ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಕೊರೊನಾ ಭೀತಿ ಜನರ ಆರೋಗ್ಯದಲ್ಲಿ ಮಾತ್ರವಲ್ಲದೇ ಕೆಲ ಖಾಸಗಿ ಕೆಲಗಾರರಿಗೂ ಹೆಮ್ಮಾರಿಯಾಗಿದೆ. ಆದರೆ ಜೀವನ ನೆಡೆಸಲೇ ಬೇಕು ಎಂಬ ದಿಸೆಯಲ್ಲಿ ಕೆಲವರು ಹಣ್ಣು ಮತ್ತು ತರಕಾರಿ ವ್ಯಾಪಾರಕ್ಕೆ ಇಳಿದರೆ ಇನ್ನೂ ಕೆಲವರು ಕೂಲಿಗಳಾಗಿ ದುಡಿಮೆ ನಡೆಸಿ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಕೆಲ ಕರಾಟೆ ಶಿಕ್ಷಕರು ಕಟ್ಟಡ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ ಜೀವನ ನಡತೆ ನೋಡಿದ ಎಲ್ಲರಿಗೂ ಮನನೋವು ಬಾರದೇ ಇರದು.
ಹೌದು, ಕೆಲ ವರ್ಷಗಳ ಹಿಂದೆ ಬಾಲಕಿಯರ ಮೇಲೆ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿದ್ದಂತೆ ಅಂದಿನ ಕೇಂದ್ರ ಸರಕಾರ ಕರಾಟೆಯನ್ನು ಒಂದು ಕ್ರೀಡೆಯಂದು ಘೋಷಣೆ ಮಾಡಿದ್ದು ಅಲ್ಲದೇ ಬಹುತೇಕ ಶಾಲೆಗಳಲ್ಲಿ ಕರಾಟೆ ಕ್ರೀಡೆಯನ್ನು ಕಡ್ಡಾಯಗೊಳಿಸಿ ಕರಾಟೆ ತರಬೇತುದಾರಿಗೆ ಎಲ್ಲಲ್ಲಿದ ಸನ್ಮಾನ ಸಮಾರಂಭಗಳನ್ನು ಏರ್ಪಡಿಸಿದ ಉದಾಹರಣೆಗಳಿವೆ. ಆದರೆ ಒಂದು ಅಪಾಯದಿಂದ ಪಾರಾದ ಮೇಲೆ ಹಿಂದಿರುಗಿ ನೋಡುವದು ಯಾವ ಲೆಕ್ಕ ಎಂಬಂತೆ ಕರಾಟೆ ಕ್ರೀಡೆಯನ್ನು ಕಡೆಗಣಿಸಲಾಯಿತು.
ಕಟ್ಟಡ ಕಾರ್ಮಿಕನಾದ ಕರಾಟೆ ತರಬೇತುದಾರ:
ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿ ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ಕರಾಟೆ ತರಬೇತುದಾರನಾಗಿ ಸೇವೆ ಸಲ್ಲಿಸುತ್ತಿದ್ದು ಅಂತರಾಷ್ಟ್ರಮಟ್ಟದ ಕರಾಟೆ ಕ್ರೀಡಾ ತರಬೇತುದಾರ ಗಂಗಪ್ಪ ಲಮಾಣಿ ಎಂಬುವರು ಲಾಕ್‌ಡೌನ್‌ನಲ್ಲಿ ಶಾಲೆ ಬಂದ್ ಮಾಡಿದ ಹಿನ್ನೆಲೆಯಲ್ಲಿ ತಮ್ಮ ಕುಟುಂಬ ನಿರ್ವಹಣೆಗಾಗಿ ಆಂದ್ರ ಪ್ರದೇಶದ ಹೈದ್ರಾಬಾದನಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಮೆ ಮಾಡುತ್ತಿದ್ದಾರೆ. ಇವರನ್ನು ವಾಟ್ಸ್‌ಆಪ್‌ನಲ್ಲಿ ನೋಡಿದಂತೆ ಸಾವಿರಾರು ವಿದ್ಯಾರ್ಥಿಗಳು ಕಣ್ಣಿರು ಹಾಕಿದ ಉದಾಹರಣೆಗಳಿವೆ.
ಕರಾಟೆತರಬೇತಿ ಪ್ರಾರಂಭಕ್ಕೆ ಅನುಮತಿಸಿ:
ಈಗಾಗಲೇ ದೇಶದಲ್ಲಿ ಕೆಲ ಕ್ರೀಡೆಗಳಿಗೆ ಹಾಗೂ ತರಬೇತಿಗೆ ಸರಕಾರಗಳು ಅನುಮತಿಸಲಾಗಿದೆ. ಇದರಿಂದ ಸಾಕಷ್ಟು ಜನರಿಗೆ ಉಪ ಜೀವನ ನೆಡೆಸಲು ಅನುಕೂಲವಾಗಿದೆ. ಅದರಂತೆ ರಾಜ್ಯದಲ್ಲಿ ಕರಾಟೆ ತರಬೇತಿಯನ್ನು ಪ್ರಾರಂಭಿಸಲು ಕರಾಟೆ ಶಿಕ್ಷಕರಿಗೆ ಅನುಮತಿಸಬೇಕಿರುವುದು ಅತೀ ಅವಶ್ಯಕವಿದೆ. ಇಲ್ಲವಾದರೆ ಕರಾಟೆಯನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಲಕ್ಷಾನಗಟ್ಟಲೆ ತರಬೇತುದಾರರು ಬೀದಿ ಬೀಳುವುದು ಮಾತ್ರ ಖಚಿತವಾಗಿದೆ.
“ಕರಾಟೆ ಕ್ರೀಡೆಯು ನನ್ನ ಜೀವನವಾಗಿತ್ತು. ಇದರಲ್ಲಿ ಸಾಕಷ್ಟು ಬಂಗಾರದ ಪದಕಗಳನ್ನು ಪಡೆದಿದ್ದೇನೆ. ಅದರಂತೆ ಕರಾಟೆಯಿಂದಲೇ ಒಂದು ಖಾಸಗಿ ಶಾಲೆಯಲ್ಲಿ ತರಬೇತುದಾರನಾಗಿ ಸೇರಿದ್ದೆ ನನ್ನ ಜೀವನ ನಡೆಸಲು ಸಾಕಷ್ಟು ಅನುಕೂಲವಾಯಿತು. ಆದರೆ ಕೊರೊನಾ ಲಾಕ್‌ಡೌನ್‌ನಿಂದ ಶಾಲೆ ಬಂದ್ ಆಗಿತು. ಕೆಲ ದಿನಗಳ ನಂತರ ನನ್ನ ಕುಟುಂಬಕ್ಕೆ ಅರ್ಧ ಹೊಟ್ಟೆಗೆ ಹಿಟ್ಟು ಕೊಡಲು ಸಾದ್ಯ ವಾಗಲಿಲ್ಲಾ. ಖಾಸಗಿಯಾಗಿ ಕರಟೆ ತರಬೇತಿ ನೀಡಲೂ ಸಾದ್ಯವಾಗಲಿಲ್ಲಾ. ಆದ್ದರಿಂದಲೇ ಆಂದ್ರ ಪ್ರದೇಶದ ರಾಜ್ಯದಲ್ಲಿ ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಿದ್ದೇನೆ.”
-ಗಂಗಪ್ಪ ಲಮಾಣಿ,
ರಾಷ್ಟ್ರೀಯ ಕರಾಟೆ ಕ್ರೀಡಾಪಟು ಹಾಗೂ ತರಬೇತುದಾರ.
Be the first to comment