ಜಿಲ್ಲಾ ಸುದ್ದಿಗಳು
ಬಾಗಲಕೋಟೆ:‘ಅಲಿ’ ಅಂದ್ರೆ ಹಸಿ ಶುಂಠಿ. ಹಸಿ ಶುಂಠಿಯಿಂದ ಮಾಡಿದ ಮಿಶ್ರಣವೇ ಆಲಿಪಾಕ್. ವಿಶೇಷವಾಗಿ ಅಸಿಡಿಟಿ ಮತ್ತು ಹೊಟ್ಟೆ ನೋವಿಗೆ ರಾಮಬಾಣ ಎನ್ನಿಸಿಕೊಂಡಿರುವ ಅಲಿಪಾಕ್, ಅವಲಕ್ಕಿ, ಶೇಂಗಾ, ಹಸಿ ಶುಂಠಿ, ಕೊಬ್ಬರಿ, ಕೋತಂಬರಿ, ಮೆನಸಿನಕಾಯಿ, ಜೀರಿಗೆ ಪುಡಿ, ಇಂಗ್, ಕಪ್ಪು ಉಪ್ಪು, ಬಿಳಿ ಉಪ್ಪು, ಲಿಂಬೆ ರಸಗಳ ಮಿಶ್ರಣ, ಟಿಂಗಿನ ಕಾಯಿಯ ಏಳೆನೀರು ಮಿಶ್ರಿತ್ ‘ಅಲಿಪಾಕ್’.
ಮಳೆಗಾಲ ಬಂತು ಎಂದರೆ ಅಲಿಪಾಕ್ ಬಹು ಬೇಡಿಕೆ,ಒಂದು ಅಲಿಪಿಗೆ 2 ರೂಪಾಯಿಗೆ ಸಿಗುವ ಅಲಿಪಾಕ್ ನೆಗಡಿ, ಕೆಮ್ಮ,ಗಂಟಲುನೋವು ಮತ್ತು ಜ್ವರ ಇದ್ದವರು ತಿನ್ನುವುದು ಸಾಮಾನ್ಯ. ಹಳ್ಳಿಗಳಲ್ಲಿ , ಬಸ್ ನಿಲ್ದಾಣದಲ್ಲಿ ಅಲಿಪಾಕ್ ಮಾರುವವರು ಕಾಣಸಿಗುತ್ತಾರೆ.ಹಸಿ ಶುಂಠಿ, ಬೆಲ್ಲ ಹಾಕಿ ಮಾಡುವ ಈ ಸಿಹಿಪಾಕ ನೆಗಡಿ ಶೀತ ,ಕಪ,ಇದ್ದವರಿಗೆ ಕಡಿಮೆ ಮಾಡಲು ಸಹಾಯಕ. ಖಾರಸಿಹಿ ಆಯುರ್ವೇದಿಕ್ ಗುಣ ಹೊಂದಿರುವ ಈ ಬಡವರ ಸಿಹಿಪಾಕವನ್ನು ಹಳ್ಳಿಗರು ಇನ್ನೂ ಮರತ್ತಿಲ್ಲ.
ಇದರ ತಯಾರಿಕೆ 30 ವರ್ಷಗಳಿಂದ ಮಾಡುತ್ತಾ ರಾಜ್ಯದ ಬೆರಳೆಣಿಕೆಯ ತಯಾರಕಲ್ಲಿ ಒಬ್ಬರಾದ ಬಾಗಕೋಟ ಜಿಲ್ಲೆ ಹುನಗುಂದ ತಾಲ್ಲೂಕಿನ ಶೂಲೇಭಾವಿ ಗ್ರಾಮದ ಕೃಷ್ಣಾ ಬಸವಾ ಒಬ್ಬರು.ಕರೋನ ಸಮಯದಲ್ಲಿ ಈ ಆಯುರ್ವೇದ ಅಲ್ಲಾ, ಬೆಲ್ಲದ ಅಲಿಪಾಕ್ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಸ್ಥಳಿಕರಾದ ಮಲ್ಲಿಕಾರ್ಜುನ ಸಜ್ಜನ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು.
Be the first to comment