ಜಲಪಾತ ವಿಕ್ಷಣೆಗೆ ಹೊದವರು ಇಬ್ಬರು ನೀರುಪಾಲು: ಒಬ್ಬ ಈಜಿ ದಡ ಸೇರಿದರೆ ಮತ್ತೋಬ್ಬ ಅಲ್ಲೇ..!?

ವರದಿ: ಬಸವರಾಜ ಬಿರಾದರ ಲಿಂಗಸ್ಗೂರ

 ರಾಯಚೂರು: ರಾಯಚೂರು ಜಿಲ್ಲೆಯ ಹಟ್ಟಿ ಠಾಣೆಯ ಸರಹದ್ದಿನಲ್ಲಿ ಬರುವ ಗೊಲಪಲ್ಲಿ ಗ್ರಾಮದ ಗುಂಡ್ಲಬಂಡಾ ಜಲಪಾತ ನೋಡಲು ಹೋದ ನಾಲ್ವರಲ್ಲಿ ಇಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ದೇವದುರ್ಗ ತಾಲೂಕಿನ ಮೂಡಲಗುಂಡ ಗ್ರಾಮದ ನಾಲ್ಕು ಜನರಾದ ಕೃಷ್ಣಪ್ಪ, ಧನುಷ್, ಮಹಾಂತೇಶ ಹಾಗೂ ಸಿದ್ದಣ್ಣ ಎಂಬುವವರು ವೀಕ್ಷಣೆಗಾಗಿ ಹೋಗಿದ್ದರು ಎನ್ನಲಾಗಿದೆ. ಅದರಲ್ಲಿ ಅಪ್ಪ ಮಗ ಈ ಸಂದರ್ಭದಲ್ಲಿ ಹಳ್ಳಕ್ಕೆ ಇಳಿದಿದ್ದರಿಂದ ದಿಢೀರನೆ ಹೆಚ್ಚಿನ ನೀರು ಬಂದು ಹಳ್ಳದಲ್ಲಿದ್ದ ಕೃಷ್ಣಪ್ಪ (೩೫ ವರ್ಷ) ಮತ್ತು ಧನುಷ್ (೫ ವರ್ಷ) ಅಪ್ಪ ಮಗ ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.

ಸಿದ್ದಣ್ಣ ಎಂಬುವವರು ತಾವೇ ಈಜಿಕೊಂಡು ದಡ ಸೇರಿದರೆ, ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಟ್ಟಿ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿಗಳು ಸೇರಿ ನಡುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಹಾಂತೇಶ್ ಎಂಬುವವರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವ ಕೃಷ್ಣಪ್ಪ ಮತ್ತು ಧನುಷ್ ಇವರನ್ನು ರಕ್ಷಿಸಲು ಪೊಲೀಸರು ಶೋಧ ಕಾರ್ಯ ನಡೆಸಿ ಶವ ಹೊರತೆಗೆದಿದ್ದಾರೆ. ಮಳೆಗಾಲ ಆರಂಭದ ಈ ಸಂದರ್ಭದಲ್ಲಿ ಪ್ರವಾಸಿಗರು ಯಾವುದೇ ನದಿ, ಹೊಳೆ, ಆಣೆಕಟ್ಟು ನೋಡಲು ಹೋದಾಗ ಆದಷ್ಟು ದೂರದಿಂದ ವೀಕ್ಷಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು ಮನವಿಯನ್ನು ಮಾಡಿದ್ದಾರೆ.

Be the first to comment

Leave a Reply

Your email address will not be published.


*