ರಾಷ್ಟ್ರೀಯ ಪೋಷಣಾ ಅಭಿಯಾನ ಮಾಸಾಷಚರಣೆ: ಗರ್ಭಿಣಿ ತಾಯಂದಿರಿಗೆ ಶಿಮಂತ ಕಾರ್ಯ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ:

 

ದೇಶದಲ್ಲಿ ಪ್ರತಿಯೊಬ್ಬ ಗರ್ಭಿಣಿ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು, ತಾಯಿ ಮಗುವಿನ ಜೀವ ರಕ್ಷಿಸಲು ಪೌಷ್ಠಿಕ ಆಹಾರದ ಅಗತ್ಯವಿದೆ ಎಂದು ಪುರಸಭೆ ಸದೆಸ್ಯೆ ಪ್ರೀತಿ ದೇಗಿನಾಳ ಹೇಳಿದರು.
ಅವರು ಪಟ್ಟಣದ ಹೊರಪೇಟೆಗಲ್ಲಿಯ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡ ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಮುದ್ದೇಬಿಹಾಳ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಪೋಷಣಾ ಅಭಿಯಾನ ಮಾಸಾಷಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.



ಸಮಾಜದಲ್ಲಿ ಅಪೌಷ್ಠಿಕ ಮಕ್ಕಳ ಕಂಡು ಬರುತ್ತಿದ್ದು ತಾಯಿ-ಮಗುವಿನ ಸಾವು ನಿಯಂತ್ರಿಸಲು ಸರಕಾರ ಅಪೌಷ್ಠಿಕತೆ ನಿವಾರಣೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಒಂದಾಗಿದ್ದು ತಾಯಿ ಮಕ್ಕಳ ಆರೋಗ್ಯ ಕಾಪಾಡುವದು ನಮ್ಮೆಲ್ಲರ ಆದ್ಯ ಕರ್ತ್ಯೇವ್ಯ ಹಾಗೂ ಸರ್ಕಾರದಿಂದ ಗರ್ಭಿಣಿಯವರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. 
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರ ಕೋವಿಡ್19 ತಂಡದ ಮೇಲ್ವಿಚಾರಕ ಆರೋಗ್ಯ ಸಹಾಯಕ ಎಂ.ಎಸ್.ಗೌಡರ ಮಾತನಾಡಿ, ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ಸಮಾಜ ಆರೋಗ್ಯವಾಗಿರುತ್ತದೆ ಎಂಬ ಆಶಯದೊಂದಿಗೆ ದೇಶದ ಪ್ರಧಾನಿಗಳು ರಾಷ್ಟ್ರೀಯ ಪೋಷಣಾ ಅಭಿಯಾನ ಯೋಜನೆಯನ್ನು ಜಾರಿಗೆ ತಂದಿದ್ದು ಅಂಗನವಾಡಿ ಕಾರ್ಯಕರ್ತೆಯರು ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಜಾರಿಗೋಳಿಸಬೇಕು. ತಾಯಂದಿರಿಯರು ನಿತ್ಯ ಸೇವಿಸುವ ಆಹಾರ ದಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿ ಇರುವಂತೆ ನೋಡಿಕೊಳ್ಳಬೇಕು ಮತ್ತು ಮಕ್ಕಳಿಗೆ ಎಲ್ಲಾ ಲಸಿಕೆಗಳನ್ನು ಸಕಾಲದಲ್ಲಿ ಹಾಕಿಸಲು ತಿಳಿಸಿದರು.



ಇದೆ ವೇಳೆಯಲ್ಲಿ ಗರ್ಭಿಣಿ ತಾಯಂದಿರಗೆ ಶಿಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾ ಘಾಟಗೆ, ನಿಂಬಕ್ಕ ಕಾಳಾಪುರ, ಸುಮಂಗಲ ಪುರಾಣಿಕಮಠ, ಅಂಬುಜಾ ಕುಲಕರ್ಣಿ, ಏನ್.ಬಿ.ನಾಶಿ,  ಎಸ್.ಎ.ಸಗರ, ಜುಲೇಕಾ ದಂಡಿಯಾ ಇದ್ದರು. 

Be the first to comment

Leave a Reply

Your email address will not be published.


*