ಮೀನುಗಾರ ಉದ್ಯಮದಲ್ಲಿ ಮಿನುಗುವ ತಾರೆ ಮಾಲತಿ ಬಿ ಮೆಂಡನ್

ಉಡುಪಿ ನಗರದ, ಮಲ್ಪೆಯ ಸುಪ್ರಸಿದ್ಧ ಬಹುಕೋಟಿ ವಹಿವಾಟಿನ ಲವೀನ_ಮೀನಿನ ಮಸಾಲ ಉದ್ಯಮದ ಯಶಸ್ವಿ ಮಹಿಳಾ ಉದ್ಯಮಿ ಮಿನುಗಾರ ಸಮಾಜದ ಮೊಗವೀರ ಪಂಗಡದ ಮಾಲತಿ_B_ಮೆಂಡನ್ ಅವರ ಪ್ರೇರಣದಾಯಕ ಯಶೋಗಾಥೆ.

ಮೀನಿನ ಖಾದ್ಯಗಳು ಸ್ವಾದಿಷ್ಟವಾಗಬೇಕಾದರೆ,
ಅದಕ್ಕೆ ಹಾಕುವ ಮಸಾಲೆಗಳು ಬಹುಮುಖ್ಯ ಪಾತ್ರವಹಿಸುತ್ತವೆ.
ಅದರೆ 1996 ರಲ್ಲಿ ಅ ರೀತಿಯ ಉತ್ಕೃಷ್ಟ ಗುಣಮಟ್ಟದ ಸ್ವಾದಭರಿಸುವ ಮಸಾಲೆಗಳು ಮನೆಗಳಿಗೆ ಮಾತ್ರ ಸೀಮಿತವಾಗಿತ್ತು.
ಜಾಗತಿಕರಣದ ಪರಿಣಾಮ ಭಾರತ ಜೀವನ ಕ್ರಮ ಅಮೂಲಾಗ್ರವಾಗಿ ಬದಲಾವಣೆ ಆಯಿತು,
ಕರ್ನಾಟಕದ ಕರಾವಳಿಯಲ್ಲಿ ಕೂಡ ಆ ಬದಲಾವಣೆ ಕ್ರಮೇಣವಾಗಿ ಕಂಡುಬಂದಿತ್ತು.
ಮನೆಗಳಲ್ಲಿ ಸ್ವಂತ ಮಸಾಲೆ ತಯಾರಿಕೆ ಕ್ರಮೇಣ ಕಡಿಮೆ ಆಯಿತು ಕೂಡ.
ಕರಾವಳಿ ಶೈಲಿಯ ಗುಣಮಟ್ಟದ ಮೀನಿನ ಮಸಾಲೆ ಪದಾರ್ಥಕ್ಕಾಗಿ ಜನರ ಬೇಡಿಕೆ ಶುರುವಾಯಿತು,
ಈ ವಿಚಾರವು
ಅತ್ಯುತ್ತಮ ಮೀನಿನ ಮಸಾಲೆ ತಯಾರಕರಾದ
ಮಾಲತಿ B ಮೆಂಡನ್ ಅವರ ಗಮನಕ್ಕು ಬಂದಿತ್ತು
ಶುರುವಿನಲ್ಲಿ ಕೇವಲ ಸ್ನೇಹಿತರು, ಬಂಧುಗಳಿಗಾಗಿ ಮಾತ್ರ ಮೀನಿನ ಮಸಾಲೆ ತಯಾರಿಸಿ ಮಾರಾಟ ಮಾಡುತ್ತಿದ್ದ ಮಾಲತಿ B ಮೆಂಡನ್ ಅವರು
ಬೇಡಿಕೆ ಹೆಚ್ಚಿದಂತೆಲ್ಲ ಮೀನಿನ ಮಸಾಲ ತಯಾರಿಸಲು ಉದ್ಯಮ ಸ್ವರೂಪ ನೀಡಲು ತಿರ್ಮಾನಿಸಿದರು,
ಶುರುವಿನಲ್ಲಿ ಪ್ರತಿದಿನ 250 ಗ್ರಾಮ್ ಲೆಕ್ಕದಲ್ಲಿ ‌ಮೀನಿನ ಮಸಾಲೆ ತಯಾರಿಸುತ್ತಿದ್ದ ಅವರು
ದಿನ ಕಳದಂತೆಲ್ಲ ಅದನ್ನು 100 kg ಪ್ರಮಾಣಕ್ಕೆ ಹೆಚ್ಚಿಸಿಕೊಂಡರು #ಲವೀನ_ಮಸಾಲ ಹೆಸರಿನ ಬ್ರ್ಯಾಂಡ್ ಮೂಲಕ ವಹಿವಾಟು ನಡೆಸಿದರು.
ಮೊದಲಾದರೆ ಕುಟುಂಬಸ್ತರೆ ಎಲ್ಲಾ ರೀತಿಯ ಮೀನಿನ ಮಸಾಲೆ ತಯಾರಿಸುತ್ತಿದ್ದರು ಬೇಡಿಕೆ ಅನುಗುಣವಾಗಿ
ತಮ್ಮ ಉದ್ಯಮಕ್ಕೆ
ಹತ್ತಾರು ಕಾರ್ಮಿಕರನ್ನು ನೇಮಕ ಮಾಡಿಕೊಂಡರು,
ಮೊದಲು ರಬ್ಬುವ ಕಲ್ಲಿನಲ್ಲಿ ‌ಮಸಾಲೆ ತಯಾರಾಗುತ್ತಿತ್ತು
ಈಗ ಅತ್ಯುತ್ತಮ ಗುಣಮಟ್ಟದ ಹತ್ತಾರು ಬೃಹತ್ ಗ್ರೈಂಡರುಗಳ ಮೂಲಕ ಮಸಾಲೆ ತಯಾರಾಗುತ್ತಿದೆ.
ಅಧುನಿಕ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ
ವಿನೂತನ ಶೈಲಿಯ ಅಂತಾರಾಷ್ಟ್ರೀಯ ಗುಣಮಟ್ಟದ ಪ್ಯಾಕೇಜಿಂಗ್ ಮೂಲಕ ಮೀನಿನ ‌ಮಸಾಲೆ ಪದಾರ್ಥಗಳು ಮಾರಾಟವಾಗುತ್ತಿದೆ.
ಪ್ರಸ್ತುತ ಪ್ರತಿದಿನ 500 kg ಯಿಂದ 1000 Kg
ಮೀನಿನ ಮಸಾಲೆ ತಯಾರು ಆಗುತ್ತಿದ್ದು,
ಮೀನಿನ ಮಸಾಲೆ ಜೊತೆಗೆ
ಚಿಕನ್ ಪೌಡರ್, ಸಿಗಡಿ ಮಸಾಲೆ, ಪ್ರೈ ಮಸಾಲೆ,
ಪುಲಿಮುಂಚಿ ಮಸಾಲೆಯನ್ನು ತಯಾರಿಸುತ್ತಿದ್ದರೆ,
ವಾರ್ಷಿಕವಾಗಿ ಬಹುಕೋಟಿ ರೂಪಾಯಿಗಳಿಗೆ ವ್ಯಾಪಾರ, ವಹಿವಾಟು ತಲುಪಿದ್ದು,
ವಿದೇಶಗಳಿಗು ವ್ಯಾಪಾರ ವಿಸ್ತರಣೆ ಆಗಿದೆ
ನ್ಯೂಜಿಲೆಂಡ್, ಸಿಂಗಾಪುರ್, ದುಬೈ, ಮಸ್ಕತ್
ಗಳಿಗು ಲವೀನ ಮೀನಿನ ‌ಮಸಾಲೆ ರಪ್ತು ಆಗುತ್ತಿದೆ
ಅಂತಾರಾಷ್ಟ್ರೀಯ ಮಾನ್ಯತೆ ‌ಕೂಡ ಪಡೆದಿದೆ.
ಜಗತ್ಪ್ರಸಿದ್ಧ ಆನ್ಲೈನ್ ಸಂಸ್ಥೆಗಳಾದ ಪ್ಲೀಪ್ ಕಾರ್ಟ್ ( flipkart) ಅಮೆಜಾನ್ ( amazon)
ಗಳಲ್ಲು ಲವೀನಾ ಮೀನಿನ ಮಸಾಲೆ ಲಭ್ಯವಿದ್ದು
ಮಾರ್ಕೆಟಿಂಗ್ ವಿಭಾಗದಲ್ಲೂ ಯಶಸ್ವಿಯಾಗಿದ್ದಾರೆ.
ಮಾಲತಿ B ಮೆಂಡನ್ ಅವರ ಉದ್ಯಮ ಸಾಹಸದಲ್ಲಿ
ಅವರ ಪತಿ ಬಾಲಕೃಷ್ಣ ಮೆಂಡನ್ ಹಾಗೂ ಅವರ ಸುಪುತ್ರ ಲವೀನ ಮೆಂಡನ್ ಅವರು ಸದಾ ಬೆಂಬಲ ಪ್ರೋತ್ಸಾಹ ನೀಡಿ ಜೊತೆಗೆ ನಿಂತಿದ್ದಾರೆ,
ಅವರ ಅದರ್ಶ ಸದಾ ಪ್ರೇರಣದಾಯಕವಾಗಿದೆ.
ಸುಪ್ರಸಿದ್ಧ, ಯಶಸ್ವಿ, ಬಹುಕೋಟಿ ವಹಿವಾಟಿನ ಲವೀನ ಮಸಾಲ ಉದ್ಯಮದ ಮಾಲಿಕರಾದ ಮಾಲತಿ B ಮೆಂಡನ್ ಅವರಿಗೆ ಸಮಸ್ತ ಮಿನುಗಾರರವತಿಯಿಂದ ಅಭಿನಂದನೆಗಳು, ಶುಭ ಹಾರೈಕೆಗಳು.

Be the first to comment

Leave a Reply

Your email address will not be published.


*