ವಿಶ್ವಕರ್ಮ ಸಮಾಜದವರೇ ವಿಶ್ವದ ಮೊದಲ ಎಂಜಿನಿಯರಗಳು: ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು 



ಮುದ್ದೇಬಿಹಾಳ:

ವಿಶ್ವದಲ್ಲಿಯೇ ಮೊದಲ ಇಂಜಿನಿಯರ್ ಎಂದರೆ ಅದು ವಿಶ್ವಕರ್ಮ ಸಮಾಜದವರು. ಇಂದಿನ ದಿನಗಳಲ್ಲಿ ತಮ್ಮ ಮೂಲ ಕಸುಬನ್ನು ತಮ್ಮ ಯುವ ಪೀಳಿಗೆಗೆ ತಿಳಿಸುತ್ತಾಹೋದರೆ ವಿಶ್ವಕರ್ಮ ಸಮಾಜದ ಪ್ರತಿಯೊಬ್ಬ ಮಗುವೂ ಒಂದು ಇಂಜಿನಿಯರ್ ಹುದ್ದೆಯಲ್ಲಿ ಜೀವನ ಸಾಗಿಸಬಹುದಾಗಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.



ಟ್ಟಣದ ಮಾರುತಿ ನಗರದಲ್ಲಿರುವ ಜಗದ್ಗುರು ಮೌನೇಶ್ವರ ವೇದಿಕೆಯಲ್ಲಿ ಏರ್ಪಡಿಸಲಾದ 5ನೇ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷ ವಹಿಸಿ  ಅವರು ಮಾತನಾಡಿದರು. 

ಆಧುನಿಕ ದಿನಗಳಲ್ಲಿ ವಿಶ್ವಕರ್ಮ ಸಮಾಜದವರು ತಮ್ಮ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಸರಕಾರವು ವಿಶ್ವಕರ್ಮ ಅಭಿರುದ್ಧಿ ನಿಗಮ ಮಾಡಿದ್ದು ಸಮಾಜಕ್ಕೆ ಯಡಿಯೂರಪ್ಪನವರು ಶಕ್ತಿ ನೀಡಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಜಿ ಅವರೂ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು ಇದರ ಬಗ್ಗೆ ವಿಶ್ವಕರ್ಮ ಸಮಾಜದವರು ಗಮನಹರಿಸಬೇಕು ಎಂದು ಅವರು ಹೇಳಿದರು.



  

ವಿಜಯಪುರ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು. ಸಮಾಜದ ಯುವ ಮುಖಂಡ ನಾರಾಯಣ್ ಮಾಯಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜದ ಹಿರಿಯ ವಿರುಪಾಕ್ಷಿ ಪತ್ತಾರ ಇದ್ದರು. 



ವಿಶ್ವಕರ್ಮ ಸಮಾಜದ ಹಿರಿಯ ಸಾಧಕರಿಗೆ ಹಾಗೂ ಎಸ್.ಎಸ್. ಎಲ್.ಸಿ.ಯಲ್ಲಿ ಹೆಚ್ಚು ಅಂಕ ಪಡೆದ  ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಭಾರತಿ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಬಿಜೆಪಿ ಮಹಿಳಾ ಜಿಲ್ಲಾ ಕಾರ್ಯದರ್ಶಿ  ಕಾಶಿಬಾಯಿ ರಾಂಪುರ, ಪುರಸಭೆ ಆರ್.ಓ. ಭಾರತಿ ಮಾಡಗಿ, ಸರಿಗೆ ವ್ಯವಸ್ಥಾಪಕ ರಾಹುಲ ಹುಣಸೂರೆ, ವಿಜಯ ಬಡಿಗೇರ ಇದ್ದರು. 

ಸಿ.ಕೆ.ಪತ್ತಾರ ಸ್ವಾಗತಿಸಿದರು. ಟಿ.ಡಿ. ಲಮಾಣಿ ನಿರೂಪಿಸಿದರು. ಪಿ. ಎಸ್. ಶಿರವಾಳ ವಂದಿಸಿದರು. 

Be the first to comment

Leave a Reply

Your email address will not be published.


*