ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ “ಜಾಗತಿಕ ಸೊಳ್ಳೆ ದಿನ” ತಾಲೂಕಾ ಮಟ್ಟದ ಕಾರ್ಯಕ್ರಮವನ್ನು ಮುದ್ದೇಬಿಹಾಳದಲ್ಲಿ ಆಚರಿಸಲಾಯಿತು.
ಹೌದು, ಅಚ್ಚರಿ ಎನಿಸಿದರು ಇದು ಸತ್ಯ. ಜಗತ್ತಿನಾದ್ಯಂತ ಆಗಸ್ಟ್ 20ರಂದು ಸೊಳ್ಳೆಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದಿನ ದಿನಗಳಲ್ಲಿ ಪ್ರಾಣಿಗಳಿಂದ ಹಿಡಿದು ಮನುಷ್ಯರ ತನಕ ಪ್ರತಿಯೊಂದಕ್ಕೂ ವಿಶೇಷ ದಿನಗಳಿವೆ. ಅದೇ ರೀತಿ ಸೊಳ್ಳೆಗಳ ದಿನವು ಒಂದಿದೆ. ಈ ದಿನಕ್ಕೂ ಅದರದೇ ಆದ ಇತಿಹಾಸ ಮತ್ತು ಮಹತ್ವವಿದೆ.
ವಿಶ್ವ ಸೊಳ್ಳೆ ದಿನದ ಮಹತ್ವ:
‘ದ ಲಂಡನ್ ಸ್ಕೂಲ್ ಆಫ್ ಹೈಜಿನ್ ಆಂಡ್ ಟ್ರಾಪಿಕಲ್ ಮೆಡಿಸನ್’ ಈ ದಿನವನ್ನು ಆಚರಣೆ ಮಾಡುತ್ತದೆ. ಸೊಳ್ಳೆಯಿಂದ ಹರಡುವಂತಹ ಮಲೇರಿಯಾ ಮತ್ತು ಇತರ ಪ್ರಾಣಾಂತಿಕ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದೇ ಸೊಳ್ಳೆ ದಿನದ ಉದ್ದೇಶವಾಗಿದೆ. ಮಲೇರಿಯಾವು ಸೊಳ್ಳೆಯಿಂದ ಹರಡುವುದು ಎಂದು ಪತ್ತೆ ಮಾಡಿದಂತಹ ಸರ್ ರೋಸ್ ಮತ್ತು ಈ ಬಗ್ಗೆ ಕೆಲಸ ಮಾಡಿದಂತಹ ಹಲವಾರು ವಿಜ್ಞಾನಿಗಳಿಗೆ ಈ ದಿನದಂದು ಗೌರವ ಸಲ್ಲಿಸಲಾಗುತ್ತದೆ. ವಿಶ್ವದ ಹಲವು ದೇಶಗಳಲ್ಲಿ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ. ಆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಜಿಲ್ಲಾ ಹೋಗುವಾಗ ಅಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ:ಜೇಬುನ್ನಿಸಾ ಬೀಳಗಿ ಹೇಳಿದರು
ಡಾ:ಸತೀಶ ತಿವಾರಿ ತಾಲೂಕ ಆರೋಗ್ಯ ಅಧಿಕಾರಿಗಳು ಮಾತನಾಡಿ, ಕೋವಿಡ್ 19 ಇಂತ ಕಠಿಣ ಸಂದರ್ಭದಲ್ಲಿಯೂ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ ಆರೋಗ್ಯ ಇಲಾಖೆಯ ಆದ್ಯ ಕರ್ತವ್ಯ ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ನಗರದಲ್ಲಿ ರೋಗ ನಿಯಂತ್ರಣ ಕುರಿತು ಜಾಗೃತಿ ಮೂಡಿಸಬೇಕೆಂದು ಹೇಳಿದರುರೋಗ ನಿಯಂತ್ರಣ ಕುರಿತು
ನಂತರ ಜಿಲ್ಲಾ ಕೀಟಶಾಸ್ತ್ರತಜ್ಞ ರಿಯಾಜ್ ದೇವರಳ್ಳಿ ಮಾತನಾಡಿ ಸೊಳ್ಳೆ ನಿಯಂತ್ರಣಕ್ಕೆ ಈ ಕೆಳಗಿನ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
1. ಪರಿಸರದ ಸ್ವಚ್ಛತೆಯನ್ನುಕಾಪಾಡಬೇಕು. ಪರಿಸರ, ನೀರು ಮತ್ತು ಗಾಳಿ ಕಲುಷಿತಗೊಳ್ಳದ ರೀತಿಯಲ್ಲಿ ನಾವು ಬದುಕಬೇಕಾದಅನಿವಾರ್ಯತೆಇದೆಮತ್ತುಇತರಜೀವ ಸಂಕುಲಗಳನ್ನು ಬದುಕಲು ಬಿಡಬೇಕು
2. ಸೂಕ್ತ ನೀರಿನ ನಿರ್ವಹಣೆಗಾಗಿ ಬೇಕಾದ ವ್ಯವಸ್ಥೆ ಮಾಡಬೇಕು. ಉತ್ತಮಚರಂಡಿ ವ್ಯವಸ್ಥೆ, ನದಿ, ಕೆರೆ, ತೊರೆ, ಕಾಲುವೆಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.
3. ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಮತ್ತುಕೈಗಾರಿಕಾ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ನಿಂತ ನೀರು ಸೊಳ್ಳೆಗಳಿಗೆ ಸ್ವರ್ಗವಿದ್ದಂತೆ.
4. ಎಲ್ಲೆಂದರಲ್ಲಿ ಕಸ ಎಸೆಯುವುದು, ತಿಪ್ಪೆಗುಂಡಿಗಳಲ್ಲಿ ನೀರು ನಿಲ್ಲುವುದು, ಘನ ಮತ್ತುದ್ರವ್ಯ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿನಿರ್ವಹಣೆಮಾಡುವುದು ಇತ್ಯಾದಿಗಳಿಂದ ಸೊಳ್ಳೆಗಳ ಸಂಖ್ಯೆ ವೃದ್ಧಿಸುತ್ತದೆ.
5. ಕೃತಕವಾಗಿ ನೀರು ನಿಲ್ಲುವ ಜಾಗಗಳಾದ ತೆಂಗಿನಚಿಪ್ಪು, ಹೂದಾನಿ, ಟಯರ್, ಖಾಲಿ ಡಬ್ಬ ಮತ್ತು ಕ್ಯಾನ್‍ಗಳು, ಅಕ್ವೇರಿಯಂ, ಏರ್‍ಕಂಡಿಷನರ್ ಮತ್ತುಏರ್‍ಕೂಲರ್ ಇತ್ಯಾದಿಗಳಲ್ಲಿ ಸೊಳ್ಳೆ ನಿಲ್ಲದಂತೆ ಮಾಡಿಕೊಳ್ಳಬೇಕು
6. ಸೊಳ್ಳೆ ಮರಿಗಳನ್ನು ತಿನ್ನುವ ಗಪ್ಪಿ ವಿiÁನುಗಳನ್ನು ಬೆಳೆಸಿ ಸೊಳ್ಳೆಗಳ ನಿಯಂತ್ರಣ ಮಾಡಬೇಕು.
7. ಕೀಡನಾಶಕಗಳ ಬಳಕೆ ಸೊಳ್ಳೆ ನಿಯಂತ್ರಣ ಮಾಡುವ ಔಷಧಿಗಳ ಬಳಕೆ ಮುಂತಾದುವುಗಳಿಂದ ಸೊಳ್ಳೆಗಳ ಸಂತಾನಭಿವೃದ್ಧಿಆಗದಂತೆ ಮಾಡಬೇಕು.
8. ಸೊಳ್ಳೆಗಳ ಬೆಳವಣಿಗೆಗೆ ಪೂರಕವಾಗುವಂತಹಯಾವುದೇರೀತಿಯ ಪರಿಸರ ಮಾಲಿನ್ಯವನ್ನತಡೆಗಟ್ಟಬೇಕು.
ಒಟ್ಟಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸುವ ಮತ್ತು ಸಂಖ್ಯೆ ವೃದ್ಧಿಸುವುದನ್ನು ನಿಯಂತ್ರಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಬೇಕಾದ ತುರ್ತು ಅವಶ್ಯಕತೆ ಇದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಯಲ್ಲಪ್ಪ ಛಲವಾದಿ ಐ ಸಿ ಮಾನಕರ್ ಹಿರಿಯ ಆರೋಗ್ಯ ಸಹಾಯಕರು ಮತ್ತು ಎಸ್ ಸಿ ರುದ್ರವಾಡಿ ತಾಲೂಕ ಮಲೇರಿಯ ಚಿಕಿತ್ಸಾ ಮೇಲ್ವಿಚಾರಕರು ವೀರೇಶ್ ಎಸ್ ಬಿ ಮಧು ಟಕ್ಕಳಕಿ ಏನ್ ಎಚ್ ಬೋರ್ಗಿ
ಆರೋಗ್ಯ ಸಹಾಯಕರು ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗಳಾದ ಶಿವಾನಂದ ಬೊಮ್ಮನಹಳ್ಳಿ ಆನಂದ ಬಾಗೇವಾಡಿ ಹಾಗೂ ಮುದ್ದೇಬಿಹಾಳ ಹಾಗೂ ತಾಳಿಕೋಟಿ ನಗರದ ಆಶಾ ಕಾರ್ಯಕರ್ತರು ಹಾಜರಿದ್ದರು ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಎಂ ಎಸ್ ಗೌಡರ ಆರೋಗ್ಯ ಸಹಾಯಕರು ನೆರವೇರಿಸಿದರು.
Be the first to comment