ಬಿದರಕುಂದಿ, ಸುರೇಶ ಮಸಾಲಜಿ, ಜಗದೀಶ ಮಸಾಲಜಿ ಪ್ರವೀಣ ಮಸಾಲಜಿ, ಬಸವರಾಜ ಅಬ್ಬಿಹಾಳ,ಶ್ರೀಕಾಂತ ತೇಲಂಗಿ, ಶ್ರೀವಾಸ ಶಹಾಪೂರ ,ನಾಗರಾಜ ತೇಲಂಗಿ, ಭರತ ಹಡಪದ ಹಾಗೂ ಭಾಜಪ ಪಕ್ಷದರಾ, ಜಶೇಖರ ಹೂಳಿ, ಉದಯ ರಾಯಚೂರು, ಶಿವಪ್ರಸಾದ ಹೂಗಾರ, ಹಣಮಂತ ನಲವಡೆ,ಮಂಜುನಾಥ ರತ್ನಾಕರ,ಬಸವರಾಜ ದಡ್ಡಿ,ಉಪಸ್ಥಿತರಿದ್ದರು.

ಶ್ರದ್ಧಾಂಜಲಿ ಕಾರ್ಯಕ್ರಮ ಮುನ್ನ ಬಸವೇಶ್ವರ ವೃತ್ತದಲ್ಲಿ ಸಮಾಜದ ಬಾಂಧವರು ಮೇಣಬತ್ತಿ ಹಚ್ಚಿ ಗೌರವ ಸಲ್ಲಿಸಲಾಯಿತು. 



 

Be the first to comment

Leave a Reply

Your email address will not be published.


*