ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಸಂಗೋಳ್ಳಿ ರಾಯಣ್ಣ ವೃತ್ತಕ್ಕೆ ಕೆ.ಆರ್.ಡಿ.ಸಿ.ಎಲ್. ಇಲಾಖೆಯಿಂದ ನೆಡೆದಿರುವ ರಸ್ತೆ ಕಾಮಗಾರಿಯಿಂದ ಹಾನಿಯಾದ ಹಿನ್ನೆಲೆ ತಕ್ಷಣದಲ್ಲಿಯೇ ಒಗ್ಗೂಡಿದ ಹಾಲುಮತ ಜನರು ಕಾಮಗಾರಿಕೆಯೊಂದಿಗೆ ರಸ್ತೆ ತಡೆ ನಡೆಸಿ ದಿಡೀರ್ ಪ್ರತಿಭಟನೆಗ ಮುಂದಾದ ಘಟನೆ ಸೋಮವಾರ ನಡೆದಿದೆ.
ಹೌದು, ಮುದ್ದೇಬಿಹಾಳ ಪಟ್ಟಣದ ವ್ಹಿ.ಬಿ.ಸಿ. ಹತ್ತಿರ ನಿರ್ಮಿಸಿರುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತಕ್ಕೆ ಹಾನಿ ಉಂಟು ಮಾಡಿದ್ದಾರೆ. ಇದನ್ನು ಗಮನಿಸಿದ ಓರ್ವರು ಹಾನಿಗೆ ಕಾರಣ ಕೇಳಿದ್ದಕ್ಕೆ ಸಿಡಿಮಿಡಿಗೊಂಡ ಕೆ.ಆರ್.ಡಿ.ಸಿ.ಎಲ್. ಕಾರ್ಮಿಕನಿಂದ ರಸ್ತೆ ತಡೆಯಾಗುವಂತಹ ಪರಿಸ್ಥಿತಿ ಎದುರಾಯಿತು.
ಮದ್ಯಸ್ಥಿಕೆ ವಹಿಸಿದ ತಹಸೀಲ್ದಾರ ಎಂ.ಎಸ್.ಮಳಗಿ:
ಸ್ಥಳದಲ್ಲಿ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನವೇ ಘಟನೆ ಬಗ್ಗೆ ವಿವರ ಪಡೆದುಕೊಂಡ ತಹಸೀಲ್ದಾರ ಎಂ.ಎಸ್.ಮಳಗಿ ಅವರು ಸ್ಥಳಕ್ಕೆ ಆಗಮಿಸಿ ಘಟನೆ ಬಗ್ಗೆ ಸಂಪರ್ಣ ಮಾಹಿತಿ ಪಡೆದುಕೊಂಡರು. ನಂತರ ಕೆ.ಆರ್.ಡಿ.ಸಿ.ಎಲ್. ಅಧಿಕಾರಿಗಳೊಂದಿಗೆ ಮಾತನಾಡಿದ ವೃತ್ತಕ್ಕೆ ಆದಂತಹ ಹಾನಿಯನ್ನು ತುಂಬಿಕೊಟ್ಟು ಸಮಾಜದವರಿಗೆ ಅನುಕೂಲ ಮಾಡಿಕೊಡಬೇಕೆಂದು ಸಮಾಜದ ಪರವಾಗಿ ಮನವಿ ಮಾಡಿದರು.
ದಿಡೀರ್ ರಸ್ತೆ ತಡೆದ ಹಾಲುಮತ ಸಮಾಜದ ಹಿರಿಯರು:
ಸಂಗೊಳ್ಳಿ ರಾಯಣ್ಣನ ವೃತ್ತಕ್ಕೆ ಹಾನಿ ಉಂಟು ಮಾಡಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಹಾಲುಮತದ ಸಮಾಜದ ಹಿರಿಯರು ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಇಟ್ಟು ರಸ್ತೆ ತಡೆ ನಡೆಸಿದರು. ಇದರಿಂದ ಸುಮಾರು ಅರ್ಧ ಘಂಟೆಯ ವರೆಗೂ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು.
ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಪ್ರತಿಭಟನಾಕಾರರು:
ಸಂಗೊಳ್ಳಿ ರಾಯಣ್ಣನವರ ವೃತ್ತ ಹಾನಿ ಉಂಟು ಮಾಡಿದ ಹಿನ್ನೆಲೆ ಹಾಲುಮತ ಸಮಾಜದವರು ರಸ್ತಗೆ ಕಲ್ಲುಗಳನ್ನಿಟ್ಟು ರಸ್ತೆ ನೆಡೆಸಿದ ಹಿನ್ನೆಲೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಪ್ರತಿಭಟನಾಕಾರರು ವಾಗ್ವಾದಕ್ಕೆ ಇಳಿದಿದ್ದು ಕಂಡುಬಂದಿತು.
ಸಮಾಜದ ಹಿರಿಯರಿಂದ ಆರೋಪ:
ಮುದ್ದೇಬಿಹಾಳ ಪಟ್ಟಣದಲ್ಲಿ ರಸ್ತೆ ಕಾಮಗಾರಿಯಾಗುತ್ತಿರುವುದು ಸ್ವಾಗತಾರ್ಹವಾಗಿದೆ. ಅಲ್ಲದೇ ಇದೇ ರಸ್ತೆಯುದ್ಧಕ್ಕೂ ಹಲವಾರು ಸಮಾಜದ ಹೋರಾಟಗಾರರು ಹಾಗೂ ದೇಶಪ್ರೇಮಿಗಳ ವೃತ್ತಗಳನ್ನು ಹಿಂದಿನಿಂದಲೂ ನಿರ್ಮಾಣ ಮಾಡಲಾಗಿದೆ. ಆದರೆ ಬಹುತೇಕ ಎಲ್ಲ ವೃತ್ತಗಳನ್ನು ಬಿಟ್ಟು ಕೇವಲ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ವೃತ್ತಕ್ಕೆ ಮಾತ್ರ ಹಾನಿಯಾಗಿದ್ದರ ಹಿಂದೆ ದುರುದ್ದೇಶ ಅಡಗಿದೆ ಎಂಬ ಸಂಶಯ ಮೂಡಿದೆ. ಆದ್ದರಿಂದ ಇದರ ಬಗ್ಗೆ ತಾಲೂಕಾ ತಹಸೀಲ್ದಾರರು ಗಮನ ಹರಿಸಿ ಇಂತಹ ಘಟನೆ ಮುಂದಾಗದಂತೆ ನೋಡಿಕೊಳ್ಳಬೇಕು ಎಂದು ಹಾಲುಮತ ಸಮಾಜದ ಹಿರಿಯರು ಆಗ್ರಹಿಸಿದ್ದಾರೆ.
Be the first to comment