ರವಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನೆಲೆಕಚ್ಚಿದ ಬೆಳೆಗಳು: ಸೂಕ್ತ ಪರಿಹಾರಕ್ಕೆ ಶಾಸಕ ನಡಹಳ್ಳಿಗೆ ಪ್ರಗತಿಪರ ರೈತರ ಮನವಿ

ವರದಿ: ಕಾಶಿನಾಥ ಬಿರಾದಾರ

ಜಿಲ್ಲಾ ಸುದ್ದಿಗಳು 

ನಾಲತವಾಡ:

ಕೊರೊನಾ ಪರಿಸ್ಥಿಯಲ್ಲಿ ಕಂಗಾಲಾದ ರೈತರಿಗೆ ರವಿವಾರ ರಾತ್ರಿ ಸುರಿದ ಮಳೆಯಿಂದ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿದ ಮಳೆಯಿಂದ ರೈತನ ಜಮೀನಿನಲ್ಲಿ ನೀರು ತುಂಬಿದ ಪರಿಣಾಮ ರೈತನ ಬೆಳೆ ಸಂಪೂರ್ಣ ಜಲಾಮೃತಗೊಂಡಿದೆ. ಇದರಿಂದ ಕೊರೋನಾದಿಂದ ತತ್ತರಿಸಿದ ರೈತನಿಗೆ ಮತ್ತೊಂದು ಆಘಾತವಾಗಿದೆ. 

ಪರಿಹಾರಕ್ಕೆ ಆಗ್ರಹ:

ಈಗಾಗಲೇ ಕೊರೋನಾ ಪರಿಸ್ಥಿತಿಗೆ ರೈತರು ತತ್ತರಿಸಿದ್ದಾರೆ. ಈಗ ಧಾರಾಕಾರದ ಮಳೆಯಿಂದ ಹೊಲದಲ್ಲಿ ಬೆಳೆ ನೆಲಕಚ್ಚಿವೆ. ಇದನ್ನು ಸಮಗ್ರವಾಗಿ ಸಮೀಕ್ಷೆ ನೆಡೆಸಿ ಕಂಗಾಲಾದ ರೈತರಿಗೆ ಸರಕಾರದಿಂದ ಸೂಕ್ತ ಪರಿಹಾರವನ್ನು ಕೊಡಿಸಬೇಕೆಂದು ನಾಲತವಾಡದ ಪ್ರಗತಿಪರ ರೈತ ಶಂಕರಾವ್ ದೇಶಮುಖ, ಬಸವರಾಜ ಗಡ್ಡಿ,  ಆಲೂರ ಗ್ರಾಮದ ರೈತ ಬಸವರಾಜ ಪಾಟೀಲ ಸೇರಿದಂತೆ ಪ್ರಗತಿಪರ ರೈತರು ಆಗ್ರಹಿಸಿದ್ದಾರೆ. 

ಶಾಸಕರು ಬೇಟಿ ನೀಡಲಿ:

ನಾಲತವಾಡ ಪಟ್ಟಣದ ರೈತರ ಜಮೀನಿಗೆ ಮಳೆ ನೀರು ನಿಂತು ಬೆಳೆ ಹಾನಿಗೊಳಗಾಗಿದ್ದು ಇದರ ಬಗ್ಗೆ ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷರಾದ ಎ.ಎಸ್.ಪಾಟೀಲ ನಡಹಳ್ಳಿ ಅವರು ಬೇಟಿ ನೀಡಿ ಪರಿಶೀಲಿಸಿ ಹಾನಿಗೊಳಗಾದ ರೈತರಿಗೆ ಸರಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕೆಂದು ಪ್ರಗತಿಪರ ರೈತರು ಮನವಿ ಮಾಡಿದ್ದಾರೆ. 

 ಮಳೆಯಲ್ಲಿಯೇ ಓದುಗರಿಗೆ ಪೇಪರ್ ಮುಟ್ಟಿಸಿದ ಹುಡುಗರು:

ನಾಲತವಾಡದಲ್ಲಿ ರಾತ್ರಿ ಧಾರಾಕಾರ ಮಳೆಯಾಗಿದ್ದು ಗ್ರಾಮದ ಪ್ರತಿಯೊಬ್ಬ ಓದುಗರಿಗೂ ನ್ಯೂಸ್ ಪೇಪರ್ ಮಾತ್ರ ಸರಿಯಾದ ಟೈಮ್ನಲ್ಲಿ ಮುಟ್ಟಿಸುವ ಪ್ರಯತ್ನ ಮಾಡಿದ ಹುಡುಗರಿಗೆ ಸ್ಥಳೀಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಳೆ ಚಳಿಗೆ ಅಂಜದ ಹುಡುಗರು ಬೆಳಿಗ್ಗೆ 5 ಗಂಟೆಗೆ ಓದುಗರಿಗೆ ಪೇಪರ್ ಮುಟ್ಟಿಸುವ ಕಾರ್ಯದಲ್ಲಿ ತೊಡಗಿದ್ದು ಯಲ್ಲರಿಗೂ ಮೆಚ್ಚುಗೆ ಪಾತ್ರವಾಗಿದೆ. 



 

Be the first to comment

Leave a Reply

Your email address will not be published.


*