ಗಿಡಮರಗಳಿಂದ ಪಂಚಾಯತಿಗಳು ಆರ್ಥಿಕವಾಗಿಯೂ ಮುಂದಾಗಬಹುದು: ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ:

ಮರ ಗಿಡಗಲ್ಲನ್ನು ಬೆಳೆಸುವಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತ ಸ್ವಇಚ್ಚಾಶಕ್ತಿ ಬೆಳೆಸಿಕೊಂಡು ಗ್ರಾಮೀಣದ ರಸ್ತೆ ಅಕ್ಕಪಕ್ಕದಲ್ಲಿ ಉಪಯುಕ್ತವಾಗುವ ಹಾಗೂ ಆದಾಯದಾಯಕವಾದ ಗಿಡಗಲ್ಲು ಬೆಳೆಸಿದರೆ ಪಂಚಾಯತಿಯ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.



ಪಟ್ಟಣದ ಮಹಾಂತೇಶ ನಗರದಲ್ಲಿ ವಲಯ ಅರಣ್ಯಾಧಿಕಾರಿಗಳ ನೂತನ ಕಛೇರಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಒಂದು ಉಣಸೆ ಹಾಗೂ ಮಾವಿನ ಮರ ಅಂದಾಜು 10ವರ್ಷದ ನಂತರ ಹಣ್ಣು ನೀಡುವ ಮೂಲಕ ಆಧಾಯದಾಯಕವಾಗಿವೆ. ಇಂತಹ ಮರಗಳನ್ನು ಪಂಚಾಯತ್ ವ್ಯಾಪ್ತಿಯಲ್ಲಿ ಬೆಳೆಸಿದರೆ ಇವುಗಳಿಂದಲೇ ಪಂಚಾಯಾತಗೆ ಬರುವ ದಿನಗಳಲ್ಲಿ ಆಧಾಯ ಸಿಗುವಂತಾಗುತ್ತದೆ ಎಂಬುವುದನ್ನು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು. 

ಈಗಾಗಲೇ ಮುದ್ದೇಬಿಹಾಳ ಮತಕ್ಷೇತ್ರದ ಅಭಿರುದ್ಧಿಗೆ ಸಾಕಷ್ಟು ಅನುಧಾನ ಬಂದಿದ್ದು ಇದರ ಬಗ್ಗೆಯೂ ತಾಲೂಕಿನ ಜನರು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು. 

ಪಟ್ಟಣದ ಅತಿಕ್ರಮಣ ಶೀಘ್ರದಲ್ಲಿ ತೆರವು:

ಪಟ್ಟಣವನ್ನು ಅಭಿರುದ್ಧಿ ಪಡಿಸಲು ಸಾಕಷ್ಟು ಶ್ರಮವಹಿಸಿದೆ. ಆದರೆ ಕೆಲ ರಸ್ತೆಗಳಲ್ಲಿ ಕೆಲ ಕೆಟ್ಟಡಗಳಿಂದ ಅತಿಕ್ರಮಣವಾಗಿದ್ದು ಅವುಗಳನ್ನು ಶೀಘ್ರದಲ್ಲಿಯೇ ತೆರವುಗೊಳಿಸಿ ಪಟ್ಟಣವನ್ನು ಆಭಿರುದ್ಧಿ ಪವಿಸಲಾಗುವುದು. ಇದಕ್ಕಾಗಿ ವಿಜಯಪುರ ಜಿಲ್ಲಾಧಿಕಾರಿಗಳು ಹೆಚ್ಚಿನ ಆಸಕ್ತಿವಹಿಸಿದ್ದು ಅಧಿಕಾರಿಗಳು ಯಾರದೇ ಒತ್ತಾಯಕ್ಕೆ ಬಗ್ಗುವುದಿಲ್ಲ. ಜಿಲ್ಲಾಧಿಕಾರಿಗಳಿಗೆ ಕೇವಲ ಅಭಿರುದ್ಧಿಯೊಂದೆ ಗುರಿಯಾಗಿದೆ. ಇಂತಹ ಅಧಿಕಾರಿಗಳು ದೊರಕಿದ್ದು ಜಿಲ್ಲೆಗೆ ಉಪಯುಕ್ತವಾಗಿದೆ ಎಂದು ಶಾಸಕ ನಡಹಳ್ಳಿ ಹೇಳಿದರು. 

ಅರಣ್ಯ ಇಲಾಖೆಯ ಜಿಲ್ಲಾಧಿಕಾರಿಗಳು ಮಾತನಾಡಿ, ಹಿಂದೆ ಮುದ್ದೇಬಿಹಾಳ ತಾಲೂಕಿನಲ್ಲಿ ಸಸಿ ಉತ್ಪಾದನೆಗೆ ಸಾಕಷ್ಟು ಸೌಲಭ್ಯವಿಲ್ಲದ ಕಾರಣ ಅರಣ್ಯ ಬೆಳೆಸುವ ಹಾಗೂ ಅವುಗಳ ರಕ್ಷಣೆಗೆ ತುಂಬಾ ಅನಾನುಕೂಲವಾಗಿತ್ತು. ಆದರೆ ಇಗೆ ಸಾಕಷ್ಟು ಸೌಲಭ್ಯಗಳು ಬಂದಿದ್ದು ಅರಣ್ಯ ರಕ್ಷಣೆಗೆ ಅನುಕೂಲ ವಾಗಿದೆ ಎಂದು ಅವರು ಹೇಳಿದರು. 



 

Be the first to comment

Leave a Reply

Your email address will not be published.


*