ನಾಲತವಾಡ: ನಗರದ ಸಮೀಪ ವೀರೇಶ ನಗರ ಗ್ರಾಮದಲ್ಲಿ ಕಡುಬಡತನದಲ್ಲಿ ಬೆಳೆದ ವಿಧ್ಯಾರ್ಥಿನಿ ಒಬ್ಬಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ625 ಕ್ಕೆ566(ಶೇ.90.56) ಅಂಕಗಳನ್ನು ಪಡೆದು ಸಾಧನೆ ಮಾಡಿದಾಳೆ.ವೀರೇಶನಗರದ ರೇಣುಕಾ ಕಂಚಗಾರ(ಗೌಂಡಿ) ಸಾಧಕ ವಿದ್ಯಾರ್ಥಿನಿ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುವ ಹುಲಗಪ್ಪ ಮತ್ತು ಮಲ್ಲಮ್ಮ ದಂಪತಿ ಪ್ರತ್ರಿಯಾದ ಈಕೆ ಅನಿವಾರ್ಯ ಕಾರಣದಿಂದ 5ನೇ ತರಗತಿಗೆ ಶಾಲೆ ಬಿಡುವಂತಾಗಿತ್ತು ನಂತರದಲ್ಲಿ ಅತ್ತೆಯ ನೆರವಿನಿಂದ ಶಿಕ್ಷಣ ಮುಂದುವರಿಸಿದ್ದು ಕೂಡೆಕಲ್ಲ ಮುರಾಜಿ ದೇಸಾಯಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾಳೆ ನನ್ನ ಸಾಧನೆಯ ಶ್ರೇಯ ಅತ್ತೆ ಅವರಿಗೆ ಹಾಗೂ ತಂದೆ-ತಾಯಿಗೆ ಸಲ್ಲಬೇಕು ಎನ್ನುತ್ತಾಳೆ ರೇಣುಕಾ ವಿಧ್ಯಾರ್ಥಿನಿ.
Be the first to comment