ಕೋಲಿ ಸಮಾಜದ ತಾಲ್ಲೂಕ ಅಧ್ಯಕ್ಷರಾಗಿ ಭಂಡಾರೇಪ್ಪ ನಾಟೀಕಾರ ಹಾಗೂ ನಗರ ಘಟಕ ಅಧ್ಯಕ್ಷರಾಗಿ ಪಾರಪ್ಪ ಗುತ್ತೆದಾರ ಆಯ್ಕೆ

ವರದಿ:-ರಾಘವೇಂದ್ರ ಮಾಸ್ತರ ಸುರಪುರ

ಸುರಪುರ:- ಸುರಪುರ ನಗರದ ಬೋಯಿಗಲ್ಲಿಯ ರತ್ನಮ್ಮ ದೇವಸ್ಥಾನದಲ್ಲಿ ರವಿವಾರದಂದು ತಾಲೂಕು ಟೋಕರೆ ಕೋಳಿ ಕಬ್ಬಲಿಗ ಸಮಾಜದ ಸಭೆ ಕರೆಯಲಾಗಿತ್ತು . ಸಭೆಯಲ್ಲಿ ಟೋಕರೆ ಕೋಳಿ ಕಬ್ಬಲಿಗ ಸಮಾಜದ ತಾಲೂಕು ಘಟಕದ ಅಧ್ಯಕ್ಷರಾಗಿ ಭಂಡಾರೆಪ್ಪ ನಾಟೇಕರ್ ಹಾಗೂ ನಗರ ಘಟಕ ಅಧ್ಯಕ್ಷರಾಗಿ ಪಾರಪ್ಪ ಗುತ್ತೇದಾರ ಅವರನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು . ನೂತನ ಅಧ್ಯಕ್ಷ ಭಂಡಾರೆ ಸುರಪುರ ನಾಟೇಕಾರ ಮಾತನಾಡಿ , ಟೋಕರೆ ಕೋಳಿ ಕಬ್ಬಲಿಗ ಸಮಾಜವು ಶೈಕ್ಷಣಿಕ , ಆರ್ಥಿಕ ಹಾಗೂ ಸಾಮಾಜಿಕವಾಗಿ ಸಾಕಷ್ಟು ಹಿಂದುಳಿದಿದ್ದು ಸಮಾಜದ ಅನೇಕ ಬೇಡಿಕೆಗಳು ಹಾಗೂ ಸರಕಾರದಿಂದ ದೊರೆಯಬೇಕಾದ ಸವಲ್ಲತುಗಳನ್ನು ದೊರಕಿಸಿಕೊಡುವುದು ಸೇರಿದಂತೆ ಒಟ್ಟಾರೆ ಸಮಾಜದ ಅಭಿವೃದ್ಧಿಗೆ ಹಿರಿಯರ ಮಾರ್ಗದರ್ಶನ ಹಾಗೂ ಯುವಕರ ಸಹಕಾರದೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು ನಗರಘಟಕದ ನೂತನ ಅಧ್ಯಕ್ಷ ಪಾರಪ್ಪ ಗುತ್ತೇದಾರ ಮಾತನಾಡಿ ನನಗೆ ನೀಡಿದ ಜವಾಬ್ದಾರಿಯನ್ನು ನಿಮ್ಮ ಸಹಕಾರದೊಂದಿಗೆ ಮಾಡುತ್ತೆನೆ ಸಮಾಜ ಅಭಿವೃದ್ಧಿಯೇ ನನ್ನ ಗುರಿ ಎಂದು ಹೇಳಿದರು.

  ಸಮಾಜದ ಮುಖಂಡರಾದ ಮಾನಪ್ಪ ಸೂಗುರು , ದೇವಿಂದ್ರಪ್ಪ ತಳವಾರ ನ್ಯಾಯವಾದಿಗಳು , ವಿಶ್ವಾಮಿತ್ರ ಕಟ್ಟಿಮನಿ ನ್ಯಾಯವಾದಿಗಳು ಸಭೆಯಲ್ಲಿ ಮಾತನಾಡಿದರು . ಸಮಾಜದ ಮಾಜಿ ಅಧ್ಯಕ್ಷರಾದ ಯಂಕಣ್ಣ ಕಟ್ಟಿಮನಿ , ಶಿವಣ್ಣ ಕಟ್ಟಿಮನಿ , ನಗರಸಭೆ ಸದಸ್ಯ ಮಾನಪ್ಪ ಚಳ್ಳಿಗಿಡ , ಗ್ರಾ.ಪಂ. ಸದಸ್ಯ ದೊಡ್ಡಪ್ಪ ಮುದ್ದೂರು , ಗ್ರಾ.ಪಂ ಮಾಜಿ ಸದಸ್ಯ ವೆಂಕಟೇಶ ಕವಡಿಮಟ್ಟಿ ಮುಖಂಡರಾದ ಮರೆಪ್ಪ ದಾಯಿ , ಜಟ್ಟೆಪ್ಪ ವಾರಿ , ವೆಂಕಟೇಶ ಚಟ್ನಳ್ಳಿ , ಶಾಂತಪ್ಪ ಕಕ್ಕೇರಿ , ಮೌನೇಶ ತಿಂಥಿಣಿ , ಭೈರಣ್ಣ ತಿಂಥಿಣಿ , ವೆಂಕಟರೆಡ್ಡಿ , ಅಯ್ಯಣ್ಣ ತಾಲ್ಲೂಕಿನ ಅನೇಕ ಯುವಕರು ಹಾಜರಿದ್ದರು

Be the first to comment

Leave a Reply

Your email address will not be published.


*