ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಜು.23:
ತಾಲೂಕ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿರುವ ಲತಾ ಗೂಳಿ ಅವರು ಚುನಾವಣೆ ಸುತ್ತೊಲೆ ಪ್ರಕಾರವೇ ನಾಮಪತ್ರ ನೀಡಿದ್ದು ಇದಕ್ಕೆ ಸುಖಾಸುಮ್ಮನೆ ವಿರೋಧ ಪಕ್ಷದವರು ತಕರಾರು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ ಸ್ಪಷ್ಠಪಡಿಸಿದ್ದಾರೆ.
ಗುರುವಾರ ಹುಡ್ಕೊ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಲತಾ ಗೂಳಿ ಅವರ ಪತಿ ಪ್ರಥಮ ದರ್ಜೆ ಗುತ್ತಿಗೆದಾರರಿದ್ದಾರೆ. ಅಲ್ಲದೇ ಅವರು ಸರಕಾರದ ನಿಯಮಾನುಸಾರವಾಗಿ ತೆರೆಗಿ ತುಂಬಿದ್ದಾರೆ. ಇಷ್ಟಕ್ಕೆ ಅವರು ಸಾಮಾನ್ಯ ೩ಬಿ ಪ್ರವರ್ಗ ಸೇರುವುದಿಲ್ಲ ಎಂದು ಹೇಳುತ್ತಿರುವುದು ವಿಪರ್ಯಾಸವಾಗಿದೆ. ತೆರೆಗೆ ತುಂಬುವವರು ಚುನಾವಣೆಗೆ ಸ್ಪರ್ಧಿಸಬಾರದೇ. ಅವರು ಅಧ್ಯಕ್ಷರಾಗಲು ಅರ್ಹತೆ ಕಳೆದುಕೊಳ್ಳುತ್ತಾರಾ. ಇದು ಮುರ್ಖತನದ ಪರಮಾವಧಿಯಾಗಿದೆ ಎಂದು ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ನೈತಿಕಮಟ್ಟ ಸಂಪೂರ್ಣವಾಗಿ ಕುಸಿದಿದೆ:
ತಾಲೂಕಾ ಆಡಳಿತದಿಂದ ನೀಡುವ ಜಾತಿ ಪ್ರಮಾಣ ಪತ್ರವನ್ನು ಯಾವ ಅಧಿಕಾರಿ ನೀಡುತ್ತಾರೊ ಅವರು ಅದನ್ನು ರದ್ದುಪಡಿಸುವ ಅಧಿಕಾರವಿರುವುದಿಲ್ಲ. ಪ್ರಮಾನಪತ್ರಕ್ಕೆ ಆಕ್ಷೇಪಣೆ ಬಂದರೆ ಅದನ್ನು ಆಯಾ ಜಿಲ್ಲೆಯ ಕಾಯ್ದೆ ಸೇಕ್ಷೆನ್ ೪ಬಿ ಪ್ರಕಾರ ಮೇಲ್ಮನೆ ಎಂದು ಪರಿಗಣಿಸಿ ಪ್ರಮಾಣ ಪತ್ರವನ್ನು ರದ್ದಿಸುವ ಅಥವಾ ಪುರಸ್ಕರಿಸುವ ಅಧಿಕಾರವನ್ನು ಉಪವಿಭಾಗಾಧಿಕಾರಿಗಳಿಗೆ ಇರುತ್ತದೆ. ಆದರೆ ತಾಲೂಕಿನಲ್ಲಿ ಸ್ಥಳೀಯ ತಾಲೂಕಾ ಆಡಳಿತ ಅಧಿಕಾರಿಗಳೆ ನೋಟಿಸು ಕೊಡುವುದು ಸೇರಿದಂತೆ ಪ್ರಶ್ನೆ ಮಾಡುವುದನ್ನು ಮಾಡಿ ನೀಡಿದ ಜಾತಿ ಪ್ರಮಾಣ ಪತ್ರವನ್ನು ರದ್ದು ಮಾಡಿಸುತ್ತಾರೆ. ಸ್ಥಳೀಯ ಅಧಿಕಾರಿಗಳು ರಾಜಕೀಯ ಕೈಗೊಂಬೆಗಳಂತೆ ನಡೆದುಕೊಳ್ಳುತ್ತಿದ್ದು ನೈತಿಕತೆ ಸಂಪೂರ್ಣ ಕುಸಿದಿದೆ ಎಂದು ಮಾಜಿ ಸಚಿವ ನಾಡಗೌಡ ಆರೋಪಿಸಿದ್ದಾರೆ.
ಕೆಳಮಟ್ಟದ ರಾಜಕಾರಣ ಕೈಬಿಡಿ:
ರಾಜ್ಯದಲ್ಲಿ ಕೇವಲ ಒಂದು ಅಪಾಧನೆಗೆ ರಾಮಕೃಷ್ಣ ಹೆಗಡೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡುವ ಪ್ರಸಂಗಗಳು ಎದುರಾಗಿವೆ. ಆದರೆ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಒಬ್ಬ ರಾಜಕಾರಣಿಯ ಮೊಬೈಲ್ ಟ್ರ್ಯಾಕ್ ಮಾಡಿ ಕದ್ದಾಲಿಕೆ ಮಾಡುತ್ತಿರುವುದು ರಾವಣ ರಾಜಕಾರಣವನ್ನು ಎತ್ತಿತೋರಿಸುತ್ತದೆ. ಆಲೂರ ಕ್ಷೇತ್ರದ ಗೂಳಿ ಅವರ ಮೊಬೈಲ್ ಟ್ರ್ಯಾಕ್ ಮಾಡಿರುವ ಕೆಲವರು ಅವರು ಎಲ್ಲಿಗೆ ಹೋಗಿದ್ದಾರೆ ಮತ್ತು ಅವರು ಯಾರೊಂದಿಗೆ ಮಾತನಾಡಿದ್ದಾರೆ ಎನ್ನುವುದನ್ನು ಕ್ಷಣಕ್ಷಣದ ಪ್ರಸಂಗವನ್ನೂ ವಿರೋಧಿಗಳು ದೂರವಾಣಿ ಮೂಲಕ ಹೇಳುತ್ತಿದ್ದು ಮೊಬೈಲ್ ಕದ್ದಾಲಿಕೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವರು ಹೇಳಿದರು.
Be the first to comment