ಭೂಸುಧಾರಣೆಯ ಹರಿಕಾರ ದೇವರಾಜ ಅರಸು- ಮಲ್ಲಿಕಾರ್ಜುನ ಹೆಳವರ ಹೆಬ್ಬಾಳ

ವರದಿ:ಅಮರೇಶ ಕಾಮನಕೇರಿ

ಕಲಬುರಗಿ: ಸಾಮಾಜಿಕ ಸಮಾನತೆಯ ಹರಿಕಾರ ಡಿ. ದೇವರಾಜ ಅರಸು ಅವರು ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ಕಣ್ಣು ತೆರೆಸಿದರು. ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿ, ಅವರಿಗೆ ಮೀಸಲಾತಿ ಕಲ್ಪಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ರಾಜಕೀಯ ಸ್ಥಾನಮಾನ ಹಾಗೂ ಎಲ್ಲಾ ರೀತಿಯ ಆದ್ಯತೆ ನೀಡಿದ್ದಾರೆ ಎಂದು ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ನಿರ್ದೇಶಕರಾದಂತ ಬಸವರಾಜ ಹೆಳವರ ಯಾಳಗಿ ತಿಳಿಸಿದರು.ನಗರದ ಸಂತೋಷ ಕಾಲೋನಿಯ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಅಖಿಲ ಕರ್ನಾಟಕ ಹೆಳವ ಸಮಾಜ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಗುರುವಾರ ಏರ್ಪಡಿಸಿದ್ದ ಡಿ.ದೇವರಾಜ ಅರಸು ಅವರ 105 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವ ಸಲ್ಲಿಸುತ್ತಾ ಸಾಮಾಜಿಕ ನ್ಯಾಯದ ವಿಚಾರದಲ್ಲಿ ದೇವರಾಜ ಅರಸರು ಮೇರುದನಿಯಾಗಿದ್ದರು ಎಂದರು.

ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಆರ್. ಹೆಳವರ ಹೆಬ್ಬಾಳ ಪ್ರಾಸ್ತಾವಿಕವಾಗಿ ಮಾತನಾಡಿ ಅರಸು ನಾಡು ಕಂಡ ಧೀಮಂತ, ಮೇಧಾವಿ ರಾಜಕಾರಣಿ. ಉಳುವವನೆ ಭೂಮಿಯ ಒಡೆಯ ಪದ್ಧತಿ, ಮೈಸೂರು ಭಾಗದಲ್ಲಿ ಜೀತ ಪದ್ಧತಿ ವಿಮುಕ್ತಿ, ಮಲಹೊರುವ ಪದ್ಧತಿ ನಿಷೇಧಕ್ಕೆ ಸೇರಿದಂತೆ ಹಲವಾರು ಕಾಯಿದೆಗಳನ್ನು ಜಾರಿಗೆ ತಂದಿದ್ದ ಅರಸು ಅವರು, ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದರು. ಅವರು ಈ ನಾಡಿಗೆ ಕೊಟ್ಟಂತಹ ಸೇವೆ, ಜಾರಿಗೆ ತಂದ ಕಾರ್ಯಕ್ರಮ ಯಾರೂ ಕೂಡ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ  ಜಿಲ್ಲಾಧ್ಯಕ್ಷ ಸಾಯಬಣ್ಣ ಹೆಳವರ ಮಾತನಾಡಿ ಹಿಂದುಳಿದ ವರ್ಗಗಳ ಪರವಾಗಿ ಕಾಳಜಿ ಹೊಂದಿದ್ದ ಅರಸು ಅವರು ಸಮಾಜಕ್ಕೆ ಮಾಡಿರುವ ಕಾರ್ಯಗಳು ಅಚ್ಚಳಿಯದೆ ಉಳಿದಿವೆ.  ಪ್ರಮುಖವಾಗಿ ಭೂ-ಸುಧಾರಣಾ ಕಾಯ್ದೆ , ಕರ್ನಾಟಕ ಋಣಮುಕ್ತ ಕಾಯ್ದೆ ತಂದು ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತಂದು ಹಿಂದುಳಿದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಅರಸು ಅವರ ಜಯಂತಿ ಆಚರಿಸುವ ಮೂಲಕ ಅವರ ಜ್ಞಾನ ಹಾಗೂ ಆಲೋಚನೆಗಳನ್ನು ನಾವೆಲ್ಲರೂ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಹೆಳವ ಸಮಾಜದ ಮುಖಂಡರಾದ ಗುರಲಿಂಗ ಎಚ್. ಹೆಳವರ ಹಾಗೂ ಬಸವರಾಜ ರಟಕಲ, ಸುನೀಲ ಪೂಜಾರಿ, ಸುಪ್ರೀತ ಹೆಳವರ, ಸುದಿಕ್ಷಾ ಹೆಳವರ ಇನ್ನಿತರರು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*