ಪಂಚಾಯತಿ ವ್ಯಾಪ್ತಿಯಲ್ಲಿರುವ ಪ್ಲಾಟಗಳನ್ನು ಪುರಸಭೆಗೆ ಸೇರ್ಪಡೆ ಮಾಡಬೇಡಿ: ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರ ಮನವಿ

ವರದಿ: ಸಿದ್ದು ಚಲವಾದಿ

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:
ತಾಲೂಕಿನ ಹಡಲಗೇರಿ ಗ್ರಾಪಂ ವ್ಯಾಪ್ತಿಗೆ ಬರುವ ಎನ್.ಎ. ಪ್ಲಾಟಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡವ ಹುನ್ನಾರು ನಡೆಸಿದ್ದು ಕೂಡಲೇ ಇದನ್ನು ತಡೆಗಟ್ಟಿ ಹಡಲಗೇರಿ ವ್ಯಾಪ್ತಿಯ ಪ್ಲಾಟಗಳನ್ನು ಹಡಲಗೇರಿ ಪಂಚಾಯತಿ ವ್ಯಾಪ್ತಿಯಲ್ಲಿಯೇ ಇರುವಂತೆ ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ಹಡಲಗೇರಿ ಗ್ರಾಮಸ್ಥರು ಸ್ಥಳೀಯ ತಹಸೀಲ್ದಾರ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.



ಈ ಕುರಿತು ಮಾತನಾಡಿದ ಗ್ರಾಮಸ್ಥರು, ಈಗಾಗಲೇ ಹಡಲಗೇರಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಪ್ಲಾಟಗಳನ್ನು ಎನ್.ಎ. ಮಾಡಿಸಲಾಗಿದ್ದು ಅವುಗಳನ್ನು ನಿಯಮದ ಪ್ರಕಾರ ನಮೂನೆ-೯ರಲ್ಲಿ ನಮೂದು ಮಾಡಲಾಗಿದೆ. ಆದರೆ ಈಗ ಏಕಾಏಕಿ ಪಂಚಾಯತಿ ವ್ಯಾಪ್ತಿಯ ಪ್ಲಾಟಗಳನ್ನು ಪುರಸಭೆಗೆ ಸೇರ್ಪಡೆ ಮಾಡುವುದರಿಂದ ಗ್ರಾಮ ಪಂಚಾಯತಿ ಅಭಿವೃದ್ಧಿಯನ್ನು ಕುಂಠಿತಗೊಳ್ಳುವಂತೆ ಮಾಡಿದಂತಾಗುತ್ತದೆ. ಆದ್ದರಿಂದ ಕೂಡಲೇ ಪಂಚಾಯತಿಯಿಂದ ಪುರಸಭೆಗೆ ಸೇರ್ಪಡೆ ಮಾಡುವ ಹುನ್ನಾರನ್ನು ಕೈಬಿಡಬೇಕು. ಇಲ್ಲವಾದರೆ ಹಡಲಗೇರಿ ಪಂಚಾಯತಿ ವ್ಯಾಪ್ತಿಯಿಂದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎನ್.ಬಿ.ಹುಲ್ಲೂರ, ಟಿ.ಬಿ.ಬಿರಾದಾರ, ಬಿ.ಟಿ.ಘಾಟಗೆ, ಹಣಮಂತ ಜಟ್ಟಗಿ, ಶಿವಾಜಿ ಚವ್ಹಾಣ, ವಾಯ್.ಬಿ.ಇಂಡಿ, ಎಂ.ಐ.ಹರಿಂದ್ರಾಳ, ಕೆ.ಬಿ.ಮುಲ್ಲಾ ಸೇರಿದಂತೆ ೫೦ಕ್ಕೂ ಹೆಚ್ಚು ಜನರಿದ್ದರು.

Be the first to comment

Leave a Reply

Your email address will not be published.


*