ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ಮತಕ್ಷೇತ್ರದ ಪ್ರತಿಗ್ರಾಮದಲ್ಲೂ ಬೆಂಗಳೂರಿನಂತೆ ಸುಸಜ್ಜಿತ ರಸ್ತೆ, ಚರಂಡಿ ಹಾಗೂ ಮೂಲಭೂತ ಸೌಕರ್ಯ ಹೊಂದಬೇಕು ಎನ್ನುವುದೇ ನನ್ನ ಮುಖ್ಯಗುರಿ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕಿನ ಕಂದಗನೂರ ಹಾಗೂ ಚಿರ್ಚಿನಕಲ್ ಗ್ರಾಮದಲ್ಲಿ ಅಂದಾಜು 2.07 ಕೋಟಿ ಸಿ.ಸಿ. ರಸ್ತೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇನ್ನು ಗ್ರಾಮೀಣ ಪ್ರದೇಶದ ಜನರಿಂದ ದೇವಸ್ಥಾನಗಳ ಅಭಿವೃದ್ಧಿ ಪಡಿಸುವಬೇಡಿಕೆಯ ಸಾಕಷ್ಟು ಮನವಿ ಬಂದಿವೆ. ಆದರೆ ದೇವಸ್ಥಾನಗಳಿಗೆ ಸರಕಾರದಿಂದ ಯಾವುದೇ ಅನುಧಾನ ಬರುವುದಿಲ್ಲ. ಆದರೆ ನನ್ನ ಸ್ವಂತ ಹಣದಿಂದ ನನ್ನ ಕೈಲಾದಷ್ಟು ನಾನು ದೇವಸ್ಥಾನ ನಿರ್ಮಾಣಕ್ಕೆ ಸಹಾಯ ಮಾಡುತ್ತೇನೆ ಎಂದು ಅವರು ಹೇಳಿದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ವಿರೋಧಿ ಎಂದು ವಿರೋಧಿಗಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅಲ್ಪಸಂಖ್ಯಾತರಿಗೆ ಮೋದಿಜಿ ನೀಡಿದಂತ ಸೌಕರ್ಯ ಹಾಗೂ ಯೋಜನೆಗಳನ್ನು ಬೇರೆ ಯಾರೂ ನೀಡಿಲ್ಲ ಎಂಬ ವಿಷಯವನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಅಲ್ಪಸಂಖ್ಯಾತರ ಕುಟುಂಬದಲ್ಲಿ ಜನಿಸಿದ ಮಗುವಿನ ಶೈಕ್ಷಣಿಕ ರಂಗಕ್ಕೆ ಬೇಕಾಗುವ ಹಣವನ್ನು ಸರಕಾರದಿಂದಲೇ ಪೂರೈಸುವ ಮಹತ್ತರ ಯೋಜನೆಯನ್ನು ಜಾರಿಗೆ ಮಾಡಿದ್ದು ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
Be the first to comment