ಉಪ ಕಾಲುವೆಗಳಲ್ಲಿ ಕಳಪೆ ಕಾಮಗಾರಿ ರೈತರ ಆಕ್ರೋಶ

ವರದಿ.. ಬಸವರಾಜ್ ಬಿರಾದಾರ್  ಲಿಂಗಸ್ಗೂರು

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೋಡಲಬಂಡಾ ಕ್ಯಾಂಪ್ KBJNL ಇಲಾಖೆಯ ವ್ಯಾಪ್ತಿಗೆ ಒಳಪಡುವ ಚಿತ್ತಾಪುರ್ ಗ್ರಾಮ ಹಾಗೂ ಬೆಂಡೋಣಿ ಗ್ರಾಮದ ಡಿ 4 ಉಪ ಕಾಲುವೆಗಳಲ್ಲಿ ಮಣ್ಣು ಹಾಕುವ ಕಾಮಗಾರಿ ನಡೆದಿದ್ದು ಈ ಕಾಮಗಾರಿಯು ತುಂಬಾ ಕಳಪೆ ಗುಣಮಟ್ಟದಿಂದ ಕಾಮಗಾರಿಯು ಕೂಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು

ಸುಮಾರು ಉಪ ಕಾಲುವೆಗಳಲ್ಲಿ ಕಾಮಗಾರಿ ನಡೆದಿದ್ದು ಎಲ್ಲಾ ಉಪ ಕಾಲುವೆಗಳ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದ್ದು ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರು ಸಮೀಪ ಸುಳಿದಿಲ್ಲ ಕಾಮಗಾರಿಯ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ ಜೊತೆಗೆ ಸಂಬಂಧಪಟ್ಟ KBJNL ಅಧಿಕಾರಿಗಳು ಸಹ ಕಾಮಗಾರಿ ವೀಕ್ಷಿಸಲು ಅಂದಾಜು ಪತ್ರಿಕೆಯ ಪ್ರಕಾರ ಕಾಮಗಾರಿಯನ್ನು ನೋಡದೆ ಸುಖಾಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ

ಹಲವಾರು ರೈತರ ಹೊಲಗದ್ದೆಗಳಿಗೆ ಹೋಗುವ ರಸ್ತೆ ಇದಾಗಿದ್ದು ರೈತರು ಈ ಕಾಮಗಾರಿಯ ಬಗ್ಗೆ ತುಂಬಾ ಅಸಮಾಧಾನವನ್ನು ವ್ಯಕ್ತಪಡಿಸಿದರು

ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ ಮಳೆಯಾದರೆ ಕೆಸರುಗದ್ದೆ ಅಂತೆ ರಸ್ತೆ ಆಗುತ್ತಿದೆ ಕಾಮಗಾರಿಯು ಒಟ್ಟಾರೆಯಾಗಿ ಅಂದಾಜು ಪತ್ರಿಕೆಯ ಪ್ರಕಾರ ನಡೆಯುತ್ತಿಲ್ಲ ಈ ಕಾಮಗಾರಿಯ ಬಗ್ಗೆ ಯಾರನ್ನಾದರೂ ಕೇಳಬೇಕೆಂದರೆ ಇಲ್ಲಿ ಯಾವ ಗುತ್ತೇದಾರ್ ಅನ್ನು ಸಹ ಮತ್ತು ಯಾವ ಅಧಿಕಾರಿಗಳು ಸುಳಿಯುತ್ತಿಲ್ಲ ಇದರಿಂದ ನಮ್ಮ ಹೋಗಲು ವಾಹನಗಳೇ ಪರದಾಡುತ್ತಿವೆ ನಾವೆಲ್ಲಿ ಹೋಗುವುದು ಎಂದು ಚಿತ್ತಾಪುರ್ ಗ್ರಾಮದ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು

ಈ ಕಾಮಗಾರಿಯನ್ನು ಪರಿಶೀಲನೆ ಮಾಡಿ ಸೂಕ್ತವಾಗಿ ಸಂಪೂರ್ಣವಾಗಿ ಅಂದಾಜು ಪತ್ರಿಕೆ ಪ್ರಕಾರ ಕಾಮಗಾರಿ ನಡೆಯದಿದ್ದರೆ ಎಲ್ಲಾ ಹೊಲಗಳ ರೈತರು ಸಂಪೂರ್ಣ ಕಾಮಗಾರಿಯನ್ನು ನಿಲ್ಲಿಸಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದರುಇನ್ನಾದರೂ ಅಧಿಕಾರಿಗಳು ಸಂಬಂಧಪಟ್ಟ ಗುತ್ತಿಗೆದಾರರು ಈ ಕಡೆ ಸುರಿಯುವವರು ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು

Be the first to comment

Leave a Reply

Your email address will not be published.


*