. ಅಭಿನಂದನಾ ವರದಿ
ಹೌದು ಸರ್ಕಾರದ ಹಲವಾರು ಇಲಾಖೆಗಳ ಅಧಿಕಾರಿಗಳು ಹಲವಾರು ಕ್ಲಿಷ್ಟ ಪರಿಸ್ಥಿತಿಯಲ್ಲಿ ತನ್ನ ಜೀವನದ ಹಂಗನ್ನು ತೊರೆದು ಕೆಲಸ ಮಾಡಿ ಅವರ ಸಾಧನೆಗಳು ಅಮರವಾಗಿವೆ. ಇಂತಹವರ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಬೆಳಗಾವಿ ನಗರ ಕಮಿಷನರ್ ಪೊಲೀಸ್ ವಿಭಾಗದ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ cpi ಆಗಿ ಸವಾಲುಗಳ ನಡುವೆಯೂ ಯಶಸ್ವಿಯಾಗಿ ಪೂರೈಸಿ ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣಾ ವೃತ್ತಕ್ಕೆ ವರ್ಗಾವಣೆ ಯಾಗಿರುವ ಶ್ರೀ ನಾಗರಾಜು ಅಂಬಿಗೇರ ರವರು ಅವರು ಮೇರು ಸ್ಥಾನದಲ್ಲಿ ನಿಲ್ಲುತ್ತಾರೆ.. ಯಾಕಪ್ಪಾ ಈ ಸ್ಟೋರಿ ಹೇಳ್ತಾ ಇದೀನಿ ಅಂದ್ರೇ.. ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮವು ಕಾಕತಾಳೀಯ ಎಂಬಂತೆ ಕರೋನಾ ವೈರಸ್ ನ ಲಾಕ್ ಡೌನ್ ಸಂದರ್ಭದಲ್ಲಿ ಇಡೀ ದೇಶದಲ್ಲಿ ಮುಖ್ಯ ಕೇಂದ್ರವಾಗಿತ್ತು. ಇಂತಹ ಸಂದರ್ಭದಲ್ಲಿ ಕರೋನಾ ಮಹಾಮಾರಿಯ ಹರಡುವಿಕೆಯನ್ನು ತಡೆಗಟ್ಟಲು ತನ್ನ ಆರೋಗ್ಯ ಹಾಗೂ ಜೀವನದ ಹಂಗನ್ನು ತೊರೆದು ಎದೆಗಾರಿಕೆ ತೋರಿದವರು ಇದೇ ಪೊಲೀಸ್ ಅಧಿಕಾರಿ ಶ್ರೀ ನಾಗರಾಜು ಅಂಬಿಗೇರ ಹಾಗೂ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಸಮಸ್ತ ಪೊಲೀಸ್ ಸಿಬ್ಬಂದಿ ವರ್ಗ. ಜನತೆಯಲ್ಲಿ ಸಾಕಷ್ಟು ಜಾಗೃತಿ ಮೂಡಿಸುವುದರಿಂದ ಹಿಡಿದು ಜನರಿಗೆ ಪ್ರತಿದಿನ ನಿತ್ಯವೂ ಯೋಗ ಕ್ಷೇಮದ ಜೊತೆಗೆ ಒಬ್ಬ ಹಿರಿಯಣ್ಣನಾಗಿ ಸೇವೆ ಸಲ್ಲಿಸಿ ಎಲ್ಲಾ ಇಲಾಖೆಗಳ ಜೊತೆಗೂಡಿ ಈ ಕರೋನಾ ವೈರಸ್ ಮಹಾಮಾರಿಯನ್ನು ನಿಯಂತ್ರಣ ತೆಗೆದುಕೊಂಡು ಬರುವುದರಲ್ಲಿ ಇವರ ಪಾತ್ರ ತುಂಬಾನೇ ಇದೆ. ಇದರ ಜೊತೆಗೆ ತನ್ನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಗೆ ಕಟ್ಟುನಿಟ್ಟಿನ ಕ್ರಮ ಕೈ ಕೊಂಡು ಈ ಭಾಗದ ಸಮಸ್ತ ಜನತೆಯಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಇವರ ಹೆಸರು ಅಚ್ಚಳಿಯದೆ ಇದೆ.
ಜಾಹಿರಾತು
ಇಂತಹ ನಿಷ್ಠಾವಂತ ಅಧಿಕಾರಿಗಳು ಈಗ ತಾನೇ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯ ವೃತ್ತಕ್ಕೆ ವರ್ಗಾವಣೆಯಾಗಿದ್ದಾರೆ. ಇವರ ಯಶಸ್ಸಿನ ಹಾದಿ ಹೀಗೆ ಮುಂದುವರಿಯಲಿ ಎಂದು ಹೇಳುತ್ತಾ ಇವರ ಸೇವೆಗಾಗಿ ಬರುವ ಸಾಲಿನಲ್ಲಿ ಮುಖ್ಯಮಂತ್ರಿ ಪದಕ ಸಿಗುವಂತಾಗಲಿ ಎಂಬುದು ನಮ್ಮ ಪತ್ರಿಕಾ ಸಮೂಹದ ಅಭಿಲಾಷೆ
Be the first to comment