ರಾಜ್ಯ ಸರಕಾರದ ಭ್ರಷ್ಠಾರವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಆಗ್ರಹಿಸಿದ ಯುತ್ ಕಾಂಗ್ರೆಸ್…..! ಕಾಂಗ್ರೆಸಗೆ ಬೆಂಬಲಿಸಿದ ರಾಜ್ಯ ರೈತ ಸಂಘದ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

ರಾಜ್ಯ ಸರಕಾರದ ರೈತ ವಿರೋಧಿ ಭೂಸುದಾರಣಾ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡೆಗಳನ್ನು ತಕ್ಷಣದಿಂದಲೇ ವಾಪಸ ತೆಗೆದುಕೊಳ್ಳುವಂತೆ ಮಾಡಿ ಕೊರೊನಾ ನಿಯಂತ್ರಣ ಕಾರ್ಯಕ್ರಮದಲ್ಲಿ ನಡೆದ ವ್ಯಾಪಕ ಭ್ರಷ್ಠಾಚಾರದ ವಿರುದ್ಧ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಗುರುವಾರ ತಾಲೂಕಾ ಯುವ ಕಾಂಗ್ರೆಸ್ ಸಮೀತಿಯವರು ತಹಸೀಲ್ದಾರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.



ಕೋವಿಡ್-19 ನಿಯಂತ್ರಿಸಲು ರಾಜ್ಯ ಸರಕಾರ ವೆಂಟಿಲೇಟರ್ಸ, ಪಿ.ಪಿ.ಇ ಕೀಟ್, 500ಮಿ.ಲೀ. ಹ್ಯಾಡ್ ಸ್ಯಾನಿಟೈಜರ, ಆರ್.ಟಿ.-ಟಿ.ಸಿ.ಆರ್.+ಆರ್.ಎನ್.ಎ. ಕಿಟ್ಸ್, ಎನ್.95 ಮಾಸ್ಕ, ಆಕ್ಸಿಜನ ಉಪಕರಣ, ಥರ್ಮಲ್ ಸ್ಕ್ಯಾನರ ಸೇರಿದಂತೆ ಇನ್ನಿತಗಳನ್ನು ಖರಿದಿಸುವಲ್ಲಿ ವ್ಯಾಪಕ ಭ್ರಷ್ಠಾಚಾರ ನಡೆಸಿದೆ. ಇದರಿಂದ ಸಾರ್ವಜನಿಕರ ಹಣ ಲೂಟಿ ಹೊಡೆದಂತಾಗಿದೆ. ಅಲ್ಲದೇ 1974ರಲ್ಲಿನ ುಳುವವನೇ ಭೂಮಿಯ ೊಡೆಯ ಎಂಬ ಸುಗ್ರೀವಾಜ್ಞಾ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ 1986ಯನ್ನು ರಾಜ್ಯ ಸರಕಾರ ತಿದ್ದುಪಡೆ ತಂದು ದೊಡ್ಡ ದೊಡ್ಡ ವ್ಯಾಪಾಸ್ಥರು ಹಾಗೂ ಸಂಸ್ಥೆಗಳು ರೈತರನ್ನು ಸುಲಿಗೆ ಮಾಡಿ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರಿದಿಸಲು ಅವಕಾಶ ಮಾಡಿಕೊಟ್ಟಿದ್ದು ರೈತರ ವಿರೋಧವಾಗಿದೆ.


ರೈತ ಸಂಘದಿಂದ ಬೆಂಬಲ:

ರಾಜ್ಯ ಸರಕಾರದ ಎಪಿಎಂಸಿ ಕಾಯ್ದೆ ತಿದ್ದುಪಡೆ ಮಡಿ ರೈತರನ್ನು ಅರ್ಧ ಹೊಟ್ಟೆಯಲ್ಲಿ ಉಳಿಯುವಂತೆ ಮಾಡಿದೆ. ಕೇವಲ ಗಣ್ಯ ವ್ಯಾಪಾರಸ್ಥರಿಗೆ ಹಾಗೂ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಮಾತ್ರ ಉಪಯುಕ್ತವಾಗುವಂತೆ ಕಾಯ್ದೆಯನ್ನು ತಿದ್ದಪಡಿಸಿರುವ ಯಡಿಯೂರಪ್ಪನವರ ಸರಕಾರಕ್ಕೆ ನಾಚಿಗೆಯಾಗಬೇಕು. ಕಾಯ್ದೆ ತಿದ್ದುಪಡೆಯನ್ನು ಕೂಡಲೇ ಹಿಂಪಡೆದು ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಸಿಎಂ ಯಡಿಯೂರಪ್ಪನವರಿಗೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ ಹೇಳಿದರು.



ಈ ಸಂದರ್ಭದಲ್ಲಿ ತಾಲೂಕಾ ಯುತ್ ಕಾಂಗ್ರೆಸ್ ಅಧ್ಯಕ್ಷ ರಫೀಕ ಶಿರೋಳ, ಬ್ಲಾಕ್ ಕಾಂಗ್ರೆಸ್ ಎಸ್.ಸಿ. ಮೋರ್ಚಾ ಅಧ್ಯಕ್ಷ ಅಶೋಕ ಅಜಮನಿ, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ವಾಯ್.ಎಚ್.ವಿಜಯಕರ, ಶರಣಬಸಪ್ಪ ಚಲವಾದಿ, ಪುರಸಭೆ ಸದಸ್ಯ ಮೆಹಬೂಬ ಗೊಳಸಂಗಿ, ರಿಯಾಜಅಹ್ಮದ ಢವಳಗಿ, ಕಾಮರಾಜ ಬಿರಾದಾರ, ಮೆಹಬೂಬ ಮೊಕಾಶಿ, ದಾವಲಮಲೀಕ ಗೊಳಸಂಗಿ, ಮಹಾಂತೇಶ ಹೆಬ್ಬಾಳ, ಹುಸೇನ ಮುಲ್ಲಾ(ಕಾಳಗಿ), ಎಂ.ಎ.ಬಾಗವಾನ, ಎಸ್.ಎಂ.ಮೇಲಿನಮನಿ, ವಾಯ್.ಎಚ್.ಮ್ಯಾಗೇರಿ, ರಮಜಾನ ನದಾಫ ಸೇರಿದಂತೆ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರಿದ್ದರು.

Be the first to comment

Leave a Reply

Your email address will not be published.


*