ಬಡತನದ ಮಧ್ಯೆ ವಿದ್ಯಾರ್ಥಿ ಅಮರೇಶ್ ಆನಂದಗಲ್ ಸಾಧನೆ

ವರದಿ:ಬಸವರಾಜ್ ಬಿರಾದಾರ್ ಲಿಂಗಸಗೂರ

ಲಿಂಗಸಗೂರು:ನಾರಾಯಣಪುರ ನಗರದಲ್ಲಿ ತೀರಾ ಕಡುಬಡತನದಲ್ಲಿ ಬೆಳೆದ ವಿದ್ಯಾರ್ಥಿ ಅಮರೇಶ್ ತಂದೆ ಮಹೇಶ್ ಆನಂದಗಲ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ625 ಕ್ಕೇ 588 ಶೇ.94/33 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾನೆ

ತಂದೆ ತೀರಿಹೋದ ನಂತರ ನನ್ನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಅಜ್ಜಿ ಗಂಗಮ್ಮ ಚಿಕ್ಕಪ್ಪಜಗದೀಶ್ ಆನಂದಗಲ್ ತಾಯಿ ಕೂಡ ಬಾಳೆಹಣ್ಣಿನ ವ್ಯಾಪಾರವನ್ನು ಮಾಡಿಕೊಂಡು ನನ್ನ ಓದಿಗೆ ಸಹಕಾರ ಮತ್ತು ಸ್ಪೂರ್ತಿಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಾಧಕ ಅಮರೇಶ ನನ್ನನ್ನು ಮಾತನಾಡಿಸಿದಾಗ ನನ್ನ ಕುಟುಂಬ ಬಡತನದಲ್ಲಿ ನನ್ನನ್ನು ಓದಿಸುತ್ತಿರುವುದರಿಂದ ನನಗೆ ಈ ಸಾಧನೆ ಮಾಡಲು ಚಲ ತುಂಬಿತು.ಜೊತೆಗೆ ಸತತ ಪ್ರಯತ್ನ ದಿನಾಲು 6ರಿಂದ 8 ಗಂಟೆ ಅಭ್ಯಾಸವನ್ನು ಮಾಡುತ್ತಿದ್ದೆ ಹಾಗೂ ಗುರುಗಳ ಮಾರ್ಗದರ್ಶನದಿಂದ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಾಯಿತು ಎಂದು ತಿಳಿಸಿದ

ಮುಂದೆ ವೈದ್ಯನಾಗುವ ಕನಸು ಇದೆ ಈ ದಿಸೆಯಲ್ಲಿ ನಾನು ಹೆಚ್ಚಿನ ಪ್ರಯತ್ನವನ್ನು ಮಾಡಿ ಬಡತನದ ಕುಟುಂಬಗಳಿಗೆ ವೈದ್ಯನಾಗಿ ಸೇವೆ ಸಲ್ಲಿಸುವ ಮನೋಭಾವನೆಯನ್ನು ಬಂದಿದ್ದೇನೆ ಎಂದು ತನ್ನ ಮನದಾಳದ ಮಾತುಗಳನ್ನು ತಿಳಿಸಿದನು.

ಈ ಸಂದರ್ಭದಲ್ಲಿ ಕುಟುಂಬದಲ್ಲಿನ ಸದಸ್ಯರಾದ ಅಜ್ಜಿ ಗಂಗಮ್ಮ ಚಿಕ್ಕಪ್ಪ ಜಗದೀಶ್ ತಾಯಿ ಈರಮ್ಮ.ಅಂಬಿಕಾ . ಅಂಬರೀಷ್ ಕಮನಕೆರೆ .ರಮೇಶ್ ಕೋಳೂರ. ಶಿವು ಬಿರಾದಾರ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*