ಹರಿಹರ:-ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿ ಹನಗವಾಡಿ ಗ್ರಾಮದ ಸಮೀಪದ ಬರನಿ ಹೊಟೇಲ್ ಮುಂಭಾಗದಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂರು ಜನ ಆರೋಪಿಗಳನ್ನು ಹರಿಹರ ಪೊಲೀಸ್ ಠಾಣೆ ಅಧಿಕಾರಿಗಳು ಬಂಧಿಸಿದ್ದಾರೆ.
ದಿ.12.09.2020 ರಂದು 3 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 4ಕೆಜಿ170 ಗ್ರಾಂ ಅಂದರೆ ಸುಮಾರು 1,25,100 ಬೆಲೆಯ ಗಾಂಜಾವನ್ನು ಹಾಗು ಕೃತ್ಯಕ್ಕೆ ಉಪಯೋಗಿಸಿದ 1.00000 ಬೆಲೆಬಾಳುವ (ಕೆಎ8176) ಕಪ್ಪು ಬಣ್ಣದ ಆಟೊವನ್ನು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ.
ಬಂಧಿತ ಮೂರು ಜನ ಆರೋಪಿಗಳಾದ 1)ರಾಹುಲ್ ತಂದೆ ಸುರೇಶ್ ವೈ24 ವರ್ಷ. ಭದ್ರಾವತಿ ನಗರದ, ಚನ್ನಾಪುರದ ವಾಸಿ .2)ಮಲ್ಲಿಕಾರ್ಜುನ್ (ಮಲ್ಲಿ )@ತಂದೆ ಸ್ವಾಮಿ ಶಿವಮೊಗ್ಗದ ಜ್ಯೋತಿನಗರದ ನಿವಾಸಿ .3)ಪ್ರಮೋದ್ ತಂದೆ ನಾಗರಾಜ್ 23ವರ್ಷ ಭದ್ರಾವತಿಯ ಪೇಪರ್ ಟೌನ್ ನಿವಾಸಿಗಳು.
ಇವರು ಹರಿಹರ ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಇಟ್ಟುಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹನುಮಂತರಾಯ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೀವ್ ಕೆಎಸ್ಪಿಎಸ್ ದಾವಣಗೆರೆ ಜಿಲ್ಲೆ ಮತ್ತು ಶ್ರೀ ನರಸಿಂಹ.ವಿ ತಾಮ್ರ ದ್ವಜ್ ಪೊಲೀಸ್ ಉಪಾಧೀಕ್ಷಕರು ಗ್ರಾಮಾಂತರ ಉಪ ವಿಭಾಗ ದಾವಣಗೆರೆ ಇವರ ಮಾರ್ಗದರ್ಶನದಲ್ಲಿ,ಶ್ರೀ ಶಿವಪ್ರಸಾದ್.ಎಂ.ಸಿ.ಪಿ.ಐ.ಹರಿಹರ ವೃತ್ತ ಇವರ ಮುಂದಾಳತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಹರಿಹರದ ಪೊಲೀಸರು ಯಶಸ್ವಿಯಾಗಿದ್ದಾರೆ .
ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಡಿವೈಎಸ್ಪಿ ನರಸಿಂಹ ವಿ ತಾಮ್ರಧ್ವಜ, ಸಿಪಿಐ ಶಿವಪ್ರಸಾದ್ ಎಂ. ಸಿಬ್ಬಂದಿಗಳಾದ ಶ್ರೀ ನಿಂಗರಾಜ್ ಹೆಚ್, ಶ್ರೀ ನಾಗರಾಜ್ ಸುಣಗಾರ್, ದ್ವಾರಕೇಶ,ಸತೀಶ್, ಶಿವರಾಜ್ ,ಕೃಷ್ಣ ಡಿ ,ರವಿ, ಸಿದ್ದರಾಜು,ಮಹಮ್ಮದ್ ಇಲಿಯಾಜ್ ,ನಾಗರಾಜ್ ಹೆಚ್, ಹಾಗೂ ಜೀಪ್ ಚಾಲಕರಾದ ಮುರಳೀಧರ್ ,ಸಿದ್ದಪ್ಪ ,ಇವರ ಮಿಂಚಿನ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಹನುಮಂತರಾಯ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ ರಾಜೀವ್ ಕೆಎಸ್ಪಿಎಸ್ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ .
Be the first to comment