ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನ ಪ್ರತಿಯೊಂದು ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಈಗಾಗಲೇ 700ಕೋಟಿ ಅನುಧಾನ ಮಂಜೂರಾತಿ ಮಾಡಿಸಲಾಗಿದ್ದು ಶೀಘ್ರದಲ್ಲಿಯೇ ಗ್ರಾಮೀಣ ಜನರಿಗೆ ಶುದ್ಧ ನೀರು ಸಿಗಲಿದೆ ಎಂದು ಶಾಸಕ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದರು.
ಗ್ರಾಮದ ಪ್ರತಿಯೊಬ್ಬರೊಂದಿಗೂ ಭೇಟಿ ಮಾಡಿ ಗ್ರಾಮದ ಅಭಿರುದ್ಧಿ ಪಡಿಸುವ ಬಗ್ಗೆ ಮಾಹಿತಿ ಪಡೆದ ಶಾಸಕರು, ಈಗಾಗಲೇ ಗ್ರಾಮದಲ್ಲಿ ಸಿ.ಸಿ. ರಸ್ತೆ, ಸಮುದಾಯ ಭವನ, ಶಾಲಾ ಕಟ್ಟಡ ಹಾಗೂ ಚರಂಡಿ ನಿರ್ಮಾಣಕ್ಕಾಗಿ 291.50ಲಕ್ಷ ಅನುಧಾನ ಮಂಜೂರು ಮಾಡಲಾಗಿದೆ. ಇದನ್ನು ಗ್ರಾಮಸ್ಥರು ಯಾವುದೇ ಪಕ್ಷಬೇಧ ಮಾಡದೇ ಬಂದ ಅನುಧಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಗ್ರಾಮೀಣದ ಪ್ರದೇಶದಲ್ಲಿ ಬರುವ ದಿನಗಳಲ್ಲಿ ಪ್ರತಿಯೊಂದು ಮನೆಗೂ ಆಕಳು ಸಾಕಿ ಹಸು ಹಾಲು ಕುಡಿಯುವಂತೆ ಆಗಬೇಕು ಎಂದು ಅವರು ಹೇಳಿದರು.
ಗ್ರಾಮಸ್ಥರಿಗೆ ತಿಳಿಹೇಳಿದ ಶಾಸಕ ನಡಹಳ್ಳಿ:
ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿಯ ಬಗ್ಗೆ ಕೆಲ ಗ್ರಾಮಸ್ಥರಲ್ಲಿ ಮನಸ್ತಾಪ ಬಂದ ಹಿನ್ನೆಲೆ ಶಾಸಕ ನಡಹಳ್ಳಿ ಅವರು ಕಾಮಗಾರಿ ಹಾಗೂ ಮಾಡುವ ವಿಧಾನ ಬಗ್ಗೆ ಗ್ರಾಮಸ್ಥರಿಗೆ ತಿಳಿಹೇಳಿ ಅವರನ್ನು ಅಭಿರುದ್ಧಿ ಕಾಮಗಾರಿಗೆ ಸ್ಪಂದಿಸುವಂತೆ ಮಾಡಿದರು.
ಗ್ರಾಮಸ್ಥರಿಂದ ಅಭಿನಂದನೆಗಳ ಸುರಿಮಳೆ ಪಡೆದ ಶಾಸಕ ನಡಹಳ್ಳಿ:
ಗ್ರಾಮದ ಪ್ರತಿಯೊಂದು ರಸ್ತೆಯೂ ಕೆಸರು ಹಾಗೂ ಗಲೀಜಿನಿಂದ ಕೂಡಿದ್ದರೂ ಕಾಲ್ನಡಿಗೆ ಬಿಡದ ಶಾಸಕ ನಡಹಳ್ಳಿ ಗಲೀಜಿನಲ್ಲೇ ನಡೆದು ವೀಕ್ಷಿಣೆ ಮಾಡಿದ್ದು ಗ್ರಾಮಸ್ಥರಿಂದ ಅಭಿನಂದನೆಗಳ ಸುರಿಮಳೆಯೇ ಬಂದಂತಾಯಿತು.
ಈ ಸಂದರ್ಭದಲ್ಲಿ ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ಬಿಜೆಪಿ ಮುಖಂಡ ಎಂ.ಬಿ.ಪಾಟೀಲ, ಡಿಡಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಎಇಇ ಅಶೋಕ್ ಬಿರಾದಾರ, ಸೋಮನಾಥ ಕುಳಗೇರಿ, ಸಿಪಿಐ ಆನಂದ ವಗಮೋಡೆ, ಪಿಡಿಓ ನಿರ್ಮಲಾ ತೋಟದ ಇದ್ದರು.
Be the first to comment