ಭಾನುವಾರವೂ ಕೆಲಸ…! ರಾಕಿ ಪತ್ರಗಳನ್ನು ಮುಟ್ಟಿಸಲು ವಿಶೇಷ ಅಭಿಯಾನ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ಸೋಮವಾರ ದೇಶದಾದ್ಯಂತ ಆಚರಿಸುವ ರಾಕಿ ಹಬ್ಬಕ್ಕೆ ಪೂರಕವಾಗಿ ತಾಲ್ಲೂಕಿನ ಅಂಚೆ ನೌಕರರು ಭಾನುವಾರ ರಜೆ ದಿನ ಸಹ ಕೆಲಸ ಮಾಡುವ ಮೂಲಕ ರಾಕಿ ಪತ್ರಗಳನ್ನು ಗ್ರಾಹಕರಿಗೆ ಮುಟ್ಟಿಸುವ ಇಲಾಖೆಯ ‘ಸ್ಪೇಶಲ್ ಡ್ರೈವ್’ ಕೆಲಸಕ್ಕೆ ಸಹಕರಿಸಿದರು.



ನಿನ್ನೆ ಶನಿವಾರ ಬಕ್ರೀದ್ ಹಬ್ಬದ ರಜೆ ಕಾರಣ ಅಲ್ಲಲ್ಲೇ ಉಳಿದಿದ್ದ ರಾಕಿ ಪತ್ರಗಳನ್ನು ಸೇರಿಸಿಕೊಂಡು ಸೋಮವಾರ ದಿನಕ್ಕೆ ಎಲ್ಲರಿಗೂ ಮುಟ್ಟಿಸುವ ಕೆಲಸ ಮಾಡಲಾಯಿತು. ರಾಕಿ ಹಬ್ಬದ ಸಮಯದಲ್ಲಿ ದೇಶದಾದ್ಯಂತ ಸಹೋದರಿಯರು ಬೇರೆ ಬೇರೆ ಊರುಗಳಲ್ಲಿರುವ ತಮ್ಮ ಸಹೋದರರಿಗೆ ಪ್ರೀತಿಯ ದ್ಯೋತಕವಾಗಿ ಕಳಿಸುವ ಪತ್ರಗಳಲ್ಲಿ ವಿಶೇಷ ಭಾವನಾತ್ಮಕತೆ ಇದ್ದು, ಅದನ್ನು ಸಕಾಲದಲ್ಲಿ ಮುಟ್ಟಿಸಿದರೆ ಅಂಚೆ ಇಲಾಖೆಗೆ ಗೌರವ ಬರುತ್ತದೆ ಎಂದು ಮುದ್ದೇಬಿಹಾಳ ಮುಖ್ಯ ಅಂಚೆ ಪೋಸ್ಟ ಮಾಸ್ಟರ್ ಪಿ.ಕೆ.ಜೋಶಿ ಹೇಳಿದರು. ಭಾನುವಾರದ ವಿಶೇಷ ಅಭಿಯಾನದ ಕೆಲಸದಲ್ಲಿ ಅಂಚೆ ಸಹಾಯಕರಾದ ಎಂ.ಎಸ್.ಗಡೇದ, ಶ್ರೀಶೈಲ ಮುದ್ದೇಬಿಹಾಳ, ಶಾಂತು ಬೈಲಗೊಂಡ, ನಾಗರಾಜ, ಅಂಚೆ ಪೇದೆಗಳಾದ ಜಿ.ಬಿ.ಯಾಳವಾರ, ಶಾಂತಣ್ಣ ಗಬ್ಬಸಾವಳಗಿ, ಸುರೇಶ ಹುಲ್ಲೂರ, ಉದಯ ದೊಂಬರ, ಕರಿಯಪ್ಪ ಕುರಿ, ಹಣಮಂತ ಮಾರಲದಿನ್ನಿ, ಬಸವರಾಜ ಕಲಾರಿ ಮತ್ತಿತರರು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*