ಜಿಲ್ಲಾ ಸುದ್ದಿಗಳು
ಹರಿಹರ:
ಸರ್ಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಎಂದು ಹರಿಹರದ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ವಸತಿ ಗೃಹದಲ್ಲಿ ಸಂಬಂಧಿಸಿದ್ದ ಸಂಬಂಧವಿಲ್ಲದ ಹೊರಗಿನ ವ್ಯಕ್ತಿಗಳು ವಾಸ ಮಾಡುತ್ತಿದ್ದಾರೆ ಎಂದು ರಾಜನಹಳ್ಳಿಯ ಗುಡ್ಡದಯ್ಯ ಗಂಭೀರ ಆರೋಪ ಮಾಡಿದ್ದಾರೆ .
ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಆಳುವಂತಹ ಸರ್ಕಾರಗಳು ಸರ್ಕಾರಿ ಕಚೇರಿಯಲ್ಲಿ ನಿರ್ವಹಿಸುವ ಅಧಿಕಾರಿಗಳಿಗೆ ಎಂದು ವಸತಿ ಗೃಹಗಳನ್ನು ನಿರ್ಮಾಣ ಮಾಡಿದ್ದಾರೆ ಆದರೆ ಈ ಅಧಿಕಾರಿಗಳು ಇಲಾಖೆಯ ಅಧೀನದಲ್ಲಿರುವ ವಸತಿ ಗೃಹದಲ್ಲಿ ವಾಸ ಮಾಡದೆ ಹೊರಗಿನ ವ್ಯಕ್ತಿಗಳಿಗೆ ಬಾಡಿಗೆ ನೀಡಿದ್ದಾರೆ .
ಸರ್ಕಾರಿ ಅಧಿಕಾರಿಗಳು ಬಾಡಿಗೆ ನೀಡಿರುವ ವಸತಿಗೃಹದಲ್ಲಿ ಅನ್ಯ ವ್ಯಕ್ತಿಗಳ ಚಲನವಲನದ ಮಾಹಿತಿ ಪಡೆಯದೆ ಅವರು ಕ್ರಿಮಿನಲ್ ಅಥವಾ ಇತರ ಚಟುವಟಿಕೆಯಲ್ಲಿ ಭಾಗಿಯಾಗಿರಬಹುದೇ ಎಂದು ತಿಳಿಯದೆ ಅವರಿಗೆ ಬಾಡಿಗೆ ನೀಡಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನೆ ಮಾಡಿ ಉತ್ತರ ಕೇಳಿದರೆ ಈ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ .
ಕಳೆದ ಆರು ತಿಂಗಳಿಂದ ಲೋಕೋಪೋಗಿ ಇಲಾಖೆ ಅಧೀನದಲ್ಲಿರುವ ವಸತಿ ಗೃಹಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಅಧಿನಿಯಮದಲ್ಲಿ ಮಾಹಿತಿ ಕೇಳಿದ್ದರೂ ಇದುವರೆಗೂ ಸಮಂಜಸವಾದ ನೀಡಿಲ್ಲ ,ಕೂಡಲೇ ಸಂಬಂಧಿಸಿದ ಮೇಲಧಿಕಾರಿಗಳು ವಸತಿ ಗೃಹದಲ್ಲಿ ವಾಸವಾಗಿರುವವರ ಮಾಹಿತಿಯನ್ನು ಕಲೆ ಹಾಕಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿದರು .
Be the first to comment