ರಾಜ್ಯ ಸುದ್ದಿಗಳು
ಬೆಂಗಳೂರು :
ಕೋವಿಡ್-19 ಭೀತಿಯಿಂದಾಗಿ ಈಗಾಗಲೇ ಜುಲೈ 31, 2020ರವರೆಗೆ ಶಾಲೆಗಳನ್ನು ತೆರೆಯದಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ ಮತ್ತೆ ಆಗಸ್ಟ್ 31, 2020ರವರೆಗೆ ರಾಜ್ಯಾದ್ಯಂತ ಶಾಲೆಗಳನ್ನು ತೆರೆಯದಂತೆ ಆದೇಶ ಹೊರಡಿಸಿದೆ.
ಈ ಕುರಿತಂತೆ ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸರ್ಕಾರಿ, ಅನುದಾನಿತ, ಅನುದಾನ ರಹಿತ ಮುಖ್ಯ ಶಿಕ್ಷಕರಿಗೆ ಸುತ್ತೋಲೆ ಹೊರಡಿಸಿರುವಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಕೋವಿಡ್-19 ವೈರಸ್ ಸೋಂಕು ಹರಡುತ್ತಿರುವುದು ಮುಂದುವರೆಯುತ್ತಿರುವ ಹಿನ್ನಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ದಿನಾಂಕ 31-07-2020ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಿರುವಂತೆ ಆದೇಶಿಸಲಾಗಿತ್ತು.ಶಿಕ್ಷಕರಿಗೆ ವರ್ಕ ಫ್ರಂ ಹೋಮ್ ಆದೇಶ ನೀಡಲಾಗಿತ್ತು.ಅದರ ಜೊತೆಗೆ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೂ ಡಿ.ಡಿ.ಚಂದನವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಪಾಠಗಳನ್ನು ಮಕ್ಕಳು ಮತ್ತು ಶಿಕ್ಷಕರು ಗಮನಿಸುವಂತೆ ತಿಳಿಸಲಾಗಿತ್ತು.
ಕೇಂದ್ರ ಸರ್ಕಾರದ ಆದೇಶದಂತೆ ಎಲ್ಲಾ ಶಾಲೆಗಳು, ಕಾಲೇಜುಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ದಿನಾಂಕ 31-08-2020ರವರೆಗೆ ಮುಚ್ಚುವಂತೆ ಆದೇಶಿಸಿರುವ ಹಿನ್ನಲೆಯಲ್ಲಿ, ರಾಜ್ಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳನ್ನು ದಿನಾಂಕ 31-08-2020ರವರೆಗೆ ಮುಚ್ಚಿರತಕ್ಕದ್ದು ಎಂಬುದಾಗಿ ಆದೇಶಿಸಿದ್ದಾರೆ.
ಸದರಿ ಆದೇಶ ಎಲ್ಲರಲ್ಲಿ ಗೊಂದಲ ಸೃಷ್ಠಿಸಿದ್ದು ಆದೇಶದಲ್ಲಿ ಶಿಕ್ಷಕರ ಕಾರ್ಯ ಚಟುವಟಿಕೆಗಳ ಬಗ್ಗೆ ಸ್ಪಷ್ಟತೆ ಇರುವುದಿಲ್ಲ.ಒಂದು ಕಡೆ ಡಿ.ಡಿ.ಚಂದನವಾಹಿನಿಯಲ್ಲಿ ಪ್ರಸಾರವಾಗುವ ಪಾಠಗಳು ದಿನಾಂಕ: 14/08/2020ರ ವರೆಗೆ ಮುಂದುವರೆದಿದ್ದು ಇದರ ಜೊತೆಗೆ ವಿದ್ಯಾಗಮ ಎಂಬ ಯೋಜನೆ ಕೂಡಾ ಇರುತ್ತದೆ.ಒಟ್ಟಾರೆ ಶಿಕ್ಷಕರಲ್ಲಿರುವ ಈ ಗೊಂದಲಕ್ಕೆ ಇನ್ನೆರಡುದಿನಗಳಲ್ಲಿ ತೆರೆ ಬೀಳುವ ಸಾಧ್ಯತೆಗಳಿವೆ.
Be the first to comment