ಲಕ್ಷ್ಮಣ ಸವದಿ ಅವರಿಗೆ ನೀಡಿದ ಸೂಕ್ತ ಸ್ಥಾನಮಾನ ಗಾಣಿಗ ಸಮಾಜಕ್ಕೆ ಕೊಡಿಗೆ:ಎಸ್.ಎಂ.ಸಜ್ಜನ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ಶ್ರಮಜೀವಿಗಳು ಎಂದೇ ಖ್ಯೇತಿ ಪಡೆದಿರುವ ಗಾಣಿಗ ಸಮಾಜಕ್ಕೆ ರಾಜ್ಯ ಮುಖಮಂತ್ರಿ ಯಡಿಯೂರಪ್ಪನವರು ಸಂಪುಟದಲ್ಲಿ ಗಾಣಿಗ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯವನ್ನು ನೀಡಿ ಲಕ್ಷ್ಮಣ ಸವದಿ ಅವರಿಗೆ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದು ಹರ್ಷವಾಗಿದೆ ಎಂದು ತಾಳಿಕೋಟಿ ಗಾಣಿಗ ಸಮಾಜದ ತಾಲೂಕಾಧ್ಯಕ್ಷ ಎಸ್.ಎಂ.ಸಜ್ಜನ ಹೇಳಿದ್ದಾರೆ.

ಮಂಗಳವಾ ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸಿ ಎಸ್.ಎಫ್.ಸಿ. ಯೋಜನೆಯಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆಗೆ ಆಗಮಿಸಿದ್ದ ರಾಜ್ಯ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಸಮಾಜದವತಿಯಿಂದ ಹಮ್ಮಿಕೊಳ್ಳಲಾದ ಸನ್ಮಾನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.



ಈಗಾಗಲೇ ತಾಳಿಕೋಟಿ ತಾಲೂಕಿನ ಸಾರಿಗೆ ನೌಕರರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿರುವ ಸವದಿ ಅವರು ಮುದ್ದೇಬಿಹಾಳ ತಾಲೂಕಿನಲ್ಲಿಯೇ ನೂತನ ಆರ್.ಟಿ.ಓ. ಕಛೇರಿ ಪ್ರಾರಂಭಿಸಲಾಗುವ ಬಗ್ಗೆ ತಿಳಿಸಿದ್ದು ಸ್ವಾಗತಾರ್ಹವಾಗಿದೆ. ಇದರಿಂದ ಕೇವಲ ಮುದ್ದೇಬಿಹಾಳ ಮಾತ್ರವಲ್ಲದೇ ತಾಳಿಕೋಟಿ, ಬ.ಬಾಗೇವಾಡಿ ಸೇರಿದಂತೆ ಸುತ್ತಮುತ್ತಲಿನ ತಾಲೂಕಿನ ಬಡ ರೈತರೊಗೂ ಹೆಚ್ಚು ಅನುಕೂಲಕವಾಗುತ್ತದೆ ಎಂದು ಅವರು ಹೇಳಿದರು.

ಮುದ್ದೇಬಿಹಾಳ ತಾಲೂಕಿನ ಗಾಣಿಗ ಸಮಾಜದ ಯುವ ಗಾಣಿಗೆ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕೊಪ್ಪ ಮಾತನಾಡಿ, ಲಕ್ಷ್ಮಣ ಸವದಿ ಅವರು ಹಿಂದಿನಿಂದಲೂ ಪ್ರತಿಷ್ಠಿತೆಯಲ್ಲಿಯೇ ಬಂದಂತಹ ವ್ಯಕ್ತಿಯಾಗಿದ್ದಾರೆ. ಹಿಂದೆ ರಾಜಕೀಯದಲ್ಲಿ ಯಾವುದೇ ಆಸೆ ಇಟ್ಟುಕೊಳ್ಳದೇ ಕೇವಲ ಜನಸಾಮಾನ್ಯರ ಕ್ಷೇಯಾಭಿವೃದ್ಧಿಗಾಗಿ ದುಡಿದ ಸವದಿ ಅವರಿಗೆ ಸದ್ಯದ ಯಡಿಯೂರಪ್ಪನವರು ಸೂಕ್ತ ಸ್ಥಾನವನ್ನು ನೀಡಿದ್ದು ಹೃದಯಪೂರ್ವಕ ಅಭಿನಂದನೆಗಳು ಎಂದು ಹೇಳಿದರು.

ಈ ಸಂದರ್ಭದಲ್ಲಿ  ಸಜ್ಜನ ಸಮಾಜದ ತಾಲೂಕಾಧ್ಯಕ್ಷ ಸಿ.ಪಿ.ಸಜ್ಜನ, ಮುದ್ದೇಬಿಹಾಳ ಗಾಣಿಗ ಸಮಾಜ ತಾಲೂಕಾದ್ಯಕ್ಷ ಪಿ.ಬಿ.ಯಾಳವಾರ, ಬಸವ ಜೋತಿ ಬ್ಯಾಂಕ ಉಪಾಧ್ಯಕ್ಷ ಎಸ್.ಎಸ್.ಕಡಿ, ಸಚಿನ ಕಡಿ, ಪ್ರಶಾಂತ ಸಜ್ಜನ ಸೇರಿದಂತೆ ಕಡಕೋಳ ಹಾಗೂ ಹಾವರಗಿ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*