ಜಿಲ್ಲಾ ಸುದ್ದಿಗಳು
ಬಾಗಲಕೋಟೆ:
ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾದರಿ ಪ್ರಾಥಮಿಕ ಶಾಲೆಯ ಎರಡು ಕಟ್ಟಡಗಳು ಸೇರಿದಂತೆ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಸಮುದಾಯಭವನ ಕಟ್ಟಡದ ಭೂಮಿ ಪೂಜೆ ಕಾರ್ಯ ನೆರವೇರಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡಗಳು ಬಹಳಷ್ಟು ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡ ಗ್ರಾಮದ ಹಿರಿಯರು ಶಾಸಕರಲ್ಲಿ ಮನವಿ ಮಾಡಿಕೊಂಡಾಗ ಮಕ್ಕಳ ಕಲಿಕೆಗೆ ಒಳ್ಳೆಯ ವಾತಾವರಣ ಪರಿಸರ ಅಗತ್ಯತೆಯನ್ನು ಮನಗಂಡ ಶಾಸಕರು ಏನು ವಿಚಾರಿಸದೆ ಕೆಲೂರ ಗ್ರಾಮಕ್ಕೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಪ ವಿಭಾಗ ಹುನಗುಂದ ಇವರ ಯವತಿಯಿಂದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಎರಡು ಕೋಣೆಗಳ ಕಟ್ಟಡವನ್ನು ಮಂಜೂರು ಮಾಡಿದ್ದು ಕಟ್ಟಡ ನಿರ್ಮಾಣದ ಭೂಮಿ ಪೂಜೆಯನ್ನು ಶಾಸಕರು ನೆರವೇರಿಸಿದರು.
ಗ್ರಾಮದಲ್ಲಿ ಬಸ್ ನಿಲ್ದಾನ ಹತ್ತಿರ ಇರುವ ಎಸ್.ಸಿ.ಕಾಲೋನಿಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಯೋಜನೆಯಡಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಭೂಮಿ ಪೂಜೆ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕರು,ಪಿ.ಕೆ.ಪಿ.ಎಸ್ ಅಧ್ಯಕ್ಷರಾದ ಬಸವರಾಜ ನಾಡಗೌಡರ,ಗ್ರಾಮದ ಹಿರಿಯರು ಬಾಳಾಸಾಹೇಬ ನಾಡಗೌಡರ, ಅಪ್ಪಾಸಾಹೇಬ ನಾಡಗೌಡರ,ನಿವೃತ್ತ ಶಿಕ್ಷಕರು ಎಸ್.ಎಮ್.ಬೆಲ್ಲದ, ವಜಿರಪ್ಪ ಪೂಜಾರ,ಸಂಗಣ್ಣ ನಾಡಗೌಡರ, ಮೈಲಾರಪ್ಪ ಆಸಂಗಿ,ಉಮೇಶ ಹೂಗಾರ, ಬಸಲಿಂಗಪ್ಪ ಕೋಟಿ, ಹುಲ್ಲಪ್ಪ ವಡ್ಡರ,ಗಿರಿಯಪ್ಪ ದೇವಸಂಗಿ,ಬಸಪ್ಪ ಕುಂಚಗನೂರ,ಮಾಸಪ್ಪ ಕಬ್ಬರಗಿ,ಕರಿಯಪ್ಪ ತೋಟಗೇರ,ಗ್ರಾಮ ಪಂಚಾಯತ ಅಭಿವೃದ್ಧಿ ಅದಿಕಾರಿಗಳಾದ ಪಿ.ಬಿ.ಮುಳ್ಳೂರ,ಶಾಲೆಯ ಸಿಬ್ಬಂದಿವರ್ಗ, ಸಮಾಜದ ಮುಖಂಡರು ಮತ್ತು ಗ್ರಾಮದ ಇತರರು ಉಪಸ್ಥಿತರಿದ್ದರು.
Be the first to comment