ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಹುಟ್ಟು ಬಂಗಾರಕ್ಕಿಂತ ಹೊಟ್ಟು ಬಂಡಾರವೇ ಶ್ರೇಷ್ಠ ಎಂಬಂತ ನನಗೆ ದೇವರ ಆರ್ಶಿವಾದವಿದ್ದಕಾರಣವೇ ಇಂದು ವಿಜಯಪುರ ಜಿಲ್ಲಾ ಪಂಚಾಯತ ಅಧ್ಯಕ್ಷಸ್ಥಾನ ದೊರಕಲುಸಾದ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ ಹೇಳಿದರು.
ಅವರು ಮುದ್ದೇಬಿಹಾಳ ತಾಲೂಕಿನ ಹಾಲುಮತದ ಮೂಲ ಗುರುಪೀಠವಾದ ಸರೂರ ಗ್ರಾಮದ ಗುರು ರೇವಣಸಿದ್ದೇಶ್ವರರ ದರ್ಶನ ಪಡೆದು ಹಾಗೂ ಗಚ್ಚಿನಗುಡಿ ಮತ್ತು ಏಳುಗುಡಿಗೆ ಆಗಮಿಸಿ ದೇವಸ್ಥಾಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಸ್ಥಾನಕ್ಕೆ ಯಾವುದೇ ಚ್ಯೂತಿ ಬಾರದಂತೆ ಸಮಗ್ರ ಜಿಲ್ಲಾ ಅಭಿವೃದ್ಧಿಗೆ ಗಮನ ಹರಿಸಲಾಗುವುದು.ಅಭಿವೃದ್ಧಿ ಕಾರ್ಯದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಇನ್ನೂ ಸರೂರ ಗ್ರಾಮದ ದೇವಸ್ಥಾನಗಳಿಗೆ ಜಿಪಂ ವತಿಯಿಂದ ಅಭಿವೃದ್ಧಿಗೆ ಸಹಾಯಮಾಡಲಾಗುವುದು ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಸರೂರ ಗ್ರಾಮಕ್ಕೆ ಬೇಡಿ ನೀಡಿದ ಕಳ್ಳಿಮನಿ ದಂಪತಿಗಳಿಗೆ ಗ್ರಾಮದ ಹಿರಿಯರಾದ ಗ್ರಾಪಂ ಸದಸ್ಯ ಶ್ರೀಶೈಲ ಹೂಗಾರ, ಶ್ರೀಶೈಲ ಗುರುವಿನ, ಮೃತುಂಜಯ ಗುರುವಿನ, ಸಿದ್ದಯ್ಯ ಗುರುವಿನ, ಶಿವಾನಂದ ಬೋರಗಿ, ಸಿದ್ದಪ್ಪ ಮನಗೂಳಿ,ಮಲ್ಲಿಕಾರ್ಜುನ ವಡಗೇರಿ, ಕಾಡಯ್ಯ ಗುರುವಿನ ಸೇರಿದಂತೆ ಕವಡಿಮಟ್ಟಿ, ಶಿರೋಳ,ಕುಂಟೋಜಿ ಗ್ರಾಮದ ಗುರು-ಹಿರಿಯರು ಸನ್ಮಾನಿಸಿ ಗೌರವಿಸಿದರು.
Be the first to comment