ಮುದ್ದೇಬಿಹಾಳ ತಾಪಂ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತವಿದೆ: ಶಾಸಕ ನಡಹಳ್ಳಿ. “ರಾಜಕಾರಣ ಅನುಭವಿಗಳು ದಾಖಲೆ ಮೂಲಕ ಆರೋಪಿಸಲಿ”

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ಜು.23:

ಮುದ್ದೇಬಿಹಾಳ ತಾಲೂಕ ಪಂಚಾಯತ ಬಿಜೆಪಿ ಪಕ್ಷದಿಂದ ಅಧಿಕೃತವಾಗಿ ಆಯ್ಕೆಗೊಂಡ ೪ ಜನ ಸದಸ್ಯರ ಹಾಗೂ ಇಬ್ಬರು ಬೇರೆ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಯಾದ ಸದಸ್ಯರಿದ್ದು ಅದರಲ್ಲಿ ಕಾಳಗಿ ಕ್ಷೇತ್ರದ ಲಕ್ಷ್ಮೀಬಾಯಿ ರಾಠೋಡ ಎಂಬ ಮಹಿಳಾ ಅಭ್ಯರ್ಥಿ ಕಾಣಿಯಾಗಿದ್ದು ಇದರ ಬಗ್ಗೆ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಆರೋಪಿಸಿದ್ದಾರೆ.
ಗುರುವಾರ ಪಟ್ಟಣದ ದಾಸೋಹ ನಿಲಯದಲ್ಲಿ ಬಿಜೆಪಿ ಮುಖಂಡರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಣೆಯಾಗಿರುವ ನಮ್ಮ ತಾಪಂ ಸದಸ್ಯೆಯನ್ನು ಹುಡಿಕೊಡಬೇಕು. ಅದರು ತಮ್ಮ ಪಕ್ಷದಿಂದ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ಅವರೊಬ್ಬರು ಮಹಿಳೆಯಾಗಿದ್ದು ಅವರ ರಕ್ಷಣೆಯ ಹೊಣೆ ಹೊತ್ತು ನಮ್ಮ ಮಂಡಲ ಅಧ್ಯಕ್ಷರು ಆತಂಕಗೊಂಡು ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಪೊಲೀಸ ಇಲಾಖೆಯು ನಮ್ಮ ಸದಸ್ಯೆಯನ್ನು ಹುಡುಕಿ ಅವರ ಮೇಲೆ ತಾಪಂ ಅಧ್ಯಕ್ಷಸ್ಥಾನದ ಚುನಾವಣೆಗೆ ಸಂಬಂಧಿಸಿದಂತೆ ಅವರ ಮೇಲೆ ಯಾರಾದರೂ ಒತ್ತಡ ಹಾಗೂ ಮಾನಸಿಕ ಹಿಂಸೆ ನೀಡಿರುವುದರ ಬಗ್ಗೆ ಪರಿಶೀಲಿಸಿ ಅಂತವರನ್ನು ಕಾನೂನು ರೀತಿಯಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.



ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಧ್ಯಕ್ಷರಾಗಲು ಅರ್ಹರಿಲ್ಲಾ:
ಮುದ್ದೇಬಿಹಾಳ ತಾಪಂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಆಲೂರ ಕ್ಷೇತ್ರದ ಸದಸ್ಯೆ ಲತಾ ಗೂಳಿ ಅವರು ಚುನಾವಣೆ ಆಯೋಗ ನಿಗದಿಪಡಿಸಿದ ಮೀಸಲಾಯಿತಿಗೆ ಅರ್ಹರಿಲ್ಲಾ. ಅಭ್ಯರ್ಥಿಯೇ ಸ್ಥಳೀಯ ತಹಸೀಲ್ದಾರ ಅವರಿಗೆ ನೋಟರಿ ಮಾಡಿಕೊಟ್ಟ ಪ್ರಕಾರ ಅವರ ಪತಿ ಅವರು ಪ್ರಥಮ ದೆರ್ಜ ಗುತ್ತಿಗೆದಾರರಾಗಿದ್ದು ತೆರೆಗೆ ಕಟ್ಟುತ್ತಿದ್ದಾರೆ ಎಂದು ತಿಳಿಸಿದ್ದಾರೆ. ೧೯೯೪ ಗೆಜೇಟ್ ಪಾಸ್‌ನಿಯಮಾವಳಿ ಪ್ರಕಾರ ತೆರೆಗೆ ಕಟ್ಟುವರು ಹಾಗೂ ಅವರ ಸಂಬಂಧಿಕರು ತೆರೆಗೆದಾರರಾಗಿದ್ದರೆ ಅವರು ಗ್ರಾಪಂ, ಜಿಪಂ, ತಾಪಂ ಅಧ್ಯಕ್ಷ ಅಥವಾ ಉಪಾಧ್ಯಕ್ಷರಾಗಲು ಅರ್ಹರಲ್ಲಾ ಎಂದು ತಿಳಿಸಿದೆ. ಇದೇ ನಿಯಮಾವಳಿ ಪ್ರಕಾರವೇ ಸ್ಥಳೀಯ ತಾಲೂಕಾ ಆಡಳಿತ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರೆ ಎಂದು ಶಾಸಕ ನಡಹಳ್ಳಿ ಅವರು ಸ್ಪಷ್ಠಪಡಿಸಿದರು.



ರಾಜಕೀಯ ಅನುಭವಿಗಳೆ ಅನಧಿಕೃತ ಆರೋಪಿಸುತಿರುವುದು ಆಶ್ಚರ್ಯಕರವಾಗಿದೆ:
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಕಳೆದ ೩೫ವರ್ಷಗಳಲ್ಲಿ ಮೊದಲ ಬಾರಿಗೆ ನೈತಿಕ ರಾಜಕಾರಣ ಜಾರಿಗೆ ಬಂದಿದ್ದು ಎಲ್ಲರಿಗೂ ತಿಳಿದಿದೆ. ರಾಜಕಾರಣದ ನೈತಿಕತೆವಾಗಿ ನಡೆಸುತ್ತಿರುವುದಕ್ಕೆ ಜನರೇ ಪ್ರಮಾಣಪತ್ರ ನೀಡಬೇಕೇ ಹೊರುತು ನಮ್ಮಷ್ಟಕ್ಕೆ ನಾವೇ ಪ್ರಮಾಣ ಪತ್ರ ಪಡೆಯಬಾರದು. ೫ ವರ್ಷಕ್ಕೊಮ್ಮೆ ಚುನಾವಣೆ ಬಂದೇ ಬರುತ್ತದೆ ಅಂದು ಜನರೇ ತಿರ್ಮಾಣ ಮಾಡುತ್ತಾರೆ. ಆದರೆ ರಾಜಕಾರಣದಲ್ಲಿ ಅನುಭವ ಹೊಂದಿರುವವರು ಯಾವುದೇ ಅಧಿಕೃತ ದಾಖಲೆಗಳಿಲ್ಲದೇ ಆರೋಪಿಸುತ್ತಿರುವುದು ಆಶ್ಚರ್ಯವಾಗಿದೆ. ಕಾಂಗ್ರೇಸ್ ಪಕ್ಷದಿಂದ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವ ಇಂಗಳಗೇರಿಯ ಸದಸ್ಯೆ ಶಿವನಗೌಡ ಮುದ್ದೇಬಿಹಾಳ ಅವರು ಇದೇ ಕ್ಷೇತ್ರದಲ್ಲಿದ್ದಾರೆ. ಆದರೆ ಬಿಜೆಪಿಯಿಂದ ಅಧಿಕೃತವಾಗಿ ಆಯ್ಕೆಯಾಗಿದ್ದ ಲಕ್ಷ್ಮೀಬಾಯ ರಾಠೋಡ ಸದಸ್ಯೆ ಈ ಕ್ಷೇತ್ರದಲ್ಲಿ ಕಾಣಿಸುತ್ತಿಲ್ಲ. ಇದು ಯಾವ ರಾಜಕಾರಣ ಎಂಬುವುದನ್ನು ಅನುಭವಿಗಳು ತಿಳಿಸಬೇಕಿದೆ ಎಂದು ಅವರು ಶಾಸಕ ನಡಹಳ್ಳಿ ಅವರು ಪರೋಕ್ಷವಾಗಿ ವಿರೋಧಿಗಳಿಗೆ ಟೀಕಿಸಿದರು.



ಬಿಜೆಪಿಗೇ ಅಧ್ಯಕ್ಷ ಸ್ಥಾನ ದೊರಕಲಿದೆ:
ಈಗಾಗಲೇ ಕೊರಂ ತುಂಬದ ಕಾರಣ ಚುನಾವಣೆ ಅಧಿಕಾರಿಗಳು ಫಲಿತಾಂಶದ ದಿನಾಂಕವನ್ನು ಮುಂದೊಡಿದ್ದು ಮುಂದಿನ ದಿನಗಳಲ್ಲಿ ಫಲಿತಾಂಶವು ಬಿಜೆಪಿ ಪರವಾಗಿಯೇ ಆಗುತ್ತದೆ ಎಂದು ಶಾಸಕ ನಡಹಳ್ಳಿ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಿಂದ ಹತಾಶೆಗೊಂಡು ಬಿಜೆಪಿಗೆ ಬಂದಿದ್ದೇನೆ: ಶಿವನಗೌಡ ಮುದ್ದೇಬಿಹಾಳ
ಮುದ್ದೇಬಿಹಾಳ ತಾಲೂಕಿನ ಇಂಗಳಗೇರಿ ತಾಪಂ ಕ್ಷೇತ್ರಕ್ಕೆ ನನಗೆ ಕಾಂಗ್ರೆಸ್ ಟಿಕೇಟ್ ಕೊಟ್ಟು ಚುನಾವಣೆಯಲ್ಲಿ ನನ್ನ ಪರವಾಗಿ ಪ್ರಚಾರಕ್ಕೂ ಬರಲ್ಲಿಲ್ಲ. ಕೊಣ್ಣೂರ ಜಿಪಂ ಕ್ಷೇತ್ರದಲ್ಲಿ ಒಟ್ಟೂ ತಾಪಂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳೆ ಆಯ್ಕೆಯಾಗಿದರೂ ನಾನು ನನ್ನ ಸ್ವಯಂ ಶಕ್ತಿಯಿಂದ ಕಾಂಗ್ರೆಸ್‌ದಿಂದ ಚುನಾವಣೆಯಲ್ಲಿ ಗೆಲವು ಸಾಧಿಸಿದೆ. ನಾನು ಗೆದ್ದಮೇಲೂ ಅಂದು ಶಾಸಕರಾಗಿದ್ದ ನಾಡಗೌಡ ಅವರು ನನ್ನ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಕೆಲಸ ಹಾಕಲಿಲ್ಲಾ. ಆದ್ದರಿಂದ ಸದ್ಯಕ್ಕೆ ನಾನು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಇಂಗಳಗೇರಿ ತಾಪಂ ಸದಸ್ಯೆ ಶಿವನಗೌಡ ಮುದ್ದೇಬಿಹಾಳ ಸ್ಪಷ್ಠಪಡಿಸಿದರು.



 

Be the first to comment

Leave a Reply

Your email address will not be published.


*