ಮಾಲೂರು: ಅಂತರ್ಜಾತಿ ವಿವಾಹ ಮಾಡಿಕೊಂಡಿರುವ ದಂಪತಿಗಳಿಗೆ ಬಾಣಸವಾಡಿ ಪೋಲಿಸ್ ಠಾಣಾ ಸಿಬ್ಬಂಧಿಗಳಿಂದ ತೊಂದರೆಯಾಗುತ್ತಿದ್ದು ಹಾಗೂ ಖಾಸಗಿ ವ್ಯಕ್ತಿಗಳಿಂದ ಜೀವ ಬೆದರಿಕೆ ಇದ್ದು, ಇವರಿಗೆ ರಕ್ಷಣೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಮಾಲೂರು ತಾಲ್ಲೂಕು ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅದ್ಯಕ್ಷ ಸಂದೇಶ್ ಮಾತನಾಡಿ ಬಾಣಸವಾಡಿ ಪೋಲಿಸ್ ಠಾಣಾ ಉಪ ನಿರೀಕ್ಷಕರಾದ ಮುರುಳಿರವರು ವಿನಾಕಾರಣ ಈ ದಂಪತಿಗಳ ಮನೆ ಬಳಿ ಬರುವುದು ತೊಂದರೆ ನೀಡುವುದು ಹಾಗೂ ಕೆಲ ಖಾಸಗಿ ವ್ಯಕ್ತಿಗಳು ಇವರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದು, ಸತೀಶ್ ಹಾಗೂ ಇವರ ಕುಟುಂಬಸ್ಥರಿಗೆ ಏನಾದರು ಸಮಸ್ಯೆ ಆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಅದ್ಯಕ್ಷ ಸಂದೇಶ್, ರಾಜ್ಯ ಸಂಚಾಲಕ ಪಿ.ಎನ್.ದಾಸ್, ರಾಜ್ಯಾದ್ಯಕ್ಷ ಶ್ರೀನಿವಾಸಯ್ಯ, ಕಾರ್ಮೀಕ ಘಟಕ ರಾಜ್ಯಾದ್ಯಕ್ಷ ಮಾಲೂರು ಸುನೀಲ್, ಜಿಲ್ಲಾದ್ಯಕ್ಷ ಕುಪೇಂದ್ರ, ತಾಲ್ಲೂಕು ಅದ್ಯಕ್ಷ ಅರಳೇರಿ ನಾರಾಯಣಸ್ವಾಮಿ, ಉಪಾದ್ಯಕ್ಷ ಟೈಗರ್ ಚಂದ್ರು, ನಗರ ಘಟಕ ಅದ್ಯಕ್ಷ ನಾಗೇಶ್, ತೊರಲಕ್ಕಿ ಶಶಿ, ಹರೀಶ್, ಟೇಕಲ್ ಅದ್ಯಕ್ಷ ಚಲಪತಿ, ಗಂಗಾಧರ್, ಜಾಕ್ಸನ್, ಪ್ರವೀಣ್ ಮನೋಜ್ ಕುಮಾರ್ ಉಪಾಸ್ಥಿತರಿದ್ದರು.
Be the first to comment