ರಾಮ ಜನ್ಮಭೂಮಿಯ ಶಿಲಾನ್ಯಾಸದ ಭೂಮಿ ಪೂಜೆ ಯಶಸ್ವಿ ಸಂಕೇತವಾಗಿ ನಗರಗಳಲ್ಲಿರುವ ದೇವಸ್ಥಾನಗಳಿಗೆ ಅಭಿಷೇಕ.

ವರದಿ: ಶರಣಪ್ಪ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:

ಬಾಗಲಕೋಟೆ ಜನಪ್ರಿಯ ಶಾಸಕರಾದ ಡಾ.ವೀರಣ್ಣ ಸಿ ಚರಂತಿಮಠ ಹಾಗೂ ನಗರ ಮಂಡಲ ಅಧ್ಯಕ್ಷರಾದ ಬಸವರಾಜ್ ಅವರಾದಿಯವರ ಸೂಚನೆಯಮೆರೆಗೆ ಅಯೋಧ್ಯ ರಾಮಜನ್ಮ ಭೂಮಿಯ ಶಿಲಾನ್ಯಾಸದ ಭೂಮಿ ಪೂಜೆ ಯಶಸ್ವಿಯ ಸಂಕೇತವಾಗಿ ಇಂದು ಬಾಗಲಕೋಟೆಯ ವಾರ್ಡ ಸಂಖ್ಯೆ30 ರ ಸೆಕ್ಟರ್ ಸಂಖ್ಯೆ:03 ರಲ್ಲಿರುವ ಮಾರುತೇಶ್ವರ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸುವುದರೊಂದಿಗೆ ಸಿಹಿ ಹಂಚಲಾಯಿತು.

ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಯ ಕರ ಪತ್ರ ಹಂಚಿಕೆ.

ಇದೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿರುವ ಈ ಸುಸಂದರ್ಭದಲ್ಲಿ ಮೊದಲ ವರ್ಷದ ಸಾಧನೆಗಳ ಕರಪತ್ರ ವಿತರಣೆಯ ಕಾರ್ಯಕ್ರಮವನ್ನು ಬಾಗಲಕೋಟೆ ನಗರದಲ್ಲಿ ಬೆಳಗಾವಿ ವಿಭಾಗದ ಸಹ ಪ್ರಭಾರಿಯವರಾದ ಬಸವರಾಜ ಯಂಕಂಚಿಯವರಿಂದ ಉದ್ಘಾಟಿಸಲಾಯಿತು. ನಂತರ ಎಲ್ಲ ಕಾರ್ಯಕರ್ತರು ಸೇರಿ ಸಾಧನೆಯ ಕರಪತ್ರಗಳನ್ನು ಮನೆಮನೆಗೆ ಹಂಚಲಾಯಿತು.

ಈ ಸಂದರ್ಭದಲ್ಲಿ ವಾರ್ಡಿನ ನಗರಸಭಾ ಸದಸ್ಯರಾದ ಚನ್ನವೀರಯ್ಯ ಹಿರೇಮಠ,ಪಕ್ಷದ ಕಾರ್ಯಕರ್ತರಾದ ಬಸವರಾಜ ಹೆಳವರ, ಸಂದೀಪ್ ಜಾದವ್, ಶರಣಪ್ಪ ಬಸನಗೌಡರ, ಗದ್ದೆಪ್ಪ ಕಟ್ಟಿಮನಿ, ಅಶೋಕ ಗದ್ದನಕೇರಿ, ರಾಕೇಶ್ ಕರಿಗಾರ, ಮುದಕಪ್ಪ ತುಂಬರಮಟ್ಟಿ, ಆನಂದ ಅಂಬಿಗೇರ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*