ದೇಶ ಸುಧಾರಣೆಯಂತಹ ವ್ಯಕ್ತಿಯನ್ನು ನೀಡಿದ ಶಿಕ್ಷಕರಿಗೆ ಗೌರವಿಸುವ ಮೂಲಕ ಮೋದಿ ಜನ್ಮದಿನಾಚರಣೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು



ಮುದ್ದೇಬಿಹಾಳ ಸೆ.17:

ಪ್ರತಿಭಾವಂತರನ್ನು ಸೃಷ್ಠಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದೆ. ಶಿಕ್ಷಕರಿಂದಲೇ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂಬುವುದಕ್ಕೆ ಭಾರತವನ್ನು ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಉಧಾರಹಣೆಯಾಗಿದ್ದಾರೆ. ಶ್ರೇಷ್ಠ ಶಿಕ್ಷಕರನ್ನು ಗೌರವಿಸುವ ಮೂಲಕ ಮೋದಿಯವರ ಜನ್ಮದಿನಾಚರಣೆಯನ್ನು ಆಚರಸಬೇಕಿದೆ ಎಂದು ಬಿಜೆಪಿ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಕಾಶಿಬಾಯಿ ರಾಂಪೂರ ಹೇಳಿದರು.



ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಜನ್ಮದಿನೋತ್ಸವದ ಅಂಗವಾಗಿ ಮುದ್ದೇಬಿಹಾಳ ತಾಲೂಕಿನ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಸನ್ಮಾನ ಏರ್ಪಡಿಸಲಾದ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಂದು ಮಗು ಬೆಳೆಯುತ್ತಾ ಪಾಲಕರೊಂದಿಗಿಂತ ಶಾಲಾ ಶಿಕ್ಷಕರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತದೆ. ಮಗುವಿನ ಆರೋಗ್ಯದ ಬಗ್ಗೆ ಪಾಲಕರು ಗಮನ ಹರಿಸಿದರೆ ಮಗುವಿನ ಭವಿಷ್ಯದ ಬಗ್ಗೆ ಶಿಕ್ಷಕರು ಗಮನ ಹರಿಸುತ್ತಾರೆ. ಇಂತಹ ಶಿಕ್ಷಕರಿಂದಲೇ ಇಂದು ಭಾರತ ಸ್ವತಂತ್ರ್ಯ ಹೊಂದಿದೆ ಎನ್ನುವ ಮನೋಭಾವ ಜನರಲ್ಲಿ ಮೂಡಿಸುವ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದಾರೆ ಎಂದು ಅವರು ಹೇಳಿದರು.

ಇದೇ ವೇಳೆ ಮುದ್ದೇಬಿಹಾಳ ತಾಲೂಕಿನಿಂದ ಶ್ರೇಷ್ಠ ಶಿಕ್ಷಕರಪ್ರಶಸ್ತಿಗೆ ಪಾತ್ರಾದ ಮೂವರು ಶಿಕ್ಷಕರನ್ನು ಸನ್ಮಾನಿಸಲಾಯಿತು ಹಾಗೂ ಅವರೊಂದಿಗೆ ವಿದ್ಯಾರ್ಥಿಗಳಿಗೆ ನೋಟಬುಕಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ರಾಜು ಬಳ್ಳೊಳ್ಳಿ, ಯುವ ಮುಖಂಡ ಸಂಜು ಬಾಗೇವಾಡಿ, ಮಹಾಂತೇಶ ನಲವಡೆ, ರಾಜಶೇಖರ ಮ್ಯಾಗೇರಿ ಇದ್ದರು.



 

Be the first to comment

Leave a Reply

Your email address will not be published.


*