ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳುವಂತೆ ಅಬಕಾರಿ ನಿರೀಕ್ಷಕರಿಗೆ ಜಯ ಕರ್ನಾಟಕ ಸಂಘಟನೆಯಿಂದ ಮನವಿ.

ವರದಿ:ರಾಘವೇಂದ್ರ ಮಾಸ್ತರ

ಜಿಲ್ಲಾ ಸುದ್ದಿಗಳು

ಯಾದಗಿರಿ:

ಸುರಪುರ ಮತ್ತು ಹುಣಸಗಿ ತಾಲೂಕಿನಾದ್ಯಂತ ಅಕ್ರಮವಾಗಿ ಯಾವುದೇ ಭಯವಿಲ್ಲದೆ ಪರವಾನಿಗೆಯೂ ಇಲ್ಲದೆ ರಾಜಾರೋಷವಾಗಿ ಮಧ್ಯ ಮಾರಾಟ ದಂಧೆ ಜೋರಾಗಿ ನಡೆಯುತ್ತಿದ್ದು, ಮುದನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಾದ ಮುದನೂರ (ಕೆ) ಮುದನೂರ (ಬಿ) ಮತ್ತು ರಾಂಪೂರ, ಯಡಿಯಾಪುರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಸರ್ಕಾರದ ಯಾವುದೇ ಆದೇಶವಿರದೆ ಇಲಾಖೆಯ ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಮಧ್ಯ ಮಾರಾಟ ದಂಧೆ ನಡೆಯುತ್ತಿದ್ದು ಅಧಿಕಾರಿಗಳು ಕಂಡು ಕಾಣದಂತೆ ಎಲ್ಲವೂ ಗೊತ್ತಿದ್ದರೂ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ.
ಹಾಗಾಗಿ ಕೂಡಲೇ ಎಚ್ಚೆತ್ತುಕೊಂಡು ಈ ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಜಯ ಕರ್ನಾಟಕ ಸಂಘಟನೆ ಹುಣಸಗಿ ತಾಲೂಕು ಅಧ್ಯಕ್ಷರಾದ ಪ್ರಭುಗೌಡ ಪಾಟೀಲ ಪೋತರಡ್ಡಿ ಸುರಪುರದಲ್ಲಿ ಅಬಕಾರಿ ನಿರೀಕ್ಷಕರಿಗೆ ಬೇಟಿ ಮಾಡಿ ಮನವಿ ಸಲ್ಲಿಸಿದರು .

Be the first to comment

Leave a Reply

Your email address will not be published.


*