ಚುನಾವಣೆಯಲ್ಲಿ ಕರ್ತವ್ಯಲೋಪವೆಸೆಗಿದ ಗ್ರೇಡ್-2 ತಹಸೀಲ್ದಾರ ಮೇಲೆ ಕ್ರಮಕ್ಕೆ ಆಗ್ರಹ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ಜು.03:

ಮುದ್ದೇಬಿಹಾಳ ತಾಲೂಕ ಪಂಚಾಯತ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗ್ರೇಡ್-೨ ತಹಸೀಲ್ದಾರ ಅವರು ಅಭ್ಯರ್ಥಿಗಳಿಗೆ ಮೀಸಲಾಯಿತಿ ಪ್ರಮಾಣ ಪತ್ರ ನೀಡುವಲ್ಲಿ ಕರ್ತವ್ಯಲೋಪ ಎಸೆಗಿದ್ದು ಅವರ ಮೇಲೆ ಸೂಕ್ತವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ) ಹಾಗೂ ಕಾಂಗ್ರೆಸ್ ಮುಖಂಡರು ತಹಸೀಲ್ದಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.



ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ನಾಡಗೌಡ, ಕಾಂಗ್ರೇಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ ಲತಾ ಗೂಳಿ ಅವರ ಪತಿ ಈ ವರ್ಷ ತೆರಿಗೆ ಪಾವತಿಯ ಯಾವುದೇ ಕಾರ್ಯ ನಿರ್ವಹಿಲ್ಲ. ಇದರಿಂದ ಅವರ ತೆರಿಗೆ ವಾತಿದಾರರೆಂದು ಹೇಗೆ ಪರಿಗಣಿಸಲಾಯಿತು ಎನ್ನುವುದು ಅಧಿಕಾರಿಗಳಿಗೆ ಕೇಳಬೇಕಾಗಿದೆ. ಇದರ ಬಗ್ಗೆ ದೀರ್ಘ ತನಿಖೆ ನಡೆಸಿ ರಾಜಕೀಯವಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲ ಸರಕಾರಿ ಅಧಿಕಾರಿಗಳಿಗಳ ಮೇಲೂ ಕಾನೂನು ರೀತಿಯಾಗಿ ಕ್ರಮ ಕೈಗೊಂಡು ಸಾರ್ವಜನಿಕ ವಲಯದಲ್ಲಿ ಒಂದು ವಿಶ್ವಾಸದ ವಾತಾವರಣವನ್ನು ಸೃಷ್ಠಿಸುವಂತೆ ಮಾಡಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್ ಮುಖಂಡರು ಗ್ರೇಡ್-೨ ತಹಸೀಲ್ದಾರ ಅವರಿಂದ ನಡೆದ ಲೋಪದ ವಿರುದ್ಧ ಘೋಷಣೆ ಕೂಗಿದರು.



ಈ ಸಂದರ್ಭದಲ್ಲಿ ತಾಲೂಕಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗುರು ತಾರನಾಳ, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ತಾಲುಕಾ ಯುವ ಕಾಂಗ್ರಸ್ ಅಧ್ಯಕ್ಷ ರಫೀಕ ಶೀರೋಳ, ಕಾಂಗ್ರೆಸ್ ಯುವ ಮುಖಂಡ ಶರಣಬಸಪ್ಪ ಚಲವಾದಿ, ಎಸ್.ಸಿ.ಮೋರ್ಚಾ ಅಧ್ಯಕ್ಷ ಅಶೋಕ ಅಜಮನಿ, ಜಿಪಂ ಸದಸ್ಯೆ ಪೇಮಾಬಾಯಿ ಚವ್ಹಾಣ, ಸಂತೋಷ ಚವ್ಹಾಣ ಸೇರಿದಂತೆ ೫೦ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Be the first to comment

Leave a Reply

Your email address will not be published.


*