ಭಾರತೀಯ ಜನತಾ ಪಕ್ಷದ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಎಸ್.ಎಸ್.ಮಿಟ್ಟಲಕೋಡ ನೇಮಕ

ವರದಿ: ಶರಣಪ್ಪ ಬಾಗಲಕೋಟೆ

ಬಾಗಲಕೋಟೆ: ಭಾರತೀಯ ಜನತಾ ಪಕ್ಷದ ನೂತನ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕರನ್ನಾಗಿ ಬಾಗಲಕೋಟೆಯ ಎಸ್.ಎಸ್‌.ಮಿಟ್ಟಲಕೋಡರನ್ನು ನೇಮಕ ಮಾಡಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಬೇಲೂರು ಗ್ರಾಮದ ಮೂಲ ನಿವಾಸಿಯಾದ ಎಸ್.ಎಸ್.ಮಿಟ್ಟಲಕೋಡ ವೃತ್ತಿಯಲ್ಲಿ ವಕಿಲರಾಗಿದ್ದು ತಮ್ಮ ವೃತ್ತಿಯಲ್ಲಿ 20 ವರ್ಷದ ಅನುಭವ ಪಡೆದಿದ್ದಾರೆ. ಸದ್ಯ ರಾಜ್ಯ ವಕಿಲ ಪರಿಷತ್ತಿನ ಸದಸ್ಯರುಕೂಡಾ,ಅದರ ಜೊತೆಗೆ 1990 ರಿಂದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಾಬಂದಿದ್ದು ಇವರ ಸೇವೆಗೆ ಪಕ್ಷದ ನಾಯಕರು ಮೆಚ್ಚಿ ಕಳೆದ ಬಾರಿ ಸಹಾಯಕ ಸಂಚಾಲಕರಾಗಿ ನೇಮಕಮಾಡಲಾಗಿತ್ತು. ಈಗ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.

ತಮ್ಮ ವಕೀಲರ ಸೇವಾವಧಿಯಲ್ಲಿ ರಾಜ್ಯ ಮಟ್ಟದ ಮಹಿಳಾ ವಕೀಲರ ಸಮ್ಮೆಳನ,ರಾಜ್ಯ ಮಟ್ಟದ ವಕೀಲರ ಸಮ್ಮೆಳನ ಬೆಂಗಳೂರಿನಲ್ಲಿ ಸುಮಾರು 5000 ವಕೀಲರನ್ನು ಸೇರಿಸಿ ಯಶಸ್ವಿಗೊಳಿಸಿದ್ದರು.2015 ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ವಕೀಲರ ಸಮ್ಮೆಳನದಲ್ಲಿ ರಾಜ್ಯದಿಂದ ಸುಮಾರು 450 ವಕೀಲರನ್ನು ಕರೆದುಕೊಂಡು ಹೋಗಿದ್ದರು.

ಈ ಸುಸಂದರ್ಭದಲ್ಲಿ ಶಾಸಕರಾದ ಡಾ.ವೀರಣ್ಣ ಚರಂತಿಮಠ ಮತ್ತು ಜಿಲ್ಲೆಯಾದ್ಯಂತ ಪಕ್ಷದ ಎಲ್ಲ ಕಾರ್ಯಕರ್ತರು ಅಭಿನಂದನೆಗಳು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*